BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಹಸಿರು ಕೇರಳ ಯೋಜನೆಯ ಶಾಲಾ ಮಟ್ಟದ ಉದ್ಘಾಟನೆ
ಪೈವಳಿಕೆನಗರ, ಡಿ.8: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನವಕೇರಳ ಮಿಷನ್ ಪ್ರಾಯೋಜಿತ ಹಸಿರು ಕೇರಳ ಯೋಜನೆಯ ಶಾಲಾ ಮಟ್ಟದ  ಕಾರ್ಯಕ್ರಮ ಉದ್ಘಾಟನೆ ಗುರುವಾರ ನಡೆಯಿತು. ವಿದ್ಯಾರ್ಥಿಗಳೆಲ್ಲರೂ ಶಾಲಾ ಪರಿಸರ ಮತ್ತು ವಾತಾವರಣವನ್ನು ಹಸಿರುಗೊಳಿಸುವ ಪ್ರತಿಜ್ಞೆಯನ್ನು ಕೈಗೊಂಡರು. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ತಂದ ಪ್ಲಾಸ್ಟಿಕ್ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಹಸಿರು ಕೇರಳ ಯೋಜನೆಗೆ ಅರ್ಥ ಬರುವಂತೆ ಮಾಡಿದರು. ವರ್ಷಗಳು ಕಳೆದಂತೆ ಪ್ರಕೃತಿಯು ಮಾನವನ ಸ್ವಾರ್ಥಕ್ಕಾಗಿ ನಾಶಹೊಂದುತ್ತದೆ. ಜನಸಂಖ್ಯಾ ಹೆಚ್ಚಳವು ವಿವಿಧ ಬೇಡಿಕೆಗಳನ್ನು ಒಡ್ಡುವಾಗ ಅರಣ್ ಸಂಪತ್ತು ನಾಶವಾಗುತ್ತದೆ. ಒಂದು ಮರ ಕಡಿಯುವಾಗ ಹತ್ತು ಮರ ನೆಡಬೇಕು ಎಂಬ ಪರಿಸರ ಘೋಷಣಾ ಫಲಕಗಳು ರಿಯಲ್ ಎಸ್ಟೇಟ್ ಬುಲ್ ಡೋಜರ್ ಗಳ ಚಕ್ರದ ಕೆಳಗೆ ನಲುಗುತ್ತವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರ್ಖಾನೆಗಳು ಹಸಿರು ಮನೆ ಅನಿಲದ ಪ್ರಮಾಣವನ್ನು ವಾತಾವರಣದಲ್ಲಿ ಹೆಚ್ಚಿಸಿ ಭೀತಿ ಹುಟ್ಟಿಸುತ್ತವೆ. ವರ್ಷಗಳು ಕಳೆದಂತೆ ಭೂಮಿಯ ವಾತಾವರಣದ ತಾಪ ಹೆಚ್ಚುತ್ತಾ ಹೋಗುತ್ತದೆ. ಸೌಕರ್ಯದ ಮುಖವಾಡ ಹಾಕಿಕೊಂಡು ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳು ಜೀವಜಾಲಗಳಲ್ಲಿ ಚೆಲ್ಲಾಟ ಆಡುತ್ತವೆ. ನಾವು ನಮ್ಮ ಪ್ರಕೃತಿಯನ್ನು ಸಂರಕ್ಷಿಸೋಣ. ನಾವು ಪುಸ್ತಕದಲ್ಲಿ ಕಲಿಯುವ ಪಾಠಗಳು ಕೇವಲ ನಾಟಕಗಳಾಗಬಾರದು. ಅದೇ ನಮ್ಮ ಜೀವನ ಪಾಠಗಳಾಗಬೇಕು. ಹಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳು ಹಸಿರು ಕೇರಳಕ್ಕೆ ಸಂಬಂಧಿಸಿದ ಕಿರುನಾಟಕಗಳನ್ನು ಪ್ರದರ್ಶಿಸಿದರು.(ಫಾತಿಮತ್ ಸಹನಾ 9, ವೈಭವಿ ಕೆ ಆರ್ 9, ಚರಣ್ ರಾಜ್ ಎಸ್ 9ಸಿ, ಧ್ವಾನಿಷ್ 9ಸಿ, ಕಾರ್ತಿಕ್ ಕೆ 9ಸಿ, ಸಾತ್ವಿಕ್ ಎನ್ 7 ತರಗತಿ)


ಹಸಿರು ಕೇರಳ ಯೋಜನೆಯ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ

ಪೈವಳಿಕೆನಗರ, ಡಿ.8: ನವಕೇರಳ ಮಿಷನ್ ಪ್ರಾಯೋಜಿತ ಹಸಿರು ಕೇರಳ ಯೋಜನೆಯ ಅಂಗವಾಗಿ ಪೈವಳಿಕೆನಗರ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಪ್ಲಸ್ ಟು ಮಾನವಿಕ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ಸ್ಪರ್ಧೆಯು ಆರೆಬಿಕ್ ಕೊಠಡಿಯಲ್ಲಿ ಅಪರಾಹ್ನ 3.30ಕ್ಕೆ ನಡೆಯಿತು. ಶಿಕ್ಷಕರಾದ ಶ್ರೀ ವಸಂತ್, ಶ್ರೀ ಮೊಹಮ್ಮದ್ ಯಾಸಿರ್ ನೇತೃತ್ವ ನೀಡಿದರು. ಪ್ರಥಮ ವರ್ಷ ವಿಜ್ಞಾನದ ಅಹಮ್ಮದ್ ಜಾಬೀರ್ ಪ್ರಥಮದ್ವಿತೀಯ ವರ್ಷ ವಾಣಿಜ್ಯ ವಿಭಾಗದ ಮೊಹಮ್ಮದ್ ಜುನೈನ್ ದ್ವಿತೀಯ ಸ್ಥಾನಗಳಿಸಿದರು. ಹಿರಿಯ ಶಿಕ್ಷಕರಾದ ಶ್ರೀ ನಾರಾಯಣ ರಾವ್ ಬಹುಮಾನ ವಿತರಿಸಿದರು. ಪ್ಲಸ್ ಟು ಮಾನವಿಕ ವಿಭಾಗದ ಸಿಂಧು ಮತ್ತು ಬಳಗದವರು ಹಸಿರು ರಸಪ್ರಶ್ನೆಯನ್ನು ಏರ್ಪಡಿಸಿದ್ದರು.(ಚರಣ್ ರಾಜ್ ಎಸ್ 9ಸಿ)


ಹಸಿರು ಕೇರಳ ಪ್ರಚಾರ ಜಾಥಾ
ಪೈವಳಿಕೆನಗರ,ಡಿ.5: ಈ ತಿಂಗಳ 8ರಂದು ಉದ್ಘಾಟನೆಗೊಳ್ಳಲಿರವ ನವಕೇರಳ ಮಿಷನ್ ಪ್ರಾಯೋಜಿತ ಹಸಿರು ಕೇರಳ ಯೋಜನೆಯ ಪೂರ್ವಭಾವಿಯಾಗಿ ಪೈವಳಿಕೆನಗರದಲ್ಲಿ ವಿದ್ಯಾರ್ಥಿಗಳು ಪ್ರಚಾರ ಜಾಥಾ ನಡೆಸಿದರು. ಸೋಮವಾರ ಅಪರಾಹ್ನ 2.30ಕ್ಕೆ  ಜಾಥಾವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಪಿ ಹಾಗೂ ಶ್ರೀ ವಿಶ್ವನಾಥ ಕುಂಬಳೆ ಉದ್ಘಾಟಿಸಿ ಮಾತನಾಡಿದರು. ಜಾಥಾಕ್ಕೆ  ಪೈವಳಿಕೆ ಗ್ರಾಮಪಂಚಾಯತ್ ವಠಾರದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತ್ ಭಾರತಿ ಜೆ ಶೆಟ್ಟಿ ಹಾಗೂ ಪಂಚಾಯತ್ ಅಧಿಕೃತರು ಶುಭಾಶಂಸನೆ ಮಾಡಿದರು. ಪಂಚಾಯತ್ ಕಛೇರಿ, ಬಸ್ಸು ತಂಗುದಾಣ, ದೇವಕಾನ ಆಸ್ಪತ್ರೆಬ್ಯಾಂಕ್ ಕಛೇರಿ, ವಿದ್ಯುತ್ ವಿಭಾಗೀಯ ಕಛೇರಿ, ಗ್ರಾಮ ಕಛೇರಿಯಲ್ಲಾಗಿ ಸಾಗಿದ ಜಾಥಾ ಸಾರ್ವಜನಿಕರಲ್ಲಿ ಹಸಿರು ಕೇರಳದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಫಲವಾಯಿತು.(ಸಾತ್ವಿಕ್ ಎನ್ 7, ಧ್ವಾನಿಷ್ 9ಸಿ,ಕಾರ್ತಿಕ್ ಕೆ 9ಸಿ, ಚರಣ್ ರಾಜ್ ಎಸ್ 9ಸಿ)

No comments:

Post a Comment