ಪೈವಳಿಕೆನಗರದಲ್ಲಿ
ಸೌಹಾರ್ದ ದಿನಾಚರಣೆ
ಪೈವಳಿಕೆನಗರ,
ನ.21:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಸೌಹಾರ್ದ ಕ್ಲಬ್ ನ ಆಶ್ರಯದಲ್ಲಿ
ಸೌಹಾರ್ದ ದಿನವನ್ನು ಆಚರಿಸಲಾಯಿತು.
ಹಯರ್
ಸೆಕೆಂಡರಿ ವಿಭಾಗದ ಹಿರಿಯ
ಪ್ರಾಧ್ಯಾಪಕರಾದ ಶ್ರೀ ರತ್ನಕುಮಾರ್
ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀಮತಿ
ಶ್ಯಾಮಲಾ ಪಿ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದರು.
ಶಾಲಾ
ಸೌಹಾರ್ದ ಕ್ಲಬ್ ನ ಸಂಚಾಲಕರಾದ
ಶ್ರೀ ನಾರಾಯಣ ರಾವ್ ಪ್ರಾಸ್ತವಿಕವಾಗಿ
ಮಾತನಾಡಿದರು,
ಸೌಹಾರ್ದ
ದಿನದ ಅಂಗವಾಗಿ ಕ್ಲಬ್ ನಸದಸ್ಯರು
ಐದು ತಂಡಗಳಲ್ಲಾಗಿ ಯುನೆಸ್ಕೋ
ಅಂಗೀಕರಿಸಿದ ಜೀವನ ನೈಪುಣ್ಯಗಳನ್ನು
ಆಧರಿಸಿದ ಕಿರುನಾಟಕಗಳನ್ನು
ಪ್ರದರ್ಶಿಸಿದರು.
ಅನುಕಂಪ,
ಆತ್ಮೀಯತೆ,
ಪರೋಪಕಾರ,
ಸಂವಹನ,
ವಿಮರ್ಶಾತ್ಮಕ
ಚಿಂತನೆ,
ಕ್ರಿಯಾತ್ಮಕ
ಚಿಂತನೆ,
ವ್ಯಕ್ತಿಗತ
ಸಂಬಂಧಗಳ ಹಿರಿಮೆ ಮೊದಲಾದ ಹಲವು
ಜೀವನ ನೈಪುಣ್ಯಗಳು ನಾಟಕದಲ್ಲಿ
ಮೂಡಿ ಬಂದಿದ್ದವು.
ಶಿಕ್ಷಕರಾದ
ಶ್ರೀ ರತ್ನಕುಮಾರ್ ಅವರು ತಂಡದಲ್ಲಿ
ಮೂಡಿಬಂದ ನೈಪುಣ್ಯಗಳನ್ನು
ಜೀವನದಲ್ಲಿ ಅಳವಡಿಸಿಕೊಳ್ಳಲು
ಕರೆನೀಡಿದರು.
ವಿದ್ಯಾರ್ಥಿ
ನಾಯಕರಾದ ಹಸೀನಾ ಬಿ ಸ್ವಾಗತಿಸಿ
ಉಮರುಲ್ ಸಿಲ್ ಝಹಾನ್ ಮಿಸ್ಬಾ
ವಂದಿಸಿದರು.
ಪೈವಳಿಕೆನಗರ
ಶಾಲೆಯಲ್ಲಿ ವಿದ್ಯಾರ್ಥಿಗಳ
ಮನಸೆಳೆದ ಏರ್ ಶೋ
ಪೈವಳಿಕೆನಗರ,
ನ.24:
ಮಂಗಳೂರಿನ
ಸಹ್ಯಾದ್ರಿ ಇಂಜಿನಿಯರಿಂಗ್
ಕಾಲೇಜಿನ ವಿದ್ಯಾರ್ಥಿಗಳು
ಪೈವಳಿಕೆನಗರ ಶಾಲೆಯಲ್ಲಿ ಏರ್
ಶೋ ನಡೆಸಿ ವಿದ್ಯಾರ್ಥಿಗಳ
ಮನಸೆಳೆದರು.
ಏರೋನಾಟಿಕ್ಸ್
ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ
ಉದಯೋನ್ಮುಖ ಇಂಜಿನಿಯರ್ ಗಳ ಸ್ಟಾರ್
ಚಾಲೆಂಜರ್ಸ್ ತಂಡ ಅಪರಾಹ್ನ 2
ಗಂಟೆಗೆ
ಸರಿಯಾಗಿ ಶಾಲಾ ಮೈದಾನದಲ್ಲಿ
ಡ್ರೋನ್ ಮತ್ತು ವಿವಿಧ ವಿಮಾನಗಳ
ಹಾರಾಟ ನಡೆಸಿ ಕುತೂಹಲ ಸೃಷ್ಟಿಸಿದರು.
ಶ್ರೀ
ಅಬ್ದುಲ್ ಲತೀಫ್ ಕೊಕ್ಕೆಚಾಲ್
ಸ್ವಾಗತಿಸಿ,
ಶ್ರೀ
ಕೃಷ್ಣಮೂರ್ತಿ ಎಸ್ ವಂದಿಸಿದರು.
(ವೈಶಾಖ್,
9ಎ,
ಧ್ವಾನಿಷ್
9ಸಿ,
ಕಾರ್ತಿಕ್
9ಸಿ,
ಚರಣ್
ರಾಜ್ 9ಸಿ)
No comments:
Post a Comment