ತಬಲದ
ನಿನಾದದೊಂದಿಗೆ ಆಶಯ ಕೆ ಎಂ
ರಾಜ್ಯಮಟ್ಟದ ಕಲೋತ್ಸವಕ್ಕೆ
ತ್ರಿಕರಿಪುರ,
ಜ.6:
ತ್ರಿಕರಿಪುರದಲ್ಲಿ
ನಡೆಯುತ್ತಿರುವ ಕಾಸರಗೋಡು ಕಂದಾಯ
ಜಿಲ್ಲಾ ಶಾಲಾ ಕಲೋತ್ಸವದಲ್ಲಿ
ಹಯರ್ ಸೆಕೆಂಡರಿ ವಿಭಾಗದ ಕನ್ನಡ
ಕವಿತಾರಚನೆ ಮತ್ತು ತಬಲಾ ವಾದನದಲ್ಲಿ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯ ಪ್ಲಸ್ ವನ್
ವಿಜ್ಞಾನ ವಿಭಾಗದ ವಿದ್ಯಾರ್ಥಿ
ಆಶಯ ಕೆ ಎಂ ಎ ಗ್ರೇಡಿನೊಂದಿಗೆ
ಪ್ರಥಮ ಸ್ಥಾನಗಳಿಸಿ ಕೇರಳ
ರಾಜ್ಯಮಟ್ಟದ ಶಾಲಾ ಕಲೋತ್ಸವಕ್ಕೆ
ಆಯ್ಕೆಯಾಗಿದ್ದು ಪೈವಳಿಕೆನಗರದಲ್ಲಿ
ಹರ್ಷವನ್ನು ಸೃಷ್ಟಿಸಿದೆ.
ಕಳೆದ
ವರ್ಷ ತಬಲಾ ವಾದನದಲ್ಲಿ ರಾಜ್ಯ
ಮಟ್ಟದ ಖ್ಯಾತಿ ಇರುವ ಆಶಯ ಕೆ ಎಂ
ಕನ್ನಡ ನಾಡು ನುಡಿ ಸಂಸ್ಕೃತಿಯ
ಬಗ್ಗೆ ಆಸಕ್ತಿ ಹೊಂದಿದ್ದು ಕಳೆದ
ಕೆಲವು ವರ್ಷಗಳಿಂದ ಕನ್ನಡ ಕಥೆ,
ಕವನ,
ಚಿತ್ರ
ರಚನೆಯಲ್ಲಿ ಉಪಜಿಲ್ಲಾ ಹಾಗೂ
ಜಿಲ್ಲಾ ಮಟ್ಟದಲ್ಲಿ ತನ್ನ
ಪ್ರತಿಭೆಯನ್ನು ತೋರ್ಪಡಿಸಿದ
ಖ್ಯಾತಿ ಇದೆ.
ಎಳವೆಯಿಂದಲೇ
ತಬಲಾ,
ಕೊಳಲುವಾದನ
ಮುಂತಾದ ಉಪಕರಣಗಳಲ್ಲಿ ಆಸಕ್ತಿ
ತೋರಿಸುತ್ತಿರುವ ಆಶಯ ಕೆ ಎಂ ಈ
ಕ್ಷೇತ್ರದಲ್ಲಿ ಉತ್ತಮ ಸಾಧನೆ
ಮಾಡುವ ಅಭಿಲಾಷೆ ಹೊಂದಿದ್ದಾರೆ.
ಪೆನ್ಸಿಲ್
ಡ್ರಾಯಿಂಗ್,
ವಾಟರ್
ಕಲರ್,
ಕಾರ್ಟೂನ್
ತನ್ನ ಹವ್ಯಾಸವಾಗಿದ್ದು ಕಲಿಕೆಯಲ್ಲೂ
ಮುಂದಿದ್ದು ಶಿಕ್ಷಕರ ಪ್ರೀತಿ
ಹಾಗೂ ಓರಗೆಯವರ ಅಭಿಮಾನಗಳಿಸಿ
ಮಿತಭಾಷಿಯಾಗಿ ಸರಳ ಸಜ್ಜನಿಕೆಯಲ್ಲಿ
ಪೈವಳಿಕೆನಗರದ ಗಮನ ಸೆಳೆದಿರುವ
ಆಶಯ ಕೆ ಎಂ ಮುಂದಿನ ಭವಿಷ್ಯವು
ಸುಗಮವಾಗಿ ಸಾಗಿ ಕಲಾ ಸಾಧನೆಯಲ್ಲಿಯೂ
ಕಲಾಸೇವೆಯಲ್ಲಿಯೂ ಉತ್ತಮವಾಗಿ
ಪ್ರಯತ್ನಿಸಿ ಯಶಸ್ಸು ದೊರಕಲಿ
ಎಂದು ಪೈನಗರ್ ವಿಷನ್ ಬಳಗವು
ಶುಭಹಾರೈಸುವುದು.(ಪೈನಗರ್
ವಿಷನ್ ಕಲೋತ್ಸವ ಬ್ಯೂರೋ ವರದಿ)
No comments:
Post a Comment