ಪೈವಳಿಕೆನಗರದಲ್ಲಿ
ಶಾಲಾ ಕಲೋತ್ಸವ
ಪೈವಳಿಕೆನಗರ,
ಅ.29:
ಪೈವಳಿಕೆನಗರ
ಶಾಲೆಯಲ್ಲಿ ಶಾಲಾ ಮಟ್ಟದ ಕಲೋತ್ಸವವು
ಅಕ್ಟೋಬರ್ 29ಗುರುವಾರ
ಆರಂಭವಾಯಿತು.
ಶಾಲಾ
ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀಮತಿ
ಶ್ಯಾಮಲಾ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ,
ಉಪಾಧ್ಯಕ್ಷರಾದ
ಶ್ರೀ ಇಬ್ರಾಹೀಂ ಪಾವಲುಕೋಡಿ
ಶುಭಾಶಂಸನೆಗೈದರು.
ಮಂಜೇಶ್ವರ
ಉಪಜಿಲ್ಲಾ ಮಟ್ಟದ ವಿಜ್ಞಾನಮೇಳದಲ್ಲಿ
ಜಯಗಳಿಸಿದ ವಿದ್ಯಾರ್ಥಿಗಳಿಗೆ
ಪ್ರಶಸ್ತಿ ವಿತರಿಸಲಾಯಿತು.
ಶಾಲಾ
ಎಸ್ ಆರ್ ಜಿ ಸಂಚಾಲಕ ಶ್ರೀ
ಕೃಷ್ಣಮೂರ್ತಿ ಎಂ.ಎಸ್.
ನಿರ್ವಹಿಸಿದರು.
ನಂತರ
ನಾಲ್ಕು ವೇದಿಕೆಗಳಲ್ಲಾಗಿ ಎಲ್
ಪಿ ವಿಭಾಗದಿಂದ ಹಯರ್ ಸೆಕೆಂಡರಿವರೆಗಿನ
ಸ್ಪರ್ಧೆಗಳನ್ನು ನಡೆಸಲಾಯಿತು.
ಅಪರಾಹ್ನ
3.00
ಗಂಟೆಗೆ
ಸರಿಯಾಗಿ ರಾಜ್ಯ ಪ್ರಶಸ್ತಿ ವಿಜೇತ
ಶ್ರೀ ರಮೇಶ್ ಪೈವಳಿಕೆ ಅವರ ಛದ್ಮವೇಷ
ಸ್ಪರ್ಧೆ ವೀಕ್ಷಕರ ಮನಸೆಳೆಯಿತು.
ಎರಡನೇ
ದಿನವಾದ ಅಕ್ಟೋಬರ್ 30ರಂದು
ಭರತನಾಟ್ಯ,
ನೃತ್ಯದೊಂದಿಗೆ
ಸ್ಪರ್ಧೆಗಳು ಎರಡು ವೇದಿಕೆಗಳಲ್ಲಾಗಿ
ಆರಂಭವಾಗಿ ಮುಖ್ಯವೇದಿಕೆಯಲ್ಲಿ
ನಾಟಕದೊಂದಿಗೆ ಸಮಾರೋಪಗೊಂಡಿತು.
ವೈಯಕ್ತಿಕ
ಚಾಂಪಿಯನ್ ಶಿಪ್ ಪಡೆದ ವಿದ್ಯಾರ್ಥಿಗಳಿಗೆ
ಮಾಸ್ಟರ್ ಕಂಪ್ಯೂಟರ್ಸ್ ಪ್ರಶಸ್ತಿ
ಫಲಕ ಪ್ರಾಯೋಜಿಸಿದ್ದರು.
ಎರಡು
ದಿನಗಳ ಕಾಲ ನಡೆದ ಕಲೋತ್ಸವ
ಯಶಸ್ವಿಗೊಳಿಸಲು ಸಹಕರಿಸಿದ
ವಿದ್ಯಾರ್ಥಿಗಳಿಗೆ,
ಸ್ಪರ್ದಾರ್ಥಿಗಳಿಗೆ,
ತೀರ್ಪುಗಾರರಿಗೆ,
ರಕ್ಷಕರಿಗೆ,
ಎಲ್ಲಾ
ಸೆಕ್ಷನ್ ಅಫೀಶಿಯಲ್ಸ್ ಗಳಿಗೆ,
ಸ್ಟೇಜ್
ಮೇನೇಜರ್ ಗಳಿಗೆ ಆಚರಣಾ ಸಮಿತಿ
ತುಂಬು ಹೃದಯದ ಧನ್ಯವಾದಗಳನ್ನು
ಸಲ್ಲಿಸಿದೆ.







No comments:
Post a Comment