BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆ ನಗರ ಶಾಲೆಯಲ್ಲಿ ಸಂಭ್ರಮದ ಕಲೋತ್ಸವ
ಪೈವಳಿಕೆನಗರ, .18: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಕಲೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಮಂಗಳವಾರ ಪೂರ್ವಾಹ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪೈವಳಿಕೆ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುನೀತಾ ವಾಲ್ಟಿ ಡಿಸೋಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಪಿ, ಹಯರ್ ಸೆಕೆಂಡರಿ ವಿಭಾಗದ ಶ್ರೀ ರತ್ನಾಕರನ್ ಸರ್, ರಕ್ಷಕ ಶಿಕ್ಷಕ ಸಂಘದ ಶ್ರೀ ಹುಸೈನ್ ಮಾಸ್ತರ್, ಶ್ರೀ ಕೃಷ್ಣ, ಹಯರ್ ಸೆಕೆಂಡರಿ ವಿಭಾಗದ ಶ್ರೀ ನಾರಾಯಣ ರಾವ್, ಶ್ರೀ ರವೀಂದ್ರನಾಥ್ ಕೆ ಆರ್ ಉಪಸ್ಥಿತರಿದ್ದರು. ಮಂಜೇಶ್ವರ ಉಪಜಿಲ್ಲಾ ಅಕ್ಷರ ಮುಟ್ಟಂ ರಸಪ್ರಶ್ನೆಯ ಹಯರ್ ಸೆಕೆಂಡರಿ ವಿಜೇತರಾದ ಆಯಿಷತ್ ಅಫ್ರೀನಾ ಹಾಗೂ ಮೊಹಮ್ಮದ್ ಜುನೈದ್ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅದೇ ರೀತಿಯಲ್ಲಿ ಪೈನಗರ್ ವಿಷನ್ ಪ್ರಾಯೋಜಿತ ದಸರಾ ನಾಡಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಆಚರಣಾ ಸಮಿತಿ ಸಂಚಾಲಕರಾದ ಶ್ರೀಮತಿ ಶಶಿಕಲಾ ಕೆ ವಂದಿಸಿದರು. ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ ಎಸ್ ಕಾರ್ಯಕ್ರಮ ನಡೆಸಿಕೊಟ್ಟರು. ರಮ್ಯ 10ಸಿ, ಪ್ರಣೀತಾ 10ಸಿ, ಪೂಜಾಕುಮಾರಿ 9ಸಿ, ಶುಹೈಮಾ 9ಸಿ, ಅಕ್ಷತಾ 9ಎ ಪ್ರಾರ್ಥನೆ ಹಾಡಿದರು. ಮಂಗಳವಾರ ನಾಲ್ಕು ಹಾಗೂ ಬುಧವಾರ ಎರಡು ವೇದಿಕೆಗಳಲ್ಲಾಗಿ ವಿದ್ಯಾರ್ಥಿಗಳ ಪ್ರತಿಭೆಗಳು ಅನಾವರಣಗೊಂಡವು. ಎರಡು ದಿನಗಳ ವಾರ್ಷಿಕ ಉತ್ಸವದಲ್ಲಿ ಸುಮಾರು 1ನೇ ತರಗತಿಯಿಂದ ಪ್ಲಸ್|ಟುವರೆಗೆ ಸುಮಾರು ಐನೂರಕ್ಕಿತಂಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಎರಡನೇ ದಿನದ ನಾಟಕದೊಂದಿಗೆ ಕಾರ್ಯಕ್ರಮಗಳು ಅಂತಿಮಗೊಂಡವು.(ಧ್ವಾನಿಷ್, ಚರಣ್ ರಾಜ್, ಕಾರ್ತಿಕ್ ಕೆ 9ಸಿ ತರಗತಿ)

ಪೈವಳಿಕೆನಗರದಲ್ಲಿ ಕ್ರೀಡಾಕೂಟ ಸಂಪನ್ನ

ಪೈವಳಿಕೆನಗರ, .20: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕ್ರೀಡಾ ಕೂಟ ಗುರುವಾರ ಆರಂಭವಾಯಿತು. ಬೆಳಗ್ಗೆ ನಡೆದ ಕೆಂಪು, ಹಸಿರು, ಹಳದಿ, ನೀಲಿ ಗುಂಪುಗಳ ವೃತ್ತ  ಪಥ ಸಂಚಲನದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಗೌರವವಂದನೆ ಸ್ವೀಕರಿಸಿದರು. ನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಪಿ ಶಾಲಾ ಧ್ವಜಾರೋಹಣ ನೆರವೇರಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಉಪಸ್ಥಿತರಿದ್ದರು. ನಂತರ ಎಲ್ಲಾ ಗುಂಪಿನ ವಿದ್ಯಾರ್ಥಿಗಳು ಶಾಲಾ ನಾಯಕಿ ಬೋಧಿಸಿದ ಪ್ರತಿಜ್ಞೆಯನ್ನು ಹೇಳಿದರುಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ ಎಸ್ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಕೆ ಎಂ ಬಲ್ಲಾಳ್ ನೇತೃತ್ವ ನೀಡಿದರು. ಎರಡು ದಿನಗಳ ಕ್ರೀಡಾಕೂಟ ಶುಕ್ರವಾರ ಸಮಾರೋಪಗೊಂಡಿತು.  (ಧ್ವಾನಿಷ್ 9ಸಿ)

ಸೇವಾ ಮನೋಭಾವದಿಂದ ಸ್ವಯಂ ಸೇವಕರು


ಪೈವಳಿಕೆನಗರ, . 21: ಪೈವಳಿಕೆನಗರ ಶಾಲಾ ಕಲೋತ್ಸವದಲ್ಲಿ ಕಾರ್ಯಕ್ರಮದ ಬೆನ್ನೆಲುಬುಗಳಾದವರು ಸ್ವಯಂಸೇವಕರು ಎಂದರೆ ತಪ್ಪಲ್ಲ. ಕಲೋತ್ಸವದ ಹಿಂದಿನ ದಿನ, ರಂಗ ಸಜ್ಜೀಕರಣಕ್ಕೆ ಸಹಕರಿಸಿದ ವಿದ್ಯಾರ್ಥಿಗಳು ನಾಲ್ಕು ದಿನಗಳ ಕಾಲ ತಮ್ಮ ಸ್ವಯಂ ಸೇವೆಯಿಂದ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ. 8ಎ ತರಗತಿಯ ರಕ್ಷಣ್ ರೈ, ಜೋಶನ್, ಧನುಷ್ ಕುಮಾರ್ ಜೆ, 8ಡಿ ತರಗತಿಯ ರೋಹಿತ್ ಮೊಂತೆರೋ, ಅಶ್ವಿನಿ, ಕಾವ್ಯಶ್ರೀ, 8ಸಿ ತರಗತಿಯ ಅಭಿಷೇಕ್, ಮೊಹಮ್ಮದ್ ಫಹದ್, ಲಕ್ಷ್ಮೀಶಾ, ಸುದೀಪ್, ಮೊಹಮ್ಮದ್ ರಾಝಿಕ್, ಮೊಹಮ್ಮದ್ ಅನಸ್, ಸುನಿಲ್, ಪುನಿತ್, ದೀಪಕ್, ಫಾತಿಮತ್ ಶಹಾನಾ, ಮರಿಯಮತ್ ರಾಹಿಲಾ, 9ಎ ತರಗತಿಯ ಅಕ್ಷಯ್ ಎ, ಝೈನಾಬಿ ಅರ್ಫಾನಾ,   9ಸಿ ತರಗತಿಯ ಅಜಯ್ ಪ್ರಸಾದ್, ಸ್ವಸ್ತಿಕ್ ರೈ, ಚರಣ್ ರಾಜ್, ಶಾನಿಬಾ, ಉಮೈಬಾ, ಶಾರದಾ, ಆಯಿಷತ್ ಬಾಸಿಲಾ, ಅಕ್ಷತಾ, ರಕ್ಷಿತಾ, ಸುಶ್ಮಾ, 10ಎ ತರಗತಿಯ ಚಂದ್ರ ಕೆ, 10ಸಿ ತರಗತಿಯ ಮೋಹನ್ ಕುಮಾರ್ ಸ್ವಯಂಸೇವಕರಾಗಿ ಸಹಕರಿಸಿದರು. ಸ್ವಯಂಸೇವಕರನ್ನು ಊಟೋಪಚಾರ, ವಿವಿಧ ವೇದಿಕೆಗಳು, ದಾಖಲೆಯ ವಿಭಾಗ, ಟ್ರ್ಯಾಕ್ ಮುಂತಾದ ವಿವಿಧ ವಿಭಾಗಗಳಲ್ಲಾಗಿ ನಿಯೋಜಿಸಲಾಗಿತ್ತು. ಸ್ವಯಂ ಸೇವಕರ ಕರ್ತವ್ಯ ನಿಷ್ಟೆಗೆ  ಶಾಲಾ ಆಚರಣಾ ಸಮಿತಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಸಹಕರಿಸಿದ ಸ್ವಯಂ ಸೇವಕರಿಗೆ ಪೈನಗರ್ ವಿಷನ್ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತದೆ.


ಸ್ಪೋರ್ಟ್ಸ್ ಟ್ರ್ಯಾಕ್ ನಲ್ಲಿ ಕಳೆ ಹೆಚ್ಚಿಸಿದ ಸ್ಪೋರ್ಟ್ಸ್ ಮೀಟ್ ಹಾಡು


ಪೈವಳಿಕೆನಗರ, .20: ಕ್ರೀಡೋತ್ಸವ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳನ್ನು ಹೊರಗೆಡಹುವ ಒಂದು ವೇದಿಕೆಯಾಗಿದೆ ಎಂದರೆ ತಪ್ಪಲ್ಲ. ಕ್ರೀಡಾ ಉಲ್ಲಾಸವನ್ನು ಹೆಚ್ಚಿಸಲು, ಕ್ರೀಡಾಳುಗಳಿಗೆ ಹುರುಪನ್ನು ಮೂಡಿಸಲು ವೀಕ್ಷಕರು ಚಪ್ಪಾಳೆ ತಟ್ಟುವುದು ವಾಡಿಕೆ. ಆದರೆ ಸ್ಪೋರ್ಟ್ಸ್ ರಿದಂ ಹಾಡುಗಳು ಕ್ರೀಡಾಳುಗಳ ಹುರುಪನ್ನು  ಹೆಚ್ಚಿಸಲು ಸಹಕಾರಿಯಾಗಿಸುವುದು. ಈ ಬಾರಿಯ ಸ್ಪೋರ್ಟ್ಸ್ ಮೀಟ್ ಗಾಗಿ ಪೈನಗರ್ ವಿಷನ್ ವಿಶೇಷವಾದ ರಿಮೇಕ್ ಹಾಡನ್ನು ಪರಿಚಯಿಸಿದೆ. ಟ್ರಾಕಿನ ಮೇಲೆ ಓಡೋಣ ಬನ್ನಿ ಎಂಬ ಹಾಡು ಕ್ರೀಡಾಭಿಮಾನಿಗಳ ಹೃದಯವನ್ನು ಗೆದ್ದಿದೆ. ಕಳೆದ ಬಾರಿಯ ಸಾಕ್ಷ್ಯಚಿತ್ರದ ನನ್ನ ಶಾಲೆ ಹಾಡಿನಿಂದ ಪರಿಚಿತನಾದ ಪೈನಗರ್ ವಿಷನ್ 10ಸಿ ಪ್ರತಿನಿಧಿ ದುರ್ಗಾಪ್ರಸಾದ್ ಜೆ ಈ ಹಾಡಿಗೆ ದನಿನೀಡಿದ್ದು ಸುಶ್ರಾವ್ಯವಾಗಿದೆ. ಶಿಕ್ಷಕರಾದ ಶ್ರೀ ಪ್ರವೀಣ್ ಕನಿಯಾಲ ಸಾಹಿತ್ಯ ಬರೆದು ರಿಮೇಕ್ ಸಂಗೀತ ನಿರ್ದೇಶಿಸಿದ್ದಾರೆ.

No comments:

Post a Comment