BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆಯಲ್ಲಿ ಪೈವಳಿಕೆನಗರ ಶಾಲೆಗೆ ಮೂರನೇ ಸ್ಥಾನ

ಮಂಗಲ್ಪಾಡಿ, .14: ಮಂಗಲ್ಪಾಡಿ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆಯಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಗೆ ಹೈಸ್ಕೂಲ್ ವಿಭಾಗದಲ್ಲಿ ತೃತೀಯ ಸ್ಥಾನ ಲಭಿಸಿದೆ. ಪೈನಗರ್ ವಿಷನ್ ವಿದ್ಯಾರ್ಥಿ ಸಂಪಾದಕ ಧ್ವಾನಿಷ್ ತೀವ್ರ ಪೈಪೋಟಿ ಎದುರಿಸಿ ಟೈ ಬ್ರೇಕರ್ ಮೂಲಕ ತೃತೀಯ ಸ್ಥಾನಕ್ಕೆ ಪಾತ್ರರಾದವರು. ಧ್ವಾನಿಷ್|ಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು.(ಕಾರ್ತಿಕ್ ಕೆ, ಧ್ವಾನಿಷ್, ಚರಣ್ ರಾಜ್ 9ಸಿ)

ಸೆಲೆಕ್ಷನ್ ಖುಷಿ ತಂದಿದೆ ಶಿವಕುಮಾರ್

ಪೈವಳಿಕೆನಗರ, .14: ಜಿಲ್ಲಾ ಮಟ್ಟದ ಜೂನಿಯರ್ ಹುಡುಗರ ಟೆನಿಸ್ ಟೀಂನಲ್ಲಿ ಆಯ್ಕೆಯಾದದ್ದು ಖುಷಿ ತಂದಿದೆ. ಅಲ್ಪಾವಧಿಯ ಪ್ರಯತ್ನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಇದಕ್ಕೆ ಕಾರಣಕರ್ತರಾದ ನನ್ನ ರಕ್ಷಕರು, ಪಿಟಿ ಸರ್, ಇತರ ಶಿಕ್ಷಕರು ಹಾಗೂ ನನ್ನ ಗೆಳೆಯರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು 9ಎ ತರಗತಿಯ ಶಿವಕುಮಾರ್ ಪೈನಗರ್ ವಿಷನ್ ಗೆ ತಿಳಿಸಿದ್ದಾರೆ. ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ನಂತರ  ಶಿವಕುಮಾರ್ ಪೈನಗರ್ ವಿಷನ್ ನೊಂದಿಗೆ ಸಂತಸ ಹಂಚಿಕೊಂಡರು. ಮಿತಭಾಷಿ ಪ್ರತಿಭಾವಂತ ಅರಳು ಪ್ರತಿಭೆ ಶಿವಕುಮಾರ್ ಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು.

ಐಟಿ ಮೇಳ ವಿಜೇತರು

ಪೈವಳಿಕೆನಗರ, .14 : ಪೈವಳಿಕೆನಗರ ಶಾಲೆಯಲ್ಲಿ ಐಟಿ ಕ್ಲಬ್ ಐಟಿ ಮೇಳದಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿದೆ. ಯುಪಿ  ಮಲಯಾಳಂ ಟೈಪಿಂಗ್ ನಲ್ಲಿ 6ಬಿ ತರಗತಿಯ ಫಾತಿಮಾ ಪ್ರಥಮ, 6ಬಿ ತರಗತಿಯ ಅಫ್ ನಾಝ್ ದ್ವಿತೀಯಹೈಸ್ಕೂಲ್ ಮಲಯಾಳಂ ಟೈಪಿಂಗ್ ನಲ್ಲಿ 9ಬಿ ತರಗತಿಯ ಶೈಮಾ ಪ್ರಥಮ, 9ಬಿ ತರಗತಿಯ ಅಝ್ಮೀನಾ ದ್ವಿತೀಯ, ಕನ್ನಡ ಟೈಪಿಂಗ್ ನಲ್ಲಿ 9ಎ ತರಗತಿಯ ವೈಭವಿ ಪ್ರಥಮ, 9ಸಿ ತರಗತಿಯ ಖದೀಜತ್ ಕುಬ್ರಾ ದ್ವಿತೀಯ, ಡಿಜಿಟಲ್ ಪೈಂಟಿಂಗ್ ನಲ್ಲಿ 9ಎ ತರಗತಿಯ ಆದರ್ಶ್ ಪ್ರಥಮ, 8ಸಿ ತರಗತಿಯ ರುಮೈಝಾ ದ್ವಿತೀಯ, ಹೈಸ್ಕೂಲ್ ರಸಪ್ರಶ್ನೆಯಲ್ಲಿ 9ಸಿ ತರಗತಿಯ ಕಾರ್ತಿಕ್ ಕೆ ಪ್ರಥಮ ಸ್ಥಾನಗಳಿಸಿದ್ದಾರೆ. ಅಭಿನಂದನೆಗಳು.


No comments:

Post a Comment