BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಂಪನ್ನ, ಪೈವಳಿಕೆನಗರ ಶಾಲೆಗೆ ಹಯರ್ ಸೆಕೆಂಡರಿ ರನ್ನರ್ ಅಪ್


ಧರ್ಮತಡ್ಕ, ಡಿ.1: ಧರ್ಮತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆ ಮತ್ತು ಎಯುಪಿ ಶಾಲೆಗಳಲ್ಲಾಗಿ ನಡೆದು ಬರುತ್ತಿದ್ದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ತೆರೆಬಿದ್ದಿದೆ. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಿಂದ ಸುಮಾರು ನೂರಕ್ಕಿಂತಲೂ ಹೆಚ್ಚು ಕಲಾ ಪ್ರತಿಭೆಗಳು ಭಾಗವಹಿಸಿದ್ದು ವಿವಿಧ ಸ್ಥಾನಗಳನ್ನು ಗಳಿಸಿದ್ದಾರೆಅರಬಿಕ್ ಕೈಬರಹದಲ್ಲಿ 4ಬಿ ತರಗತಿಯ ಖದೀಜತ್ ಅಫ್ನಾ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿದ್ದಾಳೆ. 7ಬಿ ತರಗತಿಯ ಆಯಿಷತ್ ಶಿಯಾನಾ ಮಲಯಾಳಂ ಕವಿತೆಯಲ್ಲಿ ಎ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನಗಳಿಸಿದ್ದಾಳೆ. 9ಸಿ ತರಗತಿಯ ಝುಲೈಕಾ ಉನೈಸಾ ಹಿಂದಿ ಕವಿತಾರಚನೆಯಲ್ಲಿ ದ್ವಿತೀಯ, 8ಬಿ ತರಗತಿಯ ರಂಸೀನಾ ಜಲವರ್ಣದಲ್ಲಿ ತೃತೀಯ, 9ಎ ತರಗತಿಯ ಪ್ರಜ್ಞಾ ಹಿಂದಿ ಕಂಠಪಾಠದಲ್ಲಿ ತೃತೀಯ, 10ಬಿ ತರಗತಿಯ ಅನು ಕಥಾಪ್ರಸಂಗದಲ್ಲಿ ತೃತೀಯ, 10ಸಿ ತರಗತಿಯ ಪ್ರಣೀತಾ ಭರತನಾಟ್ಯದಲ್ಲಿ ದ್ವಿತೀಯ, 8ಬಿ ತರಗತಿಯ ಫಾತಿಮತ್ ಅಝ್ಮೀನಾ ಆಂಗ್ಲ ಕಂಠಪಾಠದಲ್ಲಿ ಪ್ರಥಮ, 9ಸಿ ತರಗತಿಯ ಕಾರ್ತಿಕ್ ಕೆ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಹಯರ್ ಸೆಕೆಂಡರಿ ವಿಭಾಗದ ಜಲವರ್ಣದಲ್ಲಿ ವಿಜೇಶ್ ಪ್ರಥಮ, ಕಾರ್ಟೂನಿನಲ್ಲಿ ಆಶಯ ದ್ವಿತೀಯ, ಕೊಳಲುವಾದನ ಮತ್ತು ತಬಲಾದಲ್ಲಿ ಆಶಯ ಪ್ರಥಮ, ಆಂಗ್ಲ ಪ್ರಬಂಧಲ್ಲಿ ಶ್ರುತಿ ಕೆ ದ್ವಿತೀಯ, ಹಿಂದಿ ಪ್ರಬಂಧದಲ್ಲಿ ಶ್ರುತಿ ಕೆ ಪ್ರಥಮ, ಆಂಗ್ಲ ಕಥೆಯಲ್ಲಿ ರಶ್ಮಿ ಪ್ರಥಮ, ಆಂಗ್ಲ ಕವಿತೆಯಲ್ಲಿ ಖದೀಜತ್ ತಬ್ಸೀರಾ ಪ್ರಥಮ, ಅರೆಬಿಕ್ ಕವಿತೆಯಲ್ಲಿ ಮೊಹಮ್ಮದ್ ಹಾಫಿಲ್ ಪ್ರಥಮ, ಏಕಪಾತ್ರಾಭಿನಯದಲ್ಲಿ ಮೊಹಮ್ಮದ್ ಜುನೈನ್ ದ್ವಿತೀಯ, ಮಿಮಿಕ್ರಿಯಲ್ಲಿ ಪ್ರಥಮ, ಸಮೂಹಗೀತೆಯಲ್ಲಿ ಚೈತ್ರಾ ಕುಮಾರಿ ದ್ವಿತೀಯ, ಆಂಗ್ಲ ಕಿರುನಾಟಕದಲ್ಲಿ ಹವಾವುಲ್ ಅಫೀಫಾ ಪ್ರಥಮಕನ್ನಡ ಕವಿತೆಯಲ್ಲಿ ಆಶಯ ಪ್ರಥಮ, ಕೋಲಾಟದಲ್ಲಿ ಮೊಹಮ್ಮದ್ ಅಲೀಂ ಪ್ಱತಮ, ಮಾಪಿಳ ಹಾಡು ಮುನೀರಾ ಪ್ರಥಮ, ಪಲ್ಲವಿ ಕನ್ನಡ ಕಂಠಪಾಠ ಪ್ರಥಮ, ನಾಗಲತಾ ಕನ್ನಡ ಭಾಷಣ ದ್ವಿತೀಯ, ಆಯಿಷಾ ತಝಿಯಾ ದೋಣಿ ಹಾಡು ತೃತೀಯ, ಆಬೂಬಕರ್ ಸಿದ್ದೀಕ್ ದಫ್ ಮುಟ್ ಪ್ರಥಮ ಸ್ಥಾನಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇದರಲ್ಲಿ ಹೈಸ್ಕೂಲ್ ವಿಭಾಗದ ಕನ್ನಡ ಪ್ರಬಂಧ, ಆಂಗ್ಲ ಕಂಠಪಾಠ, ಹಯರ್ ಸೆಕೆಂಡರಿ ವಿಭಾಗದ ಜಲವರ್ಣ, ಕೊಳಲುವಾದನ, ತಬಲಾ, ಹಿಂದಿ ಪ್ರಬಂಧ, ಆಂಗ್ಲ ಕಥೆ, ಆಂಗ್ಲ ಕವಿತೆ, ಅರೆಬಿಕ್ ಕವಿತೆ, ಮಿಮಿಕ್ರಿ, ಆಂಗ್ಲ ಕಿರುನಾಟಕ, ಕನ್ನಡ ಕವಿತೆ, ಕೋಲಾಟ, ಮಾಪಿಳಹಾಡು, ಕನ್ನಡ ಕಂಠಪಾಠ, ದಫ್ ಮುಟ್ಟು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಹಯರ್ ಸೆಕೆಂಡರಿ ಜನರಲ್ ವಿಭಾಗದಲ್ಲಿ ಪೈವಳಿಕೆನಗರ ಹಯರ್ ಸೆಕೆಂಡರಿ ಶಾಲೆ 118 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆದಿದೆ. ಹೈಸ್ಕೂಲ್ ಜನರಲ್ ವಿಭಾಗದಲ್ಲಿ 86 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಹಯರ್ ಸೆಕೆಂಡರಿ ಕನ್ನಡ ಕಲೋತ್ಸವದಲ್ಲಿ 18 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿದೆ. ಜಯಗಳಿಸಿದ ಎಲ್ಲ ಸ್ಪರ್ಧಿಗಳಿಗೆ ಪೈನಗರ್ ವಿಷನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದು.


ಪೈನಗರ್ ವಿಷನ್ ಉಪಸಂಪಾದಕ ಜಿಲ್ಲಾ ಮಟ್ಟದ ಸ್ಪರ್ಧೆಗೆ
ಧರ್ಮತಡ್ಕ, ಡಿ.1: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಪೈನಗರ್ ವಿಷನ್ ಉಪಸಂಪಾದಕ ಹಾಗೂ 9ಸಿ ತರಗತಿಯ ವಿದ್ಯಾರ್ಥಿ ಕಾರ್ತಿಕ್ ಕೆ ಹೈಸ್ಕೂಲ್ ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು ಪೈನಗರ್ ವಿಷನ್ ಬಳಗದಲ್ಲಿ ಹರ್ಷ ಉಂಟಾಗುವಂತೆ ಮಾಡಿದೆ. ಯಾರಲ್ಲೇ ಆದರೂ ತನ್ನ ನೇರ ನಡೆ ನುಡಿಗಳಿಂದ ಹಾಗೂ  ವಿಶೇಷ ವ್ಯಕ್ತಿತ್ವದಿಂದ ಸದಾ  ಗಮನಸೆಳೆಯುವ ಕಾರ್ತಿಕ್ ಪೈನಗರ್ ವಿಷನ್ ಈ ಬಾರಿಯ ಮಾಧ್ಯಮ ರಂಗದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು ಪತ್ರಿಕಾ ಬಳಗದಲ್ಲಿ ಗುರುತಿಸಲ್ಪಡುವ ಪ್ರತಿನಿಧಿಯಾಗಿ ಈ ಸಾಧನೆ ಮೆರೆದದ್ದು ವಿಶೇಷ. ಉತ್ತಮ ಕಥೆಗಾರನಾಗಿರುವ ಕಾರ್ತಿಕ್ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಉಪಜಿಲ್ಲಾ ಮಟ್ಟಗಳಲ್ಲಿ ಭಾಗವಹಿಸಿದ ಕೀರ್ತಿಗೆ ಪಾತ್ರವಾಗಿರುವುದು ಮೈಲಿಗಲ್ಲಾಗಿದೆ. ಉಪಜಿಲ್ಲಾ ಮಟ್ಟದ ಕಲೋತ್ಸವದ ಹೈಸ್ಕೂಲ್ ಕನ್ನಡ ವಿಭಾಗದಲ್ಲಿ ಪೈವಳಿಕೆನಗರ ಶಾಲೆಯನ್ನು ಪ್ರತಿನಿಧಿಸುತ್ತಿರುವ ಪೈನಗರ್ ವಿಷನ್  ಏಕೈಕ ಪ್ರತಿನಿಧಿ ಕಾರ್ತಿಕ್ ಗೆ ಪತ್ರಿಕಾ ಬಳಗದ ತುಂಬು ಹೃದಯದ ಅಭಿನಂದನೆಗಳು.

No comments:

Post a Comment