ಪೈವಳಿಕೆನಗರ
ಶಾಲೆಯಲ್ಲಿ ಆರೋಗ್ಯ ತರಗತಿ
ಪೈವಳಿಕೆನಗರ,ಡಿ.13:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ
ಆರೋಗ್ಯ ತರಗತಿ ನಡೆಯಿತು.
ಸಂಪನ್ಮೂಲ
ವ್ಯಕ್ತಿಯಾದ ಶ್ರೀ ರವೀಂದ್ರನಾಥ್
ಸರ್ ಅವರು ಸಂಪೂರ್ಣ ಆರೋಗ್ಯದ
ಕುರಿತು ಹಂತಹಂತವಾಗಿ ವಿವರಿಸಿದರು.
100ರಲ್ಲಿ
70
ಮರಣಗಳು
ಮನುಷ್ಯನ ಜೀವನ ಶೈಲಿಯಿಂದಾಗಿ
ಸಂಭವಿಸುವುದು.
30 ಸಹಜ
ಮರಣಗಳಾಗಿವೆ.
ಹೃದಯ
ಧಮನಿ ರೋಗಗಳು,
ಕ್ಯಾನ್ಸರ್,
ಮಧುಮೇಹ,
ಶ್ವಾಸಕೋಶ
ರೋಗಗಳು ಮರಣಕ್ಕೆ ಕಾರಣವಾಗುವುದು.
ಅದಲ್ಲದೆ
ಧೂಮಪಾನ,
ತಂಬಾಕು
ಉತ್ಪನ್ನಗಳನ್ನು ಸೇವಿಸುವುದು
ನಮ್ಮ ಆರೋಗ್ಯಕ್ಕೆ ಅಪಾಯವಾಗಿದೆ.
ಕ್ಯಾನ್ಸರಿನಂತಹ
ರೋಗಗಳಿಗೆ ಕೀಮೋಥೆರಾಪಿಯು ಉತ್ತಮ
ವಾಗಿದೆ.
ನಮ್ಮ
ನೆರೆಹೊರೆಯವರಿಗೆ ಈ ರೀತಿಯ ರೋಗಗಳು
ಇದ್ದರೆ ಅವರನ್ನು ಆಸ್ಪತ್ರೆಗೆ
ಹೋಗಿ ಯೋಗ್ಯ ಚಿಕಿತ್ಸೆ ಪಡೆಯಲು
ಪ್ರೇರೇಪಿಸಬೇಕು.
ಅವರ
ಬೋಧನೆಗಳನ್ನು ನಾವು ಜೀವನದಲ್ಲಿ
ಅಳವಡಿಸಿದರೆ ಆಯುರಾರೋಗ್ಯದಿಂದ
ಉತ್ತಮ ಜೀವನವನ್ನು ನಡೆಸಬಹುದು.ಆರೋಗ್ಯವೇ
ಭಾಗ್ಯ(ವೈಭವಿ.ಕೆ.ಆರ್
9ಎ,
ಫಾತಿಮತ್
ಸಹನ 9ಎ,
ವೈಷ್ಣವ್
8ಸಿ,
ಧ್ವಾನಿಷ್
9ಸಿ,
ವೈಶಾಖ್
9ಎ,
ಕಾರ್ತಿಕ್
ಕೆ 9ಸಿ,
)
ವಿದ್ಯಾರ್ಥಿಗಳಿಗಾಗಿ
ಸ್ಪರ್ಧೆ
ಪೈವಳಿಕೆನಗರ,
ಡಿ.17:
ಪೈವಳಿಕೆನಗರ
ಶಾಲೆಯ ದನಿಯಾಗಿರುವ ಪೈನಗರ್
ವಿಷನ್ ಸಾಪ್ತಾಹಿಕವು 30
ವಾರಗಳನ್ನು
ಪೂರ್ತಿಗೊಳಿಸುತ್ತಿರುವ
ಹಿನ್ನಲೆಯಲ್ಲಿ ಪತ್ರಿಕಾ
ಪ್ರತಿನಿಧಿಗಳಿಗೆ ಹಾಗೂ
ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು
ನಡೆಸಲು ತೀರ್ಮಾನಿಸಲಾಗಿದೆ.
ಕಲೋತ್ಸವ,
ವಿಜ್ಞಾನಮೇಳ,
ಕ್ರೀಡಾಮೇಳ,
ವಿದ್ಯಾರಂಗ
ಹಾಗೂ ಇತರ ಸ್ಪರ್ಧೆಗಳಲ್ಲಿ ಜಿಲ್ಲಾ
ಮಟ್ಟ ರಾಜ್ಯ ಮಟ್ಟಗಳಲ್ಲಿ ಪ್ರತಿಭೆ
ತೋರ್ಪಡಿಸಿದ ವಿದ್ಯಾರ್ಥಿಗಳು,
ಶಾಲಾ
ಚಟುವಟಿಕೆಗಳಲ್ಲಿ ತಮ್ಮನ್ನು
ತಾವು ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ
ವಿದ್ಯಾರ್ಥಿಗಳು,
ಶಾಲಾ
ಶಿಸ್ತು,
ನೈರ್ಮಲ್ಯ,
ಶುಚಿತ್ವಕ್ಕಾಗಿ
ತ್ಯಾಗಮನೋಭಾವದ ವಿದ್ಯಾರ್ಥಿಗಳು,
ಶಾಲೆಯ
ಪ್ರಗತಿಗೆ ನಿಸ್ವಾರ್ಥವಾಗಿ ಸೇವೆ
ಸಲ್ಲಿಸುವ ವಿದ್ಯಾರ್ಥಿಗಳು,
ಇತರ
ರಂಗಗಳಲ್ಲಿ ಗಣನೀಯ ಸೇವೆ
ಸಲ್ಲಿಸುತ್ತಿರುವ ವಿದ್ಯಾರ್ಥಿಗಳು,
ಕಲಿಯುತ್ತಿರುವ
ವಿದ್ಯಾಲಯಕ್ಕೆ ತಮ್ಮದೇ ವಿಶೇಷ
ಕೊಡುಗೆ ನೀಡಿದ ವಿದ್ಯಾರ್ಥಿಗಳು,
ಜೀವ
ಕಾರುಣ್ಯ ಕೆಲಸಗಳಿಗೆ ಸಹಾಯ ಮಾಡಿದ
ವಿದ್ಯಾರ್ಥಿಗಳ ಬಗ್ಗೆ ಸವಿವರವಾದ
ಲೇಖನವನ್ನು ಬರೆದು(ವಿದ್ಯಾರ್ಥಿಯ
ಹೆಸರು,
ತರಗತಿ,
ಪರಿಚಯ,
ಮಾಡಿದ
ಕೆಲಸಗಳು)
ಜನವರಿ
6ರ
ಒಳಗಾಗಿ ಪೈನಗರ್ ವಿಷನ್ ಪೆಟ್ಟಿಗೆಗೆ
ಹಾಕಬೇಕು.(ಲೇಖಕರ
ಹೆಸರು ತರಗತಿ ಅಗತ್ಯ.
ಬರೆಯುವ
ಹಾಳೆಯನ್ನು ಪೈನಗರ್ ವಿಷನ್ ಮುಖ್ಯ
ಸಂಪಾದಕರಿಂದ ಪಡೆಯಬೇಕು.)
ಇದಲ್ಲದೆ
ಶಾಲೆಯಲ್ಲಿ ನಡೆಯುತ್ತಿರುವ
ವಿವಿಧ ಚಟುವಟಿಕೆಗಳನ್ನು,
ವಿಶೇಷತೆಗಳನ್ನು
ಸಮಗ್ರ ಅಧ್ಯಯನ ನಡೆಸಿ ಲೇಖನ
ಬರೆಯಬಹುದು.
ಉತ್ತಮ
ಲೇಖನಗಳಿಗೆ ಸೂಕ್ತ ಬಹುಮಾನ ನೀಡಿ
ಪ್ರೋತ್ಸಾಹಿಸಲಾಗುವುದು.
ಪೈನಗರ್
ವಿಷನ್ ಪ್ರತಿನಿಧಿಗಳಿಗೆ ಯೋಗ್ಯ
ಕೃಪಾಂಕಗಳು ಲಭಿಸಲಿವೆ.
ಒಂದೇ
ವಿಷಯದ ಬಗ್ಗೆ ಬರೆದ ಲೇಖನಕ್ಕಾಗಿ
ಉತ್ತಮವಾಗಿ ಬರೆದ ಒಬ್ಬ ಪ್ರತಿನಿಧಿಗೆ
ಮಾತ್ರ ಕೃಪಾಂಕ ನೀಡಲಾಗುವುದು.
ಉತ್ತಮವಾಗಿರುವ
ಲೇಖನಗಳನ್ನು ಪ್ರಕಟಿಸಲಾಗುವುದು.
30 ನೇ
ಸಂಚಿಕೆಯ ಸವಿನೆನಪಿಗಾಗಿ ಈ ವಾರ
ವರದಿ ಕಳುಹಿಸಿದ ಎಲ್ಲಾ ಪ್ರತಿನಿಧಿಗಳಿಗೆ,
ಪ್ರಕಟಿಸಲಾದ
ಚಿತ್ರಗಾರರಿಗೆ,
ಸಾಹಿತಿಗಳಿಗೆ
ಸಮಾಧಾನಕರ ಬಹುಮಾನ ನೀಡಲಾಗುವುದು.
ತಮ್ಮ
ಬೆಂಬಲಕ್ಕೆ ಪೈನಗರ್ ವಿಷನ್ ಸದಾ
ಕೃತಜ್ಞತೆ ಸಲ್ಲಿಸುವುದು.
ಶಾಲಾ
ಶಿಸ್ತು ಪಾಲನೆಗೆ ತಮ್ಮ ಕೊಡುಗೆ
ನೀಡಿದ ವಿದ್ಯಾರ್ಥಿಗಳನ್ನು
ಪ್ರೋತ್ಸಾಹಿಸುವ ಸಲುವಾಗಿ ಈ
ಅಧ್ಯಯನ ವರ್ಷ ಅತ್ಯುತ್ತಮ ತರಗತಿ,
ಅತ್ಯುತ್ತಮ
ತರಗತಿ ನಾಯಕ ಮುಂತಾದ ಹಲವು
ಪ್ರಶಸ್ತಿಗಳನ್ನು ಪೈನಗರ್ ವಿಷನ್
ಪ್ರಾಯೋಜಿಸಲಿದೆ.
ತರಗತಿಯ
ಶಿಸ್ತು,
ಶುಚಿತ್ವ,
ಸಮಯ
ಪಾಲನೆ,
ಕರ್ತವ್ಯ
ನಿಷ್ಟೆ,
ಪ್ರಾಮಾಣಿಕತೆ
ಮುಂತಾದ ಹತ್ತು ಹಲವು
ಅಳತೆಗೋಲುಗಳನ್ನಿಟ್ಟುಕೊಂಡು
ಯುಪಿ ಹಾಗೂ ಹೈಸ್ಕೂಲ್ ವಿಭಾಗದಲ್ಲಿ
ವಿವಿಧ ವೀಕ್ಷಕರು ಮೌಲ್ಯಮಾಪನ
ಮಾಡಲಿದ್ದಾರೆ.
ಪೈನಗರ್
ವಿಷನ್ ಬಳಗದ ಸಮಾರೋಪ ಸಮಾರಂಭದಲ್ಲಿ
ತೀರ್ಪುಗಾರರು ಫಲಿತಾಂಶ
ಘೋಷಿಸಲಿದ್ದಾರೆ.
ಜೂನಿನಿಂದ
ಮಾರ್ಚ್ ವರೆಗಿನ ಕಾರ್ಯಗಳು
ಮೌಲ್ಯಮಾಪನದಲ್ಲಿ ಒಳಗೊಳ್ಳಲಿದೆ.
No comments:
Post a Comment