BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

Students





























ಪ್ರಯತ್ನವೇ ಸಫಲತೆಯ ಗುಟ್ಟು

ಒಂದು ಊರಿನಲ್ಲಿ ರಾಮ, ಶ್ಯಾಮ ಎಂಬ ಇಬ್ಬರು ಮಕ್ಕಳಿದ್ದರು. ಅಕ್ಕಪಕ್ಕದ ಮನೆಗಳಲ್ಲಿ ವಾಸವಾಗಿದ್ದುದರಿಂದ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು. ರಾಮ ಓದಿನಲ್ಲಿ ಮುಂದಿದ್ದ. ಆದರೆ ಶ್ಯಾಮನಿಗೆ ಓದುವುದೆಂದರೆ ಅಷ್ಟಕ್ಕಷ್ಟೆ. ಪ್ರತಿ ಬಾರಿಯೂ ಪರೀಕ್ಷೆಯಲ್ಲಿ ಫೈಲಾಗುತ್ತಿದ್ದ. ದಿನಗಳು ಕಳೆಯುತ್ತಿದ್ದವು. ವಾರ್ಷಿಕ ಪರೀಕ್ಷೆ ಬಂತು. ಎಲ್ಲಾ ವಿದ್ಯಾರ್ಥಿಗಳು ಓದಿನಲ್ಲಿ ಮಗ್ನರಾಗಿದ್ದರು. ಆದರೆ ಶ್ಯಾಮನಿಗೆ ಮಾತ್ರ ಆಲಸ್ಯ. ಯೋಕೆ ಅಷ್ಟೊಂದು ಕಷ್ಟಪಡುವುದು. ಓದುವುದು ಬರೆಯುವುದೆಂದರೆ ಅವನಿಗಾಗದು. ಆದರೆ ಅವನ ಅಪ್ಪ ಅಮ್ಮ ಈ ವರ್ಷ ನೀನು ಪಾಸಾಗಲೇಬೇಕು ಎಂದು ಹಠಹಿಡಿದಿದ್ದರು. ಶ್ಯಾಮ ಚಿಂತಿಸತೊಡಗಿದನು. ಇದಕ್ಕೆ ಒಂದು ಉಪಾಯ ಹೊಳೆಯಿತು. ಕಳೆದ ವರ್ಷ ತನ್ನ ಅಕ್ಕನಿಗೆ ಹುಶಾರಿಲ್ಲದಾಗ ಅಮ್ಮ ಗ್ರಾಮದೇವತೆಗೆ ಹರಕೆ ಹೊತ್ತಿದ್ದರು. ಮರುದಿನವೇ ಅಕ್ಕನ ಆರೋಗ್ಯ ಸುಧಾರಿಸಿತು. ನಾನು ಹರಕೆ ಹೊತ್ತರೆ ಪಾಸಾಗಬಹುದು ಎಂದುಕೊಂಡು ತಡ ಮಾಡದೆ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಹೋಗಿ ದೇವರೇ ನನ್ನನ್ನು ಈ ಪರೀಕ್ಷೆಯಲ್ಲಿ ಪಾಸು ಮಾಡುನಿನಗೆ ಪೂಜೆ ಮಾಡಿಸುತ್ತೇನೆ ಎಂದು ಹರಕೆ ಹೇಳಿಕೊಂಡನು. ಪರೀಕ್ಷೆಯ ದಿನ ಬಂತು. ಪ್ರಶ್ನೆ ಪತ್ರಿಕೆ ನೋಡಿದ ಶ್ಯಾಮನಿಗೆ ಯಾವ ಉತ್ತರವೂ ಹೊಳೆಯಲಿಲ್ಲ. ದೇವರಲ್ಲಿ ಹರಕೆ ಹೇಳಿದ ಧೈರ್ಯದಲ್ಲಿ ಖಾಲಿ ಉತ್ತರದ ಹಾಳೆಯನ್ನು ನೀಡಿ ಬಂದನು. ಪರೀಕ್ಷೆಯ ಫಲಿತಾಂಶದ ದಿನ ಬಂತು. ರಾಮ ತರಗತಿಗೆ ಮೊದಲಿಗನಾಗಿ ರಾಂಕ್ ಬಂದಿದ್ದ. ಆದರೆ ಶ್ಯಾಮ ಫೇಲಾಗಿದ್ದ. ಆತನಿಗೆ ಆಶ್ಚರ್ಯವಾಯಿತು. ನೇರವಾಗಿ ಅಧ್ಯಾಪಕರ ಬಳಿ ಹೋಗಿ ಹೇಳಿದ. ಸರ್ ನಾನು ಪಾಸಾಗಬೇಕಿತ್ತು. ನೀವು ನನ್ನನ್ನು ಯಾಕೆ ಫೇಲ್ ಮಾಡಿದಿರಿ. ಎಂದು ಕೇಳಿದನು. ಖಾಲಿ ಪೇಪರ್ ಕೊಟ್ಟರೆ ಹೇಗೆ ನಿನ್ನನ್ನು ಪಾಸ್ ಮಾಡೋದು ಎಂದು ಗುರುಗಳು ಪ್ರತಿಕ್ರಿಯಿಸಿದರು. ಆಗ ಶ್ಯಾಮ ನಾನು ಪಾಸು ಆಗಬೇಕಂದು ಗ್ರಾಮದೇವರಿಗೆ ಹರಕೆ ಹೊತ್ತಿದ್ದೇನೆ ಎಂದಾಗ ಗುರುಗಳಿಗೆ ನಗು ತಡೆಯಲಾಗಲಿಲ್ಲ. ಅವರು ನೀನು ಪರೀಕ್ಷೆಗೆ ಓದುತ್ತಿದ್ದರೆ ಪಾಸಾಗಬಹುದಿತ್ತು. ಆದರೆ ನೀನು ಓದಲಿಲ್ಲ. ಈಗ ಆದದ್ದು ಆಯಿತು. ಇನ್ನು ಪ್ರಯತ್ನ ಮಾಡಿದರೆ ಪಾಸಾಗಬಹುದು. ಎಂದರು. ಶ್ಯಾಮನಿಗೆ ತನ್ನ ತಪ್ಪಿನ ಅರಿವಾಯಿತು. ಅಂದಿನಿಂದ ಶ್ಯಾಮನು ಶ್ರದ್ಧೆಯಿಂದ ಓದಿ ಉತ್ತಮ ಅಂಕಗಳನ್ನು ಪಡೆದು ಎಲ್ಲರ ಮೆಚ್ಚುಗೆಗಳಿಸಿದನು.(ಸಾತ್ವಿಕ್ ಎನ್ 7ಎ ತರಗತಿ)




ಪ್ರಕೃತಿಯ ವೇದನೆ
ಮರಗಿಡವ ಕಡಿಯುತಿಹೆ ನೀನು
ನನ್ನನ್ನು ಅಳಿಸುತಿಹೆ ನೀನು
ನನ್ನ ಜೊತೆ ಅಳಿಯುವೆ ನೀನು
ಓ ಮಾನವನೇ ನೀನೇಕೆ ಹೀಗೆ
ದಯಮಾಡಿ ನನ್ನನು ಬೆಳೆಸು
ಜೊತೆಗೆ ನೀ ನಿನ್ನನು ಉಳಿಸು
ಮರಗಿಡವ ನೆಟ್ಟು ಬೆಳೆಸಿ
ಪ್ರಕೃತಿಯ ಮನದಿ ಹರಸು
ನಾನು ನಿನಗೇನು ಮಾಡಿದೆ
ಸದಾ ನಾ ನಿನ್ನ ಕಾಯುವೆ
ತಂಪಾದ ಗಾಳಿ ನೀಡುವೆ
ದಯಮಾಡಿ ಕರುಣೆ ತೋರು
ನನ್ನಿಂದ ನೀನೆಲ್ಲವ ಪಡೆಯುವೆ
ಕೊನೆಗೆ ನೀ ನನ್ನ ಅಳಿಸುವೆ
ನೀ ನನ್ನ ಉಳಿಸಿದರೆ
ಆ ಮೇಲೆ ನೀನೂ ಉಳಿಯುವೆ
(ಜಗದೀಶ ವೈ 10)


ಕಂದನ ಬೇಡಿಕೆ
ಎಬಿಸಿಡಿ ಬೇಡ ಅಮ್ಮ
ಮೊದಲು ಕಲಿವೆ ಕನ್ನಡ    
ಅಆಇಈ ಬರೆದು ಕೊಡು
ನೋಡು ನನ್ನ ಅಕ್ಷರ
ಅಪ್ಪ ಅಮ್ಮ ಕಲಿತ ಶಾಲೆ
ಆಗಲೆನಗೆ ದೇಗುಲ
ಭಾಷೆ ದ್ವೇಷ ಮಾಡೆನಮ್ಮ
ಕಲಿವೆನೆಲ್ಲ ಭಾಷೆಯ
ಜ್ಞಾನ ಜ್ಯೋತಿ ಬೆಳಗಿಕೊಂಡು
ಜಗಕೆ ಬೆಳಕು ನೀಡುವೆ
ಹತ್ತು ಹಲವು ಗಿಡವ ನೆಟ್ಟು
ಹಸಿರು ತೋಟ ಮಾಡುವೆ
(ಮಿಥುನ್ ರಾಜ್ 7ಎ ತರಗತಿ)

ಸಾಗರ
ನದಿ ಜಲಪಾತವು ಹರಿಯುತ ಸಾಗುತ
ಒಟ್ಟುಗೂಡಿತು ವಿಶಾಲ ಸಾಗರವ
ಅಲೆಗಳು ತೀರಕೆ ಬಡಿದು ಬಡಿಯುವ
ಅಚ್ಚರಿಗೊಳಿಸಿತು ಮೈಮನವ
ನೀಲವರ್ಣದ ನೀರಿನ ಒಳಗೆ
ಜೀವಿಸುವವು ಹಲವು ಜಲಚರವು
ಮೀನನು ಹಿಡಿಯಲು ಗಾಳವ ಹಾಕುತ
ಬದುಕುವರಿಲ್ಲಿ ಮನುಕುಲವು
ಸೂರ್ಯಾಸ್ತದ ಸಮಯದಲ್ಲಿ
ಸಾಗರ ನೋಡಲು ಬಲು ಚಂದ
ಸಾಗರ ಬದಿಯಲಿ ತೆಂಗುಗಳಿರುವ
ಪ್ರಕೃತಿ ಸೊಬಗಿಗೆ ಬಲು ಅಂದ
(ಸಾತ್ವಿಕ್ ಎನ್ 7ಎ ತರಗತಿ)

ರಾಜಕೀಯ
ಓಟು ಓಟು ಓಟು
ಬಂತು ಮಗದೊಮ್ಮೆ ಓಟು
ಹಲವು ಪಕ್ಷ
ಅದರಲ್ಲಿ ಇನ್ನೆರಡು ಹೊಸತು
ಪಕ್ಷದ ನೇತಾರರು ಬರುತಾರೆ
ಓಟು ಬೇಡಿಕೊಂಡು
ಮಾಡಿದ ಸಾಧನೆ ಹೇಳಿಕೊಂಡು
ವಿರೋಧ ಪಕ್ಷದವರನು ದೂರಿಕೊಂಡು
ಬಾಯಲ್ಲಿ ಆಶ್ವಾಸನೆಯ ನೆಪ
ಮನದಲಿ ಕುರ್ಚಿಯ ಜಪ
ಮೊದಲ ಬಾರಿಗೆ ಓಟು ಹಾಕುವವರಿಗೆ
ತುಂಬಾ ಖುಷಿ
ವಯಸ್ಕರಿಗೆ ಇದರಿಂದ ಮಂಡೆಬಿಸಿ
ಯಾವ ಡಾನ್ಸು ಯಾವ ಅಬ್ಬರ
ಯಾವ ಪ್ರಚಾರ ಯಾವ ನಮಸ್ಕಾರ
ಇವೆಲ್ಲಾ ಬರೀ ಡೋಸು
ಎಲ್ಲಾ ವೋಟಿಗಾಗಿ ಪೋಸು
5 ವರ್ಷಕ್ಕೊಮ್ಮೆ ಬರ್ತಾರೆ
ಗೆದ್ದ ಮೇಲೆ ಹಿಂತಿರುಗಿ ಹೋಗ್ತಾರೆ
ಎಲ್ಲಿದೆ ಅಭಿವೃದ್ಧಿ
(ಚರಣ್ ರಾಜ್ ಎಸ್ 9ಸಿ)


ಪ್ರತಿಫಲ
ಶಿಕಾರಿಪುರ ಎಂಬ ಕಾಡಿಗೆ ಒಂದು ಶಾಲೆಯಿಂದ ಮಕ್ಕಳು ಪ್ರವಾಸಕ್ಕೆ ಬಂದರು. ಪ್ರವಾಸಕ್ಕೆ ಬಂದ ಮಕ್ಕಳಲ್ಲಿ ರವಿಯೂ ಒಬ್ಬನು. ಸಂಜೆಯಾಗುವಾಗ ರವಿಯು ಒಬ್ಬನೇ ಕಾಡಿನಲ್ಲಿ ಸುತ್ತುತ್ತಿದ್ದನು. ಅವನು ಪ್ರಕೃತಿಯ ವೀಕ್ಷಣೆಯಲ್ಲಿ ಕಳೆದುಹೋಗಿದ್ದನು. ಅವನು ಪೊದೆಗಳು ಅಲುಗಾಡುತ್ತಿದ್ದುದನ್ನು ನೋಡಿ ಏನೆಂದು ನೋಡುವಾಗ ಒಂದು ಪುಟ್ಟ ಕರಡಿಯ ಮರಿ ಬೇಟೆಗಾರನ ಬಲೆಗೆ ಬಿದ್ದಿತ್ತು. ರವಿಯು ಆ ಮರಿಯನ್ನು ಬೇಟೆಗಾರನ ಬಲೆಯಿಂದ ಬಿಡಿಸಿದನು. ಆ ಕರಡಿಯ ಮರಿ ಓಡಿಹೋಯಿತು. ರವಿ ಶಾಲೆಯ ಯಾವ ಮಕ್ಕಳನ್ನೂ ಕಾಣಲಿಲ್ಲ. ಅವರು ಹೊರಟುಹೋಗಿದ್ದರು. ರವಿ ಕಾಡಿನಲ್ಲಿ ಕಳೆದುಹೋದನು. ರವಿ ಬೇಸರ ಹಾಗೂ ಭಯದಿಂದ ಅಳತೊಡಗಿದನು. ಆಗ ಒಮ್ಮೆಲೇ ಒಂದು ದೊಡ್ಡ ಗಾತ್ರದ ಕರಡಿ ಅವನ ಬಳಿ ಬಂದು ನೋಡುತ್ತಿತ್ತು. ರವಿಯು ಕರಡಿಯನ್ನು ನೋಡಿ ನಡುಗುತ್ತಿದ್ದನು. ಅದು ರವಿಯನ್ನು ಆಕ್ರಮಿಸಲು ಅಣಿಯಾಗುವಾಗ ಕರಡಿಯ ಮರಿ ಬಂದು ನಡೆದ ಘಟನೆಯನ್ನು ಹೇಳಿತು. ಬಳಿಕ ಆ ಕರಡಿ ರವಿಯಲ್ಲಿ ಕ್ಷಮೆ ಕೇಳಿತು. ರವಿ ಕಳೆದುಹೋಗಿರುವ ವಿಷಯ ತಿಳಿದ ಕರಡಿ ರವಿಗೆ ಕಾಡಿನಿಂದ ಹೊರಗೆ ಹೋಗಲು ಸಹಾಯ ಮಾಡಿತು. ರವಿಗೆ ಪರೋಪಕಾರದ ಫಲ ಸಿಕ್ಕಿತು.(ಧ್ವಾನಿಷ್ 9ಸಿ ತರಗತಿ)





ವೀಕ್ಷಿತಾ 6ಎ



ಸ್ವಾತಿ 7ಸಿ


ರಕ್ಷಿತ್ ಕುಮಾರ್ 10ಎ



ಮಹೇಶ್ 8ಸಿ


ಗೌತಮಿ 10ಸಿ

ಧ್ವಾನಿಷ್ 9ಸಿ

..................................................................................................................................................



ಮಹಾತ್ಮಾ ಗಾಂಧಿ


ಗಾಂಧಿ ಗಾಂಧಿ ಮಹಾತ್ಮಾ ಗಾಂಧಿ
ದೇಶಕೆ ಸ್ವಾತಂತ್ರ್ಯ ತಂದ ಗಾಂಧಿ
ಎಲ್ಲರ ಮುದ್ದಿನ ಮಹಾತ್ಮಾ ಗಾಂಧಿ
ಉಪ್ಪು ಸತ್ಯಾಗ್ರಹವನ್ನು ಮಾಡಿದ ಗಾಂಧಿ
ಗಾಂಧಿ ಗಾಂಧಿ ಮಹಾತ್ಮಾ ಗಾಂಧಿ
ದೇಶಕೆ ಒಳ್ಳೆಯ ಹೆಸರನ್ನು ತಂದರು
ನಮ್ಮಯ ಮಹಾತ್ಮಾ ಗಾಂಧಿ
ಜಾತಿ ಬೇಧವ ಮಾಡದ ಗಾಂಧಿ
ದೇಶವನ್ನು ಕಾಪಾಡಿದ ಮಹಾತ್ಮಾ ಗಾಂಧಿ
ದೇಶಕ್ಕಾಗಿ ಹೋರಾಡಿದ ಗಾಂಧಿ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ
ದೇಶಕ್ಕಾಗಿ ಪ್ರಾಣ ಕಳೆದರು
ನಮ್ಮ ಮಹಾತ್ಮ ನಮ್ಮ ಹುತಾತ್ಮ
(ಸುಷ್ಮಾ.9ಸಿ ತರಗತಿ)

..................................................................................................................................................

ಕಾಡಿನ ವೈಭವ



ಒಂದು ಕಾಡಿನಲ್ಲಿ ಒಂದು ಗಿಳಿ ಇತ್ತು. ಆ ಗಿಳಿ ಯಾವಾಗಲೂ ತನ್ನ ಮರಿಗಳಿಗೆ ಆಹಾರವನ್ನು ಹುಡುಕುತ್ತಾ ಹೋಗುತ್ತಿತ್ತು. ಆ ಕಾಡಿನಲ್ಲಿ ಒಬ್ಬ ಬೇಟೆಗಾರನಿದ್ದನು. ಅವನಿಗೆ ಪಕ್ಷಿಗಳನ್ನೂ ಪ್ರಾಣಿಗಳನ್ನೂ ಕೊಲ್ಲುವುದೆಂದರೆ ಬಹಳ ಇಷ್ಟ. ಅವನು ಇಷ್ಟರವರೆಗೆ ಯಾವ ಜೀವಿಗಳನ್ನೂ ಹಿಡಿಯಲಿಲ್ಲ. ಇವತ್ತು ಹಿಡಿಯಲೇಬೇಕೆಂದು ಹೋದ. ಗಿಳಿ ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ಬರುವಾಗ ಬೇಟೆಗಾರ ಹಿಡಿದನು. ಗಿಳಿ ಅಯ್ಯೋ ಕಾಪಾಡಿ ಎಂದು ಬೊಬ್ಬೆ ಹಾಕಿತು. ಆಗ ಗುಬ್ಬಿಗೆ ಗಿಳಿಯ ಬೊಬ್ಬೆ ಕೇಳಿಸಿತು. ಅದು ಬಂದು ನೋಡುವಾಗ ಗಿಳಿಯನ್ನು ಬೇಟೆಗಾರ ಹಿಡಿದುಕೊಂದು ಹೋಗಿದ್ದನು. ಕೂಡಲೇ ಗುಬ್ಬಿ ಸಿಂಹದ ಗುಹೆಯ ಹತ್ತಿರ ಹೋಗಿ ಸಿಂಹಣ್ಣಾ ಸಿಂಹಣ್ಣಾ ಎಂದು ಕೂಗಿ ಕರೆಯಿತು. ಗುಹೆಯಿಂದ ಹೊರಬಂದ ಸಿಂಹ ಏನು ಗುಬ್ಬಿ. ಯಾಕೆ ಇಷ್ಟು ಗಾಬರಿಯಿಂದ ಇದ್ದೀಯಾ ಎಂದು ಕೇಳಿತು. ಆಗ ಗುಬ್ಬಿಯು ಸಿಂಹಣ್ಣಾ ಗಿಳಿಯನ್ನು ಬೇಟೆಗಾರ ಹಿಡಿದಿದ್ದಾನೆ. ಆಗ ಸಿಂಹ ಯಾವ ಬೇಟೆಗಾರ ಈಗ ಒಬ್ಬ ಬೇಟೆಗಾರನನ್ನು ನಾವೆಲ್ಲರೂ ಸೇರಿ ಓಡಿಸಿದ್ದೇವೆ. ಅಲ್ಲವೇ ಎಂದಿತು. ಗುಬ್ಬಿ ಮತ್ತು ಸಿಂಹ ಬೇಟೆಗಾರನ ಮನೆಗೆ ಹೋದವು. ಆಗ ಬೇಟೆಗಾರ ಮನೆಯಲ್ಲಿ ಖುಷಿಯಿಂದ ಇದ್ದನು. ಸಿಂಹ ಮತ್ತು ಗುಬ್ಬಿಗೆ ಒಂದು ಉಪಾಯ ಹೊಳೆಯಿತು. ಸಿಂಹ ಬಾಗಿಲ ಹತ್ತಿರ ನಿಂತಿತು. ಗುಬ್ಬಿ ಕಿಟಿಕಿಯಿಂದ ಒಳಗೆ ಹೋಯಿತು. ಸಿಂಹ ಜೋರಾಗಿ ಗರ್ಜಿಸಿತು. ಬೇಟೆಗಾರ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಯಾರು ಗರ್ಜಿಸಿದ್ದು ನಾನು ಊಟ ಮಾಡುವ ಹೊತ್ತಿನಲ್ಲಿ. ನನ್ನನ್ನು ಹೊರಗೆ ಬರುವಂತೆ ಯಾರು ಮಾಡಿದ್ದು ಎನ್ನುತ್ತಾ ಸಿಟ್ಟಿನಿಂದ ಹುಡುಕಾಡತೊಡಗಿದನು. ಆಗ ಗುಬ್ಬಿ ಬಂಧನದಲ್ಲಿದ್ದ ಗಿಳಿಯನ್ನು ಬಿಡಿಸಿದಳು. ಗಿಳಿ ಗುಬ್ಬಿಗೆ ಧನ್ಯವಾದ ಹೇಳಿತು. ಬೇಟೆಗಾರ ಒಳಗೆ ಬರುವಾಗ ಸಿಂಹ ಬಲೆ ಬೀಸಿತು. ಅದಕ್ಕೆ ಬಿದ್ದ ಬೇಟೆಗಾರ ಅಯ್ಯೋ ನನ್ನನ್ನು ಬಿಟ್ಟು ಬಿಡಿ ಎಂದು ಕಿರುಚತೊಡಗಿದನು. ಆಗ ಸಿಂಹ, ಗಿಳಿ,ಗುಬ್ಬಿ ನೀನು ಕಾಡನ್ನು ಬಿಟ್ಟು ಹೋಗಿದ್ದೀಯ ಅಂದುಕೊಂಡಿದ್ದೆವು. ಆದರೆ ನೀನು ಹೋಗಲಿಲ್ಲ. ಇವತ್ತು ನೀನು ಹೋಗಲೇ ಬೇಕು ಎಂದು ಹೆದರಿಸಿದವು. ಆಯಿತು ನನ್ನನ್ನು ಬಿಡಿ ನಾನು ಹೋಗುತ್ತೇನೆ ಎಂದು ಬೇಟಗಾರನ್ನು ಅಂಗಲಾಚಿದನು. ಆಗ ಸಿಂಹ ಆಯಿತು ಬಿಟ್ಟು ಬಿಡುತ್ತೇವೆ ಆದರೆ ನೀನು ಕಾಡನ್ನು ಬಿಟ್ಟು ತೊಲಗಬೇಕು ಎಂದು ಹೇಳಿ ಬಲೆ ಬಿಡಿಸಲು ಇಲಿಯನ್ನು ಕರೆಯಿತು. ಬಲೆಯಿಂದ ಬಿಡಿಸಿಕೊಂಡ ಬೇಟೆಗಾರ ಓಡಿದನು. ಮುಂಜಾನೆ ಚಿಲಿಪಿಲಿ ಹಾಡುವ ಪಕ್ಷಿಗಳು ಬಣ್ಣ ಬಣ್ಣದ ಚಿಟ್ಟೆಗಳು ಹೂವಿಂದ ಹೂವಿಗೆ ಹಾರುತ್ತಾ ಜೇನನ್ನು ಹೀರುತ್ತಿದ್ದವು. ಸೂರ್ಯೋದಯದ ಸಮಯದಲ್ಲಿ ಆಕಾಶವೆಲ್ಲಾ ಕೆಂಪಾಗಿ ನವಿಲುಗಳು ನೃತ್ಯ ಮಾಡುತ್ತಿರುವ ಸುಂದರ ದೃಶ್ಯವು ಅದ್ಭುತವಾಗಿದೆ. ಈ ಸುಂದರ ಪ್ರಕೃತಿಯಲ್ಲಿ ಮನುಷ್ಯನ ಕೈವಾಡ ವಿಕೃತವಾಗಿರುತ್ತವೆ.(ಸರ್ವಾಣಿ 5ನೇ ತರಗತಿ)

..................................................................................................................................................



ಜನಸಂಖ್ಯೆ
     ಭಾರತವು ವಿಸ್ತೀರ್ಣದಲ್ಲಿ ಅಷ್ಟೇನು ದೊಡ್ಡ ದೇಶವಲ್ಲ. ಅದು ಏಳನೇ ಸ್ಥಾನದಲ್ಲಿದೆ. ಆದರೂ ಜನಸಂಖ್ಯಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿರುವುದು ಚೀನಾ. ನಮ್ಮ ದೇಶದ ಜನಸಾಂದ್ರತೆ 382/.ಕಿ.ಮೀ. ಆಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಪ್ರಗತಿಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ನಮ್ಮ ದೇಶದ ಜನಸಂಖ್ಯೆ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಅಂದರೆ 1947ನೇ ಇಸವಿಯಲ್ಲಿ ಸುಮಾರು 53 ಕೋಟಿಯಷ್ಟೆ ಇತ್ತು. ಆದರೆ ಅದು ಈಗ 121ಕೋಟಿಯನ್ನೇ ದಾಟಿದೆ. ಇದು 2021 ಆಗುವಾಗ 150ಕೋಟಿ ದಾಟಬಹುದು. ಹೀಗಾದರೆ ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಲೂಬಹುದು!!!!.ದೇಶದ ಪ್ರಗತಿಗೆ ಶಾಪವಾಗಿ ಬದಲಾದ ಜನಸಂಖ್ಯೆಯನ್ನು ನಮ್ಮ ದೇಶದ ಸಂಪತ್ತಾಗಿ ಬದಲಾಯಿಸಿಕೊಳ್ಳಬಹುದು. ದೇಶದ ಮಾನವ ಸಂಪನ್ಮೂಲವಾಗಿ ಬದಲಾಯಿಸಬಹುದು. ಆದುದರಿಂದ ಜನಸಂಖ್ಯೆನ್ನು ನಿಯಂತ್ರಿಸೋಣ. ಮತ್ತು ಮಾನವ ಸಂಪನ್ಮೂಲವಾಗಿ ಬದಲಾಯಿಸೋಣ. ನಮ್ಮದೇಶದ ಅಭಿವೃದ್ದಿಗೆ ನೆರವಾಗೋಣ. “ಜನಸಂಖ್ಯೆಯನ್ನು ನಿಯಂತ್ರಿಸಿರಿ, ಜನಸಂಖ್ಯೆಯನ್ನು ಅಭಿವೃದ್ಧಿಗೆ ಬಳಸಿರಿ ”(ಧ್ವಾನಿಷ್ 9ಸಿ ತರಗತಿ, ವಿಶ್ವಜನಸಂಖ್ಯಾ ದಿನಾಚರಣೆಯಂಗವಾಗಿ ಶಾಲಾ ಸಮಾಜ ವಿಜ್ಞಾನ ಕ್ಲಬ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಬಂಧ)



ಶಿಹಾಬುಲ್ ಅಬ್ಬಾಸ್ 5ಎ ತರಗತಿ

ಶೈನಿ 3ಎ ತರಗತಿ
ಖದೀಜತುಲ್ ಕುಬ್ರಾ 9ಸಿ ತರಗತಿ
ಇಬ್ರಾಹೀಂ 3ಎ ತರಗತಿ
ಫಾತಿಮತ್ ನುಫಾ 6ಸಿ ತರಗತಿ


ಫಾತಿಮತ್ ಮುನ್ಸೀನಾ 6ಸಿ ತರಗತಿ
ಸನಾ 2ಎ ತರಗತಿ
ಫಾತಿಮತ್ ಮುನ್ಸೀನಾ 6ಸಿ ತರಗತಿ
ಧ್ವಾನಿಷ್ 9ಸಿ ತರಗತಿ
..................................................................................................................................................

ಸತ್ಯವೇ ನಮ್ಮುಸಿರು

ನಗುವೆಂಬ ಕಡಲಲ್ಲಿ ತೇಲಾಡು
ಕನಸೆಂಬ ನದಿಯಲ್ಲಿ ಈಜಾಡು
ಜೀವನದ ಉಯ್ಯಾಲೆಲಿ ಓಲಾಡು
ಏನೇ ಇದ್ದರೂ ಹೇಗೇ ಇದ್ದರೂ
ಸರಿಯಾದ ದಾರಿಗೆ ನೀ ಕೂಡು
ಸತ್ಯವೇ ನಮ್ಮುಸಿರು
ಸತ್ಯಕ್ಕೆ ನಮ್ಮುಸಿರು
ಸತ್ಯದಿಂದಲೇ ನಮಗುಸಿರು
ಸತ್ಯವ ಬಿಟ್ಟು ಹೋಗದಿರೆಂದು
ಸತ್ಯವೆ ಎಂದೆಂದೂ ಜಗದುಸಿರು
ಸುಳ್ಳಾಡುವಾ ಬಾಯಿ
ಕಸಕಿಂತಲೂ ಕೀಳು
ಇನ್ನಾದರೂ ಕೇಳು
ಬೇಡ ನಮಗೆಂದೂ
ಸುಳ್ಳೆಂಬ ಈ ಗೋಳು
(ಕಾರ್ತಿಕ್. ಕೆ 9ಸಿ ತರಗತಿ)

..................................................................................................................................................



ಅಬ್ದುಲ್ ಕಲಾಂ

ಕಲಾಂ ಕಲಾ ಅಬ್ದುಲ್ ಕಲಾಂ
ಮಕ್ಕಳ ಪ್ರೀತಿಯ ಅಬ್ದುಲ್ ಕಲಾಂ
ಸಲಾಂ ಸಲಾಂ ಅಬ್ದುಲ್ ಕಲಾಂ
ದೇಶದ ಪರವಾಗಿ ನಿಮಗೆ ಸಲಾಂ

ದೇಶದ ಅಭಿವೃದ್ದಿ ಇವರ ಗುರಿ
ತೋರಿಸಿ ಕೊಟ್ಟರು ಸರಿ ದಾರಿ
ಮಕ್ಕಳಿಗಿವರು ಅಭಿಮಾನಿ
ದೇಶಕೆ ಆದರು ವಿಜ್ಞಾನಿ

ಸಾವನು ಮೆಟ್ಟಿ ನಿಂತವರು
ದೇಶದ ಪ್ರಗತಿಗೆ ಒಲಿದವರು
ಇಂತಹ ಆದರಣೀಯ ವ್ಯಕ್ತಿ
ಇವರೇ ದೇಶದ ದೊಡ್ಡ ಶಕ್ತಿ

ದೇಶವ ಬೆಳಗುವ ಪ್ರಜೆಯಾಗಿ
ಮಾದರಿ ಆದರು ನಮಗಾಗಿ
ಬೆಳೆಯಲಿ ದೇಶದಿ ವಿಜ್ಞಾನೆ
ತೊಲಗಲಿ ನಮ್ಮಯ ಅಜ್ಞಾನೆ

ಸಾಧನೆ ತೋರಿದ ಅಬ್ದುಲ್ ಕಲಾಂ
ನಿಮಗೆ ನಮ್ಮ ದೊಡ್ಡ ಸಲಾಂ
(ಚರಣ್ ರಾಜ್ 9ಸಿ ತರಗತಿ)



..................................................................................................................................................

ಪಶ್ಚಾತ್ತಾಪ
       ಒಂದೂರಲ್ಲಿ ಒಬ್ಬ ಮರ ಕಡಿಯುವವನಿದ್ದ. ಅವನ ಹೆಸರು ಬೋರ. ಅವನು ಸ್ವಲ್ಪ ಆಲಸಿಯಾಗಿದ್ದ. ಕೆಲಸ ಮಾಡುವುದೆಂದರೆ ಬಹಳ ಉದಾಸೀನ. ಎಂದಿನಂತೆ ಅವನು ಮರ ಕಡಿಯಲು ಹೋದ. ಮರ ಕಡಿದು ಕಡಿದು ಆಯಾಸಗೊಂಡು ಮರದ ಕೆಳಗೆ ಕುಳಿತನು. ಬಳಿಯಲ್ಲೇ ಕಮ್ಮಾರ ಸಾಲೆ ಇತ್ತು. ಅಲ್ಲಿದ್ದ ಕೆಲಸಗಾರನು ಬೇಗ ಬೇಗ ಕೆಲಸ ಮಾಡುತ್ತಿದ್ದ. ಇವನು ಹೇಳಿದೆ ಆಹಾ ಎಷ್ಟು ಸುಲಭದ ಕೆಲಸ ಇದು….ನಾನು ನಾಳೆಯಿಂದ ಕತ್ತಿ ಮಾಡುವ ಕೆಲಸಕ್ಕೆ ಹೋಗುತ್ತೇನೆ. ಮರುದಿನ ಬೆಳಗ್ಗೆ ಎದ್ದು ಸಂತೋಷದಿಂದ ಮನೆಯಿಂದ ಹೊರಟ. ಕಮ್ಮಾರ ಅಂಗಡಿಗೆ ಮುಟ್ಟಿದ. ಅವನಿಗೆ ಏನೂ ಗೊತ್ತಿರಲಿಲ್ಲ. ಆದರೂ ಮಾಡುವ ಎಂದು ಹೇಳಿ ಕೆಲಸ ಮಾಡಲು ಹೊರಟ. ಅವನ ಕೈ ಮುರಿದು ರಕ್ತ ಬಂತು. ಎಲ್ಲರೂ ನಕ್ಕರು. ಇವನು ಆಸ್ಪತ್ರೆಗೆ ಹೋಗಿ ಬ್ಯಾಂಡೆಜ್ ಹಾಕಿಸಿಕೊಂಡು ಬಂದ. ಅವನಿಗೆ ಕಮ್ಮಾರ ಕೆಲಸ ಬಹಳ ಕಷ್ಟವೆನಿಸಿತು. ನಾಳೆಯಿಂದ ಈ ಕೆಲಸಕ್ಕೆ ಹೋದರೆ ಆಗದೆಂದು ಬೇರೆ ಕೆಲಸವನ್ನು ಹುಡುಕತೊಡಗಿದ. ಮರುದಿವಸ ಅವನು ಪೇಟೆಗೆ ಹೋದನು. ಅಲ್ಲಿ ಒಂದು ದೊಡ್ಡ ಮನೆ. ಆ ಮನೆಗೆ ಒಬ್ಬ ಪೈಂಟ್ ಕೊಡುತ್ತಿದ್ದ. ಇದೇನು ಸುಲಭದ ಕೆಲಸ. ಕೈಯನ್ನು ಆಚೆ ಈಚೆ ಮಾಡಿದ್ದೇ ಸಾಕಲ್ವ ಎಂದು ಯೋಚಿಸಿದ. ನಾಳೆಯಿಂದ ಈ ಕೆಲಸವನ್ನು ಮಾಡೋಣ ಎನ್ನುತ್ತಾ ಮರುದಿನ ಬೇಗ ಎದ್ದು ಪೈಂಟ್ ಕೆಲಸಕ್ಕೆ ಹೋದ. ಒಂದು ದೊಡ್ಡ ಮನೆಗೆ ಪೈಂಟ್ ಕೊಡಬೇಕೆಂದು ಯಜಮಾನರು ಹೇಳಿದರು. ಇವನಿಗೆ ಖುಶಿಯಾಯಿತು. ದೊಡ್ಡ ಮನೆಯಾಗುವಾಗ ತುಂಬಾ ಹಣ ಸಿಗಬಹುದಲ್ಲವೇ ಅಂದುಕೊಂಡನು. ಅವನು ಪೈಂಟ್ ಕೊಡುವುದಕ್ಕಾಗಿ ಏಣಿ ಹತ್ತಿದ. ಅವನ ಕಾಲು ಜಾರಿತು. ಏಣಿಯೂ ಅವನೂ ಒಟ್ಟಿಗೆ ಕಳೆಗೆ ಬಿದ್ದನು. ಅವನ ಶರೀರಕ್ಕಿಡೀ ಬ್ಯಾಂಡೆಜ್ ಹಾಕಿದರು. ಅವನು ಬೇಸರದಿಂದ ಆಸ್ಪತ್ರೆಯಲ್ಲಿ ಇದ್ದ. ಒಂದು ವರ್ಷ ಕಳೆದಾಗ ಅವನು ಆರೋಗ್ಯವಂತನಾದ. ಒಂದು ಒಳ್ಳೆಯ ಕೆಲಸ ಇದ್ದರೂ ಬೇರೆ ಕೆಲಸ ಹುಡುಕಿದೆನಲ್ಲಾ ಎಂದು ಅವನಿಗೆ ಪಶ್ಚಾತ್ತಾಪವಾಯಿತು. ಮರುದಿನ ಸಂತೋಷದಿಂದ ಕೊಡಲಿಯನ್ನು ಹೆಗಲಲ್ಲಿ ಹಾಕಿಕೊಂಡು ಕಾಡಿಗೆ ಮರಕಡಿಯಲು ಹೋದ. (ರಚನೆ ಫಾತಿಮತ್ ಮುನ್ಸೀನಾ 6ಸಿ ತರಗತಿ)
..................................................................................................................................................

ಫಾತಿಮತ್  ನುಫಾ 6ಸಿ ತರಗತಿ
ಫಾತಿಮತ್ ರುಮೈಝಾ 8ಸಿ ತರಗತಿ
ಸುದೀಪ್ 8ಸಿ ತರಗತಿ

No comments:

Post a Comment