ತಬಲಾ
ನಿನಾದದೊಂದಿಗೆ ವೇಣುನಾದಕ್ಕೆ
ಮನಸೋತ ಜಿಲ್ಲಾ ಕಲೋತ್ಸವ
ತೃಕ್ಕರಿಪುರ,
ಜ.11:
ಏಷ್ಯಾದ
ಅತೀ ದೊಡ್ಡ ಕಲಾಮೇಳ ಎಂದೇ
ಬಿಂಬಿಸಲ್ಪಡುವ ಕೇರಳ ಶಾಲಾ
ಕಲೋತ್ಸವದ ಕಾಸರಗೋಡು ಕಂದಾಯ
ಜಿಲ್ಲಾ ಮಟ್ಟದ ಕಲೋತ್ಸವಕ್ಕೆ
ಬುಧವಾರ ತೆರೆ ಬಿದ್ದಿದೆ.
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಪ್ಲಸ್ ವನ್ ವಿಜ್ಞಾನ ವಿಭಾಗದ
ವಿದ್ಯಾರ್ಥಿ ಆಶಯ ಕೆ ಎಂ ಹಯರ್
ಸೆಕೆಂಡರಿ ವಿಭಾಗದ ತಬಲ ಸ್ಪರ್ಧೆಯಲ್ಲಿ
ಪ್ರಥಮ,
ಕೊಳಲು
ವಾದನದಲ್ಲಿ ದ್ವಿತೀಯ ಹಾಗೂ ಕನ್ನಡ
ಕವಿತಾರಚನೆಯಲ್ಲಿ ಪ್ರಥಮ ಸ್ಥಾನಪಡೆದು
ಶಾಲೆಯ ಕೀರ್ತಿಪತಾಕೆಯನ್ನು
ಎತ್ತಿಹಿಡಿದಿದ್ದು ಶಾಲೆಯಲ್ಲಿ
ಸಂಭ್ರಮ ಮನೆಮಾಡಿದೆ.
9ಸಿ
ತರಗತಿಯ ಕಾರ್ತಿಕ್ ಕೆ ಕನ್ನಡ
ಪ್ರಬಂಧ ರಚನೆಯಲ್ಲಿ ಜಿಲ್ಲಾ
ಮಟ್ಟದಲ್ಲಿ ದ್ವಿತೀಯ ಸ್ಥಾನಪಡೆದು
ತನ್ನ ಜಿಲ್ಲಾ ಕಲೋತ್ಸವದ ಸಾಧನೆಯನ್ನು
ಮುಂದುವರಿಸಿದ್ದಾರೆ.
ಕೇರಳ
ಶಾಲಾ ಕಲೋತ್ಸವವು ಸೋಮವಾರದಿಂದ
ಕಣ್ಣೂರು ಜಿಲ್ಲೆಯ ವಿವಿಧ
ಕೇಂದ್ರಗಳಲ್ಲಿ ನಡೆಯಲಿದ್ದು
ಎಲ್ಲಾ 14
ಜಿಲ್ಲೆಗಳ
ಸ್ಪರ್ಧಿಗಳೊಂದಿಗೆ ಆಶಯ ಕೆ ಎಂ
ಸ್ಪರ್ಧಿಸಲಿದ್ದಾರೆ.
ರಾಜ್ಯ
ಕಲೋತ್ಸವದಲ್ಲಿ ಸ್ಪರ್ಧಿಸುತ್ತಿರುವ
ಪೈವಳಿಕೆನಗರದ ಹೆಮ್ಮೆಯ ಸ್ಪರ್ಧಿ
ಆಶಯ ಅವರಿಗೆ ಪೈನಗರ್ ವಿಷನ್ ತುಂಬು
ಹೃದಯದ ಶುಭವನ್ನು ಕೋರುವುದು.
No comments:
Post a Comment