ಪೈನಗರ್
ವಿಷನ್ ದಸರಾ ನಾಡಹಬ್ಬದ ವಿವಿಧ
ಸ್ಪರ್ಧೆಗಳು
ಪೈವಳಿಕೆನಗರ, ಅ.7: ಪೈನಗರ್ ವಿಷನ್ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಕಲೆಗಳನ್ನು ಪ್ರೋತ್ಸಾಹಿಸುತ್ತಾ ಬರುವುದರ ಜತೆಗೆ ಕನ್ನಡ ನಾಡು ನುಡಿ ಸಂಸ್ಕೃತಿಗೆ ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿರುವ ವಿಚಾರ ತಮಗೆಲ್ಲಾ ತಿಳಿದಿದೆ. ಈ ಬಾರಿ ಕನ್ನಡ ಹಬ್ಬವಾದ ದಸರಾ ನಾಡಹಬ್ಬವನ್ನು ಪೈವಳಿಕೆನಗರದಲ್ಲಿ ವಿವಿಧ ಸ್ಪರ್ಧೆಗಳೊಂದಿಗೆ ಆಚರಿಸಲು ನಿರ್ಧರಿಸಿದ್ದು ಸಮಯದ ಪರಿಮಿತಿಯಿಂದ ಸಂಭ್ರಮಗೊಳಿಸಲು ಸಾಧ್ಯವಾಗಿಲ್ಲ. ಈ ಬಾರಿಯ ಪರಿಮಿತಿಯನ್ನು ಇಲ್ಲವಾಗಿಸಿ ಬರುವ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪೈನಗರ್ ವಿಷನ್ ಆಲೋಚಿಸಿದೆ. ಕಥಾರಚನೆ, ಕವಿತಾ ರಚನೆ, ಪ್ರಬಂಧ ರಚನೆ, ಚಿತ್ರರಚನೆ, ಕಂಠಪಾಠ, ಜನಪದ ಗೀತೆ, ಭಾಷಣ, ಮಿಮಿಕ್ರಿ, ಪೋಸ್ಟರ್ ರಚನೆ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುಪಿ ವಿಭಾಗದ ಕಂಠಪಾಠದಲ್ಲಿ 5ಎ ತರಗತಿಯ ಭವ್ಯ ಎಸ್ ಪ್ರಥಮ, 5ಸಿ ತರಗತಿಯ ಮಂಜೂಷಾ ದ್ವಿತೀಯ, ಹೈಸ್ಕೂಲ್ ಕಂಠಪಾಠದಲ್ಲಿ 9ಎ ತರಗತಿಯ ಪ್ರಜ್ಞಾ ಆರ್ ಪ್ರಥಮ, 10ಸಿ ತರಗತಿಯ ಪ್ರಣೀತಾ ಪಿ ದ್ವಿತೀಯ, ಯುಪಿ ಕವಿತಾ ರಚನೆಯಲ್ಲಿ 7ಎ ತರಗತಿಯ ಹರ್ಷಿತಾ ಪ್ರಥಮ, 7ಎ ತರಗತಿಯ ಆಯಿಷತ್ ಉನೈಸಾ ದ್ವಿತೀಯ, ಹೈಸ್ಕೂಲ್ ಕವಿತಾರಚನೆಯಲ್ಲಿ 8ಎ ತರಗತಿಯ ಜಯಶ್ರೀ ಡಿ ಪ್ರಥಮ, 8ಎ ತರಗತಿಯ ಸೌಮ್ಯ ಆರ್ ದ್ವಿತೀಯ, ಯುಪಿ ಪ್ರಬಂಧರಚನೆಯಲ್ಲಿ 7ಎ ತರಗತಿಯ ಮನೀಷ್ ಪಿ ಪ್ರಥಮ, 7ಎ ತರಗತಿಯ ಸಾತ್ವಿಕ್ ಎನ್ ದ್ವಿತೀಯ, ಹೈಸ್ಕೂಲ್ ಪ್ರಬಂಧ ರಚನೆಯಲ್ಲಿ 9ಸಿ ತರಗತಿಯ ಕಾರ್ತಿಕ್ ಕೆ ಪ್ರಥಮ, 9ಎ ತರಗತಿಯ ಪ್ರಜ್ಞಾ ಆರ್ ದ್ವಿತೀಯ, ಯುಪಿ ಕಥಾರಚನೆಯಲ್ಲಿ 6ಸಿ ತರಗತಿಯ ಫಾತಿಮತ್ ಮುನ್ಶೀನಾ ಪ್ರಥಮ, 7ಸಿ ತರಗತಿಯ ರಮ್ಯಶ್ರೀ ಡಿ ದ್ವಿತೀಯ, ಹೈಸ್ಕೂಲ್ ಕಥಾರಚನೆಯಲ್ಲಿ 10ಎ ತರಗತಿಯ ಜಗದೀಶ್ ವೈ ಪ್ರಥಮ, 10ಸಿ ತರಗತಿಯ ಜ್ಯೋತಿ ಬಿ ದ್ವಿತೀಯ, ಯುಪಿ ಚಿತ್ರರಚನೆಯಲ್ಲಿ 7ಸಿ ತರಗತಿಯ ಸ್ವಾತಿ ಪ್ರಥಮ, 7ಸಿ ತರಗತಿಯ ರಮ್ಯಶ್ರಿ ಡಿ ದ್ವಿತೀಯ, ಹೈಸ್ಕೂಲ್ ಚಿತ್ರರಚನೆಯಲ್ಲಿ 10ಸಿ ತರಗತಿಯ ಮೊಹಮ್ಮದ್ ಅಲಿ ಶಿಹಾಬ್ ಪ್ರಥಮ, 10ಸಿ ತರಗತಿಯ ಪ್ರಜ್ವಲ್ ಎ ದ್ವಿತೀಯ, ಯುಪಿ ಮಿಮಿಕ್ರಿಯಲ್ಲಿ 7ಎ ತರಗತಿಯ ಅಜಯ್ ಎ ಪ್ರಥಮ, 5ಸಿ ತರಗತಿಯ ನಮ್ರತಾ ಟಿ ದ್ವಿತೀಯ, ಯುಪಿ ಏಕಪಾತ್ರಾಭಿನಯದಲ್ಲಿ 5ಸಿ ತರಗತಿಯ ಶಾರ್ವಿ ಪ್ರಥಮ, ಯುಪಿ ಜನಪದ ಗೀತೆಯಲ್ಲಿ, ಹೈಸ್ಕೂಲ್ ಜನಪದ ಗೀತೆಯಲ್ಲಿ ಗಳಿಸಿದ್ದಾರೆ. ಹೈಸ್ಕೂಲ್ ವಿಭಾಗದ ಭಾಷಣ, ಮಿಮಿಕ್ರಿ, ಏಕಪಾತ್ರಾಭಿನಯ, ಯುಪಿ ವಿಭಾಗದ ಭಾಷಣ ಸ್ಪರ್ಧೆಯನ್ನು ಸ್ಪರ್ಧಿಗಳ ಕೊರತೆಯಿಂದಾಗಿ ರದ್ದುಗೊಳಿಸಲಾಗಿದೆ. ಪ್ರತಿ ತರಗತಿಗಳಿಗೆ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪೋಸ್ಟರ್ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಅದಕ್ಕೆ ನೀರಸವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ (ಯಾವುದೇ ತರಗತಿಯಿಂದ ಪೋಸ್ಟರ್ ರಚನೆಗೆ ತರಗತಿ ಪ್ರತಿನಿಧಿಗಳು ಸೇರಿದಂತೆ ಯಾವ ವಿದ್ಯಾರ್ಥಿಗಳು ತಯಾರಾಗಲಿಲ್ಲ) ಪೈನಗರ್ ವಿಷನ್ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಪೈನಗರ್ ವಿಷನ್ ಬಳಗವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದು. ಸ್ಪರ್ದೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಬೆಗಳನ್ನು ಒರೆಗೆ ಹಚ್ಚಿದ, ವಿಜೇತರಾದ, ನಾಡಹಬ್ಬ ಆಚರಣೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಪೈನಗರ್ ವಿಷನ್ ಬಳಗವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದು.(ಪೈನಗರ್ ವಿಷನ್ ದಸರಾ ನಾಡಹಬ್ಬ ವಿಶೇಷ ವರದಿ)
ಪೈವಳಿಕೆಯಲ್ಲಿ
ದಸರಾ ನಾಡಹಬ್ಬ
ಪೈವಳಿಕೆ:
ಗಡಿನಾಡ
ಕಲಾಸಂಘ (ರಿ)
ಪೈವಳಿಕೆ
ಇವರು ಕಳೆದ 28
ವರ್ಷಗಳಿಂದ
ಆಚರಿಸಿಕೊಂಡು ಬರುತ್ತಿರುವ ದಸರಾ
ನಾಡಹಬ್ಬ ಮಹೋತ್ಸವವು ಶನಿವಾರ
ಪೈವಳಿಕೆನಗರ ಪ್ರೌಢಶಾಲೆಯಲ್ಲಿ
ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ಬೆಳಗ್ಗೆ
10
ಗಂಟೆಗೆ
ನಡೆದ ಉದ್ಘಾಟನಾ ಸಮಾರಂಭದಲ್ಲಿ
ಶ್ರೀ ಕೋಚಣ್ಣ ಶೆಟ್ಟಿ ಮಾಸ್ತರ್
ಅಧ್ಯಕ್ಷತೆ ವಹಿಸಿದ್ದರು.
ಪೈವಳಿಕೆ
ಗ್ರಾಮ ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ಭಾರತಿ ಜೆ ಶೆಟ್ಟಿ
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಕ್ಕಳಲ್ಲಿ
ಸಾಂಸ್ಕೃತಿಕ ಅರಿವು ಸಾಮಾಜಿಕ
ಒಗ್ಗಟ್ಟು ಬೆಳೆಸುವ ಇಂತಹ
ನಾಡಹಬ್ಬಗಳು ಅತೀ ಅಗತ್ಯ ಎಂಬುದಾಗಿ
ಅವರು ತಿಳಿಸಿದರು.
ಮುಖ್ಯ
ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡು
ಸರಕಾರಿ ಕಾಲೇಜಿನ ಕನ್ನಡ ವಿಭಾಗದ
ಸಹ ಪ್ರಾಧ್ಯಾಪಕರಾದ ಡಾ.
ರತ್ನಾಕರ
ಮಲ್ಲಮೂಲೆಯವರು ಭಾರತದಲ್ಲಿ
ದಸರಾ ಹಬ್ಬದ ಆರಂಭ,
ಅದರ
ಉದ್ದೇಶ,
ಕರ್ನಾಟಕದಲ್ಲಿ
ದಸರಾ ಹಬ್ಬದ ಆರಂಭ ಅದರ ಪೌರಾಣಿಕ
ಹಾಗೂ ಚಾರಿತ್ರಿಕ ಹಿನ್ನಲೆ,
ಸರಸ್ವತಿ
ದೇವಿಗೆ ಶಿಲೆಯ ಪೀಠ ಹಾಗೂ ಲಕ್ಷ್ಮೀ
ದೇವಿಗೆ ಕಮಲದ ಆಸನ ನೀಡಿರುವಲ್ಲಿ
ಇರುವ ಸಂದೇಶ ಇತ್ಯಾದಿಗಳ ಕುರಿತು
ಮಾತನಾಡಿ ಈ ನಾಡಹಬ್ಬವು ಮನುಷ್ಯ
ಮನಸ್ಸಿನ ದುಷ್ಟ ಚಿಂತನೆಗಳನ್ನು
ನಾಶಮಾಡಿ,
ಉತ್ತಮ
ಚಿಂತನೆಗಳನ್ನು ಬೆಳೆಸಲು
ಸಹಾಯಕವಾಗಿದೆ ಎಂದರು.
ಪೈವಳಿಕೆನಗರ
ಸರಕಾರಿ ಪ್ರೌಢಶಾಲೆಯ ಹಿರಿಯ
ಶಿಕ್ಷಕರಾದ ಶ್ರೀ ರವೀಂದ್ರನಾಥ್
ಕೆ ಆರ್ ಶುಭಹಾರೈಸಿದರು.
ಗಡಿನಾಡ
ಕಲಾಸಂಘದ ಕಾರ್ಯದರ್ಶಿ ಶ್ರೀ
ರಾಘವ ಬಲ್ಲಾಳ್ ಸ್ವಾಗತಿಸಿದರು.
ರಾಜ್ಯಪ್ರಶಸ್ತಿ
ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರಾದ
ಶ್ರೀ ಪಿ ಮೊಹಮ್ಮದ್ ಧನ್ಯವಾದ
ಸಮರ್ಪಿಸಿದರು.
ಪೈವಳಿಕೆನಗರ
ಪ್ರೌಢಶಾಲಾ ಕನ್ನಡ ಶಿಕ್ಷಕಿ
ಶ್ರೀಮತಿ ಶಶಿಕಲಾ ಕೆ ಕಾರ್ಯಕ್ರಮ
ನಿರೂಪಿಸಿದರು.
ನಂತರ
ಪೈವಳಿಕೆ ಪಂಚಾಯತ್ ವ್ಯಾಪ್ತಿಯ
ವಿವಿಧ ಶಾಲೆಗಳ ಮಕ್ಕಳಿಗಾಗಿ
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು
ನಡೆದವು.
ಪೈವಳಿಕೆಯ
ದಸರಾ ನಾಡಹಬ್ಬದಲ್ಲಿ ಸ್ವಯಂಸೇವಕರಾದ
ವಿದ್ಯಾರ್ಥಿಗಳು
ಪೈವಳಿಕೆನಗರ,
ಅ.8:ಗಡಿನಾಡ
ಕಲಾಸಂಘ ಪೈವಳಿಕೆ ಇದರ ಆಶ್ರಯದಲ್ಲಿ
ಪೈವಳಿಕೆನಗರ ಶಾಲೆಯಲ್ಲಿ ನಡೆದ
ದಸರಾ ನಾಡಹಬ್ಬ ಮಹೋತ್ಸವದಲ್ಲಿ
ವಿದ್ಯಾರ್ಥಿಗಳು ಸ್ವಯಂಸೇವಕರಾಗಿ
ಕಾರ್ಯನಿರ್ವಹಿಸಿ ಎಲ್ಲರ
ಮೆಚ್ಚುಗೆಗಳಿಸಿದ್ದಾರೆ.
10ಎ
ತರಗತಿಯ ಪೈನಗರ್ ವಿಷನ್ ಪ್ರತಿನಿಧಿಗಳಾದ
ಜಗದೀಶ್,
ರಕ್ಷಿತ್
ಕುಮಾರ್,
ರಜತ್
ಕುಮಾರ್,
10ಸಿ
ತರಗತಿಯ ಪ್ರತಿನಿಧಿಗಳಾದ ಪ್ರಜ್ವಲ್
ಹಾಗೂ 10ಎ
ತರಗತಿಯ ಚಂದ್ರ,
ಶಾಜಿ,
ಕಾರ್ತಿಕ್
10ಸಿ
ತರಗತಿಯ ಮೋಹನ ಸ್ವಯಂಸೇವಕರಾಗಿ
ಗಮನಸೆಳೆದರು.
ಶುಕ್ರವಾರ
ಸಾಯಂಕಾಲ ಕಾರ್ಯಕ್ರಮಕ್ಕೆ ಬೇಕಾಗಿ
ಸಭಾಂಗಣದ ಹಾಗೂ ರಂಗಸಜ್ಜಿಕೆಯಲ್ಲಿ
ಆಯೋಜಕರೊಂದಿಗೆ ಸಹಕರಿಸಿ ಕಾರ್ಯಕ್ರಮದ
ದಿನ ಚಹಾ,
ಊಟದ
ವ್ಯವಸ್ಥೆಯಲ್ಲಿ ಸಹಾಯಕರಾಗಿ,
ವೇದಿಕೆಯಲ್ಲಿ
ಧ್ವನಿ ಮತ್ತು ಬೆಳಕು ಸಹಾಯಕರಾಗಿ
ಕರ್ತವ್ಯ ನಿರ್ವಹಿಸಿದವರನ್ನು
ಕಾರ್ಯಕ್ರಮ ಸಂಯೋಜಕರು ಕೊಂಡಾಡಿದ್ದಾರೆ.
ಭೋಜನ
ಕಾರ್ಯಕ್ರಮದ ನಂತರ ಪಾಕ ಪಾತ್ರೆಗಳ
ಶುಚೀಕರಣದಲ್ಲಿ ತೊಡಗಿ ನಂತರ
ಕಾರ್ಯಕ್ರಮದ ಸಮಾರೋಪದವರೆಗೆ
ಇದ್ದು ರಂಗಮಂಟಪವನ್ನು ತೆರವುಗೊಳಿಸುವ
ತನಕ ಪ್ರಾಮಾಣಿಕ ಕರ್ತವ್ಯ
ನಿರ್ವಹಿಸಿದ ಪೈನಗರ್ ವಿಷನ್
ಪ್ರತಿನಿಧಿಗಳಿಗೆ ತುಂಬು ಹೃದಯದ
ಕೃತಜ್ಞತೆಗಳು.
ದಸರಾ
ನಾಡಹಬ್ಬದಲ್ಲಿ ಹೈಸ್ಕೂಲ್ ಹುಡುಗರ
ಕನ್ನಡ ಭಾಷಣದಲ್ಲಿ 9ಸಿ
ತರಗತಿಯ ಪೈನಗರ್ ವಿಷನ್ ವಿದ್ಯಾರ್ಥಿ
ಸಂಪಾದಕ ಧ್ವಾನಿಷ್ ದ್ವಿತೀಯ
ಸ್ಥಾನಗಳಿಸಿದರೆ,
ಹುಡುಗಿಯರ
ಭಾಷಣದಲ್ಲಿ 9ಎ
ತರಗತಿಯ ಪ್ರಜ್ಞಾ ಆರ್ ದ್ವಿತೀಯ
ಸ್ಥಾನಗಳಿಸಿದ್ದಾರೆ.
ಹುಡುಗರ
ಜನಪದ ಗೀತೆಯಲ್ಲಿ 10ಸಿ
ತರಗತಿಯ ಪೈನಗರ್ ವಿಷನ್ ಪ್ರತಿನಿಧಿ
ದುರ್ಗಾಪ್ರಸಾದ್ ದ್ವಿತೀಯ
ಸ್ಥಾನಗಳಿಸಿದ್ದಾರೆ.
ಜಯಗಳಿಸಿದವರಿಗೆ
ಅಭಿನಂದನೆಗಳು.
No comments:
Post a Comment