ಶಾಲಾ
ರಕ್ಷಕ ಶಿಕ್ಷಕ ಸಂಘದ ಮಹಾಸಭೆ
ಪೈವಳಿಕೆನಗರ,
ನ.4:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು
ಶುಕ್ರವಾರ ಅಪರಾಹ್ನ ಶಾಲಾ
ಸಭಾಂಗಣದಲ್ಲಿ ನಡೆಯಿತು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ
ರೈನಾ ಟೀಚರ್ ವಾರ್ಷಿಕ ವರದಿ
ವಾಚಿಸಿದರು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ ಪಿ ಆಯವ್ಯಯ
ಲೆಕ್ಕ ಪತ್ರ ಮಂಡಿಸಿದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ,
ಶ್ರೀ
ಅಹ್ಮದ್ ಹುಸೈನ್ ಪಿಕೆ,
ಶ್ರೀ
ಮೂಸಾ ಪೈವಳಿಕೆ,
ಶ್ರೀ
ಇಬ್ರಾಹೀಂ ಪಾವಲುಕೋಡಿ,
ಶ್ರೀ
ರಾಧಾಕೃಷ್ಣ ಕಾಯರ್ ಕಟ್ಟೆ,
ಶ್ರೀಮತಿ
ರೋಹಿಣಿ,
ಶ್ರೀ
ಪದ್ಮನಾಭ ಬಾಯಿಕಟ್ಟೆ,
ಶ್ರೀ
ಕೃಷ್ಣ ಪೈವಳಿಕೆ,
ಶ್ರೀ
ಇಬ್ರಾಹೀಂ ಪೈವಳಿಕೆ ಮೊದಲಾದವರು
ಉಪಸ್ತಿತರಿದ್ದರು.
ಕಳೆದ
ವರ್ಷ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್
ಟು ವಿಭಾಗದ ವಾರ್ಷಿಕ ಪರೀಕ್ಷೆಗಳಲ್ಲಿ
ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.
ನೂತನ
ವರ್ಷದ ರಕ್ಷಕ ಶಿಕ್ಷಕ ಸಂಘದ
ಕಾರ್ಯಕಾರಿಣಿಗೆ ಶ್ರೀ ಲಾರೆನ್ಸ್
ಡಿಸೋಜಾ ಅವರನ್ನು ಅಧ್ಯಕ್ಷರನ್ನಾಗಿಯೂ,
ಶ್ರೀ
ಇಬ್ರಾಹೀಂ ಪಾವಲುಕೋಡಿ
ಉಪಾಧ್ಯಕ್ಷರನ್ನಾಗಿಯೂ,
ಶ್ರೀಮತಿ
ಶಾಲಿನಿ ಮೊಂತೆರೋ ಮಾತೃಸಂಘದ
ಅಧ್ಯಕ್ಷೆಯಾಗಿಯೂ ಆಯ್ಕೆಯಾದರು.
ಶ್ರೀ
ಕೃಷ್ಣಮೂರ್ತಿ ಎಂ ಎಸ್ ಕಾರ್ಯಕ್ರಮ
ನಿರ್ವಹಿಸಿದರು.
ಮಂಜೇಶ್ವರ
ಉಪಜಿಲ್ಲಾ ಕ್ರೀಡೋತ್ಸವ ಸಂಪನ್ನ,
ಪೈವಳಿಕೆನಗರ
ಶಾಲೆ ನಾಲ್ಕನೇ ಸ್ಥಾನಕ್ಕೆ
ಪೈವಳಿಕೆನಗರ,
ನ.4:
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಕ್ರೀಡೋತ್ಸವಕ್ಕೆ
ಅಬ್ಬರದ ತೆರೆ ಬಿದ್ದಿದೆ.
ನವೆಂಬರ್
1ರಿಂದ
ಆರಂಭವಾದ ಕ್ರೀಡಾಮೇಳ 4ರಂದು
ಅಪರಾಹ್ನ ಸಮಾರೋಪವಾಯಿತು.
ನಾಲ್ಕು
ದಿನಗಳಲ್ಲಾಗಿ ನಡೆದ ಉತ್ಸದಲ್ಲಿ
ಪೈವಳಿಕೆನಗರ ಶಾಲೆಯ 100ಕ್ಕಿಂತಲೂ
ಅದಿಕ ಪ್ರತಿಭೆಗಳು ಬಾಗವಹಿಸಿದ್ದರು.
ವಿದ್ಯಾವರ್ಧಕ
ಶಾಲೆ ಮಿಯಪದವು ಸಮಗ್ರ ಚಾಂಪಿಯನ್
ಶಿಪ್ ಪಡೆದುಕೊಂಡಿತು.
7 ಚಿನ್ನ,
8 ಬೆಳ್ಳಿ
ಹಾಗೂ 8
ಕಂಚು
ಪಡೆದುಕೊಂಡು 84
ಪಾಯಿಂಟುಗಳೊಂದಿಗೆ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆ ನಾಲ್ಕನೇ ಸ್ಥಾನ
ಪಡೆದಿದೆ.
72 ಪಾಯಿಂಟುಗಳನ್ನು
ಪಡೆದುಕೊಂಡು ಪೈವಳಿಕೆನಗರದ
ಹುಡುಗಿಯರು ಉಪಜಿಲ್ಲೆಯಲ್ಲೇ
ದ್ವಿತೀಯ ಸ್ಥಾನಗಳಿಸಿದ್ದಾರೆ.
ಯುಪಿ
ಕಿಡ್ಡೀಸ್ 3,
ಸಬ್
ಜೂನಿಯರ್ 22,
ಜೂನಿಯರ್
20,
ಸೀನಿಯರ್
27
ಪಾಯಿಂಟುಗಳನ್ನು
ಪಡೆಯುವಲ್ಲಿ ಪೈವಳಿಕೆನಗರದ
ಮಹಿಳಾ ಕ್ರೀಡಾಪಟುಗಳಿಗೆ
ಸಾಧ್ಯವಾಗಿದೆ.
ಜೂನಿಯರ್
ವಿಭಾಗದ ಹುಡುಗಿಯರ 1500
ಮೀಟರ್
ಓಟದಲ್ಲಿ ಭಾಗವಹಿಸಿದ್ದ 10ನೇ
ತರಗತಿಯ ವಿದ್ಯಾರ್ಥಿನಿ ಅವ್ವಮ್ಮ್ತತ್
ಸಾಹಿರಾ ಆರಂಭದಲ್ಲಿ ಸಹಸ್ಪರ್ಧಿಗಳ
ಕಾಲ್ತುಳಿತಕ್ಕೆ ಸಿಲುಕಿ ಮೈದಾನದಲ್ಲಿ
ಎಡವಿ ಬಿದ್ದಳು.
ಎಲ್ಲರೂ
ದಾಟಿ ಓಡಿದ ನಂತರ ಎದ್ದು ಓಡಿದ
ಈಕೆಗೆ ಪ್ರಥಮ ಸ್ಥಾನ ದೊರಕಿದ್ದು
ಈಕೆಯ ಕ್ರೀಡಾ ಸ್ಪೂರ್ತಿಯನ್ನು,
ಛಲವನ್ನು
ಸೂಚಿಸುವುದು.
ಸಬ್
ಜೂನಿಯರ್ 2,
ಜೂನಿಯರ್
3,
ಸೀನಿಯರ್
7
ಪಾಯಿಂಟುಗಳೊಂದಿಗೆ
ಪೈವಳಿಕೆನಗರದ ಹುಡುಗರು ಉಪಜಿಲ್ಲೆಯಲ್ಲಿ
16ನೇ
ಸ್ಥಾನಗಳಿಸಿದ್ದಾರೆ.
ಭಾಗವಹಿಸಿ
ಜಯಗಳಿಸಿದ ಎಲ್ಲರಿಗೂ ಪೈನಗರ್
ವಿಷನ್ ತುಂಬು ಹೃದಯದ ಅಭಿನಂದನೆಗಳನ್ನು
ಸಲ್ಲಿಸುವುದು.
ವಿದ್ಯಾಶ್ರೀ
ರಾಜ್ಯ ಮಟ್ಟದ ಕಬಡಿ ಪಂದ್ಯಾಟಕ್ಕೆ
ಆಯ್ಕೆ
ಪೈವಳಿಕೆನಗರ,ನ.3:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
10ಎ
ತರಗತಿಯ ವಿದ್ಯಾರ್ಥಿನಿ ವಿದ್ಯಾಶ್ರೀ
ಕೇರಳ ರಾಜ್ಯ ಮಟ್ಟದ ಅಂತರ್ ಜಿಲ್ಲಾ
ಜೂನಿಯರ್ ಬಾಲಕಿಯರ ಕಬಡಿ ಪಂದ್ಯಾಟಕ್ಕೆ
ಆಯ್ಕೆಯಾಗಿದ್ದಾರೆ.
ಮಣ್ಣಂಗುಳಿ
ಶಾಲಾ ಮೈದಾನದಲ್ಲಿ ಮಂಗಳವಾರ
ಪಂದ್ಯಾಟ ಜರಗಲಿದೆ.
ಪೈನಗರ್
ವಿಷನ್ ಬಳಗದ 2
ನೇ
ಸಂಪುಟದ 8ಸಿ
ತರಗತಿ ಪ್ರತಿನಿಧಿಯಾಗಿದ್ದ
ವಿದ್ಯಾಶ್ರೀ ವಿಧೇಯ,
ವಿನಯವಂತೆ
ವಿದ್ಯಾರ್ಥಿನಿ.
ತನ್ನ
ಸ್ನೇಹಿತೆಯರೊಂದಿಗೆ ಯಾವಾಗಲೂ
ಪ್ರೀತಿಯಿಂದ ಬೆರೆಯುವ ವಿದ್ಯಾಶ್ರೀ
ಗೆ ಗುರುವೃಂದದವರ ಬಗೆಗೆ ಅಪರಿಮಿತ
ಗೌರವ.
6ನೇ
ತರಗತಿಯಿಂದ ಪೈವಳಿಕೆನಗರ ಶಾಲೆಯಲ್ಲಿ
ಕಲಿಯುತ್ತಿರುವ ಈಕೆ ಪ್ರತಿಭಾತರಂಗದ
ಕಳೆದ ವರ್ಷದ ಸಂಪಾದಕ ಮಂಡಳಿಯಲ್ಲಿ
ಕೆಲಸ ಮಾಡುತ್ತಿದ್ದರು.
ನಾಟಕದಲ್ಲಿ
ಆಸಕ್ತಿ ಇರುವ ವಿದ್ಯಾಶ್ರೀ
ಸ್ನೇಹಿತೆಯರನ್ನು ಒಗ್ಗೂಡಿಸಿ
ಶಾಲಾ ಕಲೋತ್ಸವದಲ್ಲಿ ನಾಟಕ
ಪ್ರದರ್ಶನವನ್ನು ನೀಡಿದ್ದರು.
ಬಹುಮುಖ
ಪ್ರತಿಭೆ ವಿದ್ಯಾಶ್ರೀ ಅವರಿಗೆ
ಪೈನಗರ್ ವಿಷನ್ ತುಂಬು ಹೃದಯದ
ಅಭಿನಂದನೆಗಳನ್ನು ಸಲ್ಲಿಸುವುದು.
No comments:
Post a Comment