ತರಗತಿಗೆ
ಮಧ್ಯಾಹ್ನದೂಟ ಯೋಜನೆ ಉದ್ಘಾಟನೆ
ಪೈವಳಿಕೆನಗರ,
ಜ.4:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಶಾಲಾ ಮಧ್ಯಾಹ್ನದೂಟ ಸಮಿತಿಯ
ವಿಶೇಷ ಯೋಜನೆಯಾದ ತರಗತಿಗಳಿಗೆ
ಮಧ್ಯಾಹ್ನದೂಟದ ಉದ್ಘಾಟನಾ
ಕಾರ್ಯಕ್ರಮವು 8ಸಿ
ತರಗತಿಯಲ್ಲಿ ಬುಧವಾರ ಮಧ್ಯಾಹ್ನ
12.45ಕ್ಕೆ
ನಡೆಯಿತು.
ಮುಖ್ಯೋಪಾಧ್ಯಾಯರಾದ
ಶ್ರೀಮತಿ ಶ್ಯಾಮಲಾ ಪಿ,
ಹಿರಿಯ
ಶಿಕ್ಷಕರಾದ ಶ್ರೀ ರವೀಂದ್ರನಾಥ್
ಕೆ ಆರ್,
8ನೇ
ಸಹ ತರಗತಿ ಶಿಕ್ಷಕಿಯರಾದ
ಶ್ರೀಮತಿ ರೈನಾ ಟೀಚರ್,
ಶ್ರೀಮತಿ
ಪಲ್ಲವಿ ಟೀಚರ್ ಸಂದರ್ಶಿಸಿ
ಮೆಚ್ಚುಗೆ ವ್ಯಕ್ತಪಡಿಸಿದರು.
8ಸಿ
ತರಗತಿಯ ಎಲ್ಲಾ ವಿದ್ಯಾರ್ಥಿ
ವಿದ್ಯಾರ್ಥಿನಿಯರು ಒಂದೇ ಕುಟುಂಬದ
ಸದಸ್ಯರಂತೆ ಪಂಕ್ತಿಯಲ್ಲಿ
ಕುಳಿತುಕೊಂಡು,
ತಾವೇ
ಅನ್ನ,
ಸಾಂಬಾರ್,
ಉಪ್ಪಿನಕಾಯಿ,
ಮಜ್ಜಿಗೆಯನ್ನು
ಬಡಿಸಿಕೊಂಡು ಕುಶಲೋಪರಿಯೊಂದಿಗೆ
ಭೋಜನವನ್ನು ಸ್ವೀಕರಿಸಿದರು.
ವಿದ್ಯಾರ್ಥಿಗಳಿಗೆ
ಅನ್ನದ ಮಹತ್ವ,
ಸಹಭೋಜನ,
ಇತರ
ಸದಸ್ಯರ ಕಾಳಜಿ,
ಶುಚಿತ್ವದ
ಕುರಿತು ಅರಿವು ಮೂಡಿಸುವ ಉದ್ದೇಶದಿಂದ
ವಿದ್ಯಾರ್ಥಿಪ್ರಿಯವಾದ ಈ ಯೋಜನೆಯನ್ನು
ಶಾಲಾ ಮಧ್ಯಾಹ್ನದೂಟ ಸಮಿತಿ
ಆರಂಭಿಸಿತ್ತು.
ಬರುವ
ಅಧ್ಯಯನ ವರ್ಷದಿಂದ ಎಲ್ಲಾ
ತರಗತಿಗಳಿಗೆ ಈ ಯೋಜನೆಯು ಕಾರ್ಯರೂಪಕ್ಕೆ
ಬರಲಿದ್ದು ಜನವರಿಯಿಂದಲೇ 8ನೇ
ತರಗತಿಗಳಲ್ಲಿ ಪರೀಕ್ಷಾರ್ಥವಾಗಿ
ಅನುಷ್ಟಾನಗೊಳಿಸಲಾಗುವುದೆಂದು
ಅಧಿಕೃತರು ತಿಳಿಸಿದ್ದಾರೆ.
ಪಾತ್ರೆಗಳ
ಕೊರತೆಯಿಂದಾಗಿ ಬುಧವಾರ 8ಸಿ
ತರಗತಿಯಲ್ಲಿ ಮಾತ್ರ ಈ ಯೋಜನೆಯ
ಅಧಿಕೃತ ಉದ್ಘಾಟನೆ ನಡೆಯಿತು.
ಶುಕ್ರವಾರ
8ಎ,
8ಡಿ,6ಎ
ಮತ್ತು 6ಸಿ
ತರಗತಿಗಳಿಗೆ ಈ ಯೋಜನೆಯು ವ್ಯಾಪಿಸಿದೆ.
ವಿದ್ಯಾರ್ಥಿಗಳ
ಮತ್ತು ಶಿಕ್ಷಕರ ಇಚ್ಛಾಶಕ್ತಿಯೇ
ಈ ಯೋಜನೆಯ ಹಿಂದಿರುವ ಕೀಲಿ ಕೈ
ಎಂದು ಹಲವರ ಅಭಿಪ್ರಾಯ.
ಮೊದಲನೇ
ದಿನವೇ ಹಲವು ವಿದ್ಯಾರ್ಥಿಗಳು
ಯೋಜನೆಯ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸಿದ್ದು ಎರಡನೇ ದಿನಕ್ಕೆ
ಮಧ್ಯಾಹ್ನದೂಟದ ಹಾಜರಿ ಸಂಖ್ಯೆಯಲ್ಲಿ
ಹೆಚ್ಚಳವುಂಟಾಗಿದ್ದು ಇದು ಯೋಜನೆಯು
ವಿದ್ಯಾರ್ಥಿಪ್ರಿಯವೆಂದು
ನಂಬಲಾಗಿದೆ.
ವಿದ್ಯಾರ್ಥಿಗಳ
ಬೆಂಬಲವಿದ್ದಲ್ಲಿ ಇದು ಸಂಪೂರ್ಣ
ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.
ವಿದ್ಯಾರ್ಥಿಪ್ರಿಯ
ಯೋಜನೆಯನ್ನು ಜ್ಯಾರಿಗೆ ತರಲು
ಉದ್ದೇಶಿಸಿದ ಶಾಲಾ ಮಧ್ಯಾಹ್ನದೂಟ
ಸಮಿತಿಗೆ ಪೈನಗರ್ ವಿಷನ್ ತುಂಬು
ಹೃದಯದ ಅಭಿನಂದನೆಗಳನ್ನು
ಸಲ್ಲಿಸುವುದು(ವೈಷ್ಣವ್
8ಸಿ
,
ಪೈನಗರ್
ವಿಷನ್ ಸಹಭೋಜನ ಬ್ಯೂರೋ ವರದಿ)
No comments:
Post a Comment