ಪುಸ್ತಕ
ಬಿಡುಗಡೆ ಸಮಾರಂಭ
ಪೈವಳಿಕೆನಗರ,
ನ.9:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
10ಸಿ
ತರಗತಿಯಲ್ಲಿ ತಾಯಿ ಮತ್ತು ಮಗಳ
ಸಂಬಂಧವನ್ನು ಬಿಂಬಿಸುವ ಸಾಕಷ್ಟು
ಜನಪದ ಗೀತೆ,
ಭಾವಗೀತೆಗಳನ್ನು
ಸಂಗ್ರಹಿಸಿ ತಯಾರಿಸಿದ ಪುಸ್ತಕ
ಬಿಡುಗಡೆ ಸಮಾರಂಭವು 10ಸಿ
ತರಗತಿಯ ಸಭಾಂಗಣದಲ್ಲಿ ಜರಗಿತು.
ಶ್ರೀಮತಿ
ಶಶಿಕಲಾ ಟೀಚರ್ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಹಯರ್
ಸೆಕೆಂಡರಿ ವಿಭಾಗದ ಉಪನ್ಯಾಸಕರಾದ
ಶ್ರೀ ನಾರಾಯಣ ರಾವ್ ಅವರು ಪುಸ್ಕತ
ಬಿಡುಗಡೆ ಮಾಡಿ ಮಾತನಾಡಿದರು.
ಶ್ರೀಮತಿ
ಶರಣ್ಯ,
ಶ್ರೀಮತಿ
ರೈನಾ,
ಶ್ರೀಮತಿ
ಶ್ರೇಯಾ,
ಶ್ರೀ
ಚಂದ್ರಶೇಖರ ಕಾರ್ಯಕ್ರಮಕ್ಕೆ
ಶುಬಾಶಂಸನೆಗೈದರು.
ಶ್ರೇಯಾ
ಟೀಚರ್ ಜನಪದ ಗೀತೆಯನ್ನು ಹಾಡಿದರೆ
ಪೈನಗರ್ ವಿಷನ್ ಪ್ರತಿನಿಧಿ ಹಾಗೂ
ಉದಯೋನ್ಮುಖ ಹಿನ್ನಲೆ ಗಾಯಕ
ದುರ್ಗಾಪ್ರಸಾದ್ ಜೆ ಪುಸ್ತಕದಲ್ಲಿರುವ
ಒಂದು ಸುಂದರ ಗೀತೆಯನ್ನು ಹಾಡಿದರು.
ಜ್ಯೋತಿ
ಬಿ ಸ್ವಾಗತಿಸಿ ದೀಕ್ಷಿತಾ ಟಿ
ವಂದಿಸಿದರು.
ಪ್ರಣೀತಾ
ಪಿ ಕಾರ್ಯಕ್ರಮ ನಿರ್ವಹಿಸಿದರು.
ರಮ್ಯ
ಎಸ್ ಹಾಗೂ ಪ್ರಣೀತಾ ಪಿ ಪ್ರಾರ್ಥನೆ
ಹಾಡಿದರು.(ಪ್ರಜ್ವಲ್
ಎ 10ಸಿ
ತರಗತಿ)
9ಎ
ತರಗತಿಯಲ್ಲಿ ನಾಟಕೋತ್ಸವ
ಪೈವಳಿಕೆನಗರ,
ನ.7:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
9ಎ
ತರಗತಿಯಲ್ಲಿ ಮಧ್ಯಾಹ್ನ 12.15ಕ್ಕೆ
ಸರಿಯಾಗಿ ನಾಟಕೋತ್ಸವ ಜರಗಿತು.
ಲಿಸನ್
ಟು ದ ಮೌಂಟೈನ್ ಎಂಬ ಆಂಗ್ಲ ಭಾಷೆಯ
ನಾಟಕವನ್ನು ಪ್ರದರ್ಶಿಸಲಾಗಿತ್ತು.
ಎರಡು
ತಂಡಗಳು ನಾಟಕ ಸ್ಪರ್ಧೆಗೆ
ತಯಾರಾಗಿದ್ದರು.
ಯಾವುದು
ಉತ್ತಮ ತಂಡ ಎಂಬ ಪ್ರಶ್ನೆಗೆ
ಉತ್ತರವಿಲ್ಲದೆ ಎಲ್ಲರೂ ನಾಟಕವನ್ನು
ಮೌನವಾಗಿ ವೀಕ್ಷಿಸಿದರು.
ನಾಟಕ
ಅಭಿನಯಿಸಿದ ಎರಡೂ ತಂಡಗಳನ್ನು
ಶರಣ್ಯ ಟೀಚರ್ ಅಭಿನಂದಿಸಿದರು.
ಈ
ನಾಟಕವು ವಿದ್ಯಾರ್ಥಿಗಳಲ್ಲಿ
ಪರಿಸರ ಜ್ಞಾನ ಮತ್ತು ಪ್ರಕೃತಿಯ
ರಕ್ಷಣೆಯ ಹೊಣೆಯನ್ನು ಅರಿಯುವುದಕ್ಕೆ
ಪ್ರೇರಣೆಯಾಯಿತು.
ಕಾಡೇ
ನಾಡಿನ ಸಂಪತ್ತು(ವೈಭವಿ
ಕೆ ಆರ್ 9ಎ
ತರಗತಿ)
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಕ್ರೀಡಾಕೂಟದ
ಪಲಿತಾಂಶಗಳು
ಪೈವಳಿಕೆನಗರ,
ನ.4:
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ
ಪೈವಳಿಕೆನಗರ ಶಾಲಾ ವಿದ್ಯಾರ್ಥಿಗಳು
ಉತ್ತಮ ಸಾಧನೆ ಮಾಡಿದ್ದಾರೆ.
ಕಿಡ್ಡೀಸ್
ಹುಡುಗಿಯರ 100ಮೀಟರ್
ಓಟದಲ್ಲಿ 7ಬಿ
ತರಗತಿಯ ಆಯಿಷತ್ ನೆಸೀರಾ ತೃತೀಯ,
ಹುಡುಗಿಯರ
4*100
ರಿಲೇ
ತೃತೀಯ,
ಸಬ್
ಜೂನಿಯರ್ ಹುಡುಗರ 80ಮೀಟರ್
ಹರ್ಡಲ್ಸ್ ನಲ್ಲಿ 8ಡಿ
ತರಗತಿಯ ಅಫೀಸ್ ಎನ್ ತೃತೀಯ,
600 ಮೀಟರ್
ಓಟದಲ್ಲಿ 8ಸಿ
ತರಗತಿಯ ಅಬ್ದುಲ್ ನೌಶಾದ್ ತೃತೀಯ,
ಸಬ್
ಜೂನಿಯರ್ ಹುಡುಗಿಯರ 600ಮೀಟರ್
ಓಟದಲ್ಲಿ 8ಎ
ತರಗತಿಯ ಮಲುಫಾ ದ್ವಿತೀಯ,
8ಡಿ
ತರಗತಿಯ ಅಶ್ವಿನಿ ಬಿ ತೃತೀಯ,
ಹೈಜಂಪ್
ನಲ್ಲಿ 8ಬಿ
ತರಗತಿಯ ಆಯಿಷತ್ ಜಸೀರಾ ಪ್ರಥಮ,
ಲಾಂಗ್
ಜಂಪ್ ನಲ್ಲಿ 8ಬಿ
ತರಗತಿಯ ಹಲೀಮತ್ ಶಫಾ ದ್ವಿತೀಯ
ಸ್ಥಾನಗಳಿಸಿದ್ದಾರೆ.
ಜೂನಿಯರ್
ಹುಡುಗರ 100
ಮೀಟರ್
ಹರ್ಡಲ್ಸ್ ನಲ್ಲಿ 9ಸಿ
ತರಗತಿಯ ಕಲಂದರ್ ಶಾಫಿ ದ್ವಿತೀಯ,
ಜೂನಿಯರ್
ಹುಡುಗಿಯರ 100
ಮೀಟರ್
ಹರ್ಡಲ್ಸ್ ನಲ್ಲಿ 10ಎ
ತರಗತಿಯ ವಿದ್ಯಾಶ್ರೀ ಜೆ ಪ್ರಥಮ,
200 ಮೀಟರ್
ಓಟದಲ್ಲಿ 9ಸಿ
ತರಗತಿಯ ಖದೀಜತ್ ಅನ್ಸೀರಾ ಬಿ
ತೃತೀಯ,
1500ಮೀಟರ್
ಓಟದಲ್ಲಿ 10ಬಿ
ತರಗತಿಯ ಅವ್ವಮ್ಮತ್ ಸಾಹಿರಾ
ಪ್ರಥಮ,
10ಎ
ತರಗತಿಯ ತಮೀಝಾ ಲಾಂಗ್ ಜಂಪ್ ನಲ್ಲಿ
ದ್ವಿತೀಯ,
4*100 ರಿಲೇ
ದ್ವಿತೀಯ,
ಸೀನಿಯರ್
ಹುಡುಗರ 100
ಮೀಟರ್
ಹರ್ಡಲ್ಸ್ ನಲ್ಲಿ ಮೊಹಮ್ಮದ್
ಜುನೈನ್ ದ್ವಿತೀಯ,
5000ಮೀಟರ್
ಓಟದಲ್ಲಿ ಮೊಹಮ್ಮದ್ ತಮೀಮ್
ದ್ವಿತೀಯ,
ಅಜಯ್
ಸೇತು ತೃತೀಯ ಸ್ಥಾನಗಳಿಸಿದ್ದಾರೆ.
ಸೀನಿಯರ್
ಹುಡುಗಿಯರ 3000
ಮೀಟರ್
ಓಟದಲ್ಲಿ ಶ್ರೇಯಾ ತೃತೀಯ,
100ಮೀಟರ್
ಓಟದಲ್ಲಿ ಶೇಹೀರ್ ಬಾನು ಪ್ರಥಮ,
ಹೈಜಂಪ್
ನಲ್ಲಿ ಶೆಹೀರ್ ಬಾನು ಪ್ರಥಮ,
4*400 ರಿಲೇ
ದ್ವಿತೀಯ,
4*100 ರಿಲೇ
ಪ್ರಥಮ ಸ್ಥಾನಗಳಿಸಿದ್ದಾರೆ.
ಜಯಗಳಿಸಿದ
ಎಲ್ಲರಿಗೂ ಪೈನಗರ್ ವಿಷನ್ ತುಂಬು
ಹೃದಯದ ಅಭಿನಂದನೆಗಳನ್ನು
ಸಲ್ಲಿಸುವುದು.
No comments:
Post a Comment