BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ

ಪೈವಳಿಕೆನಗರ : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆಯಿತು. ಒಟ್ಟು 25 ತರಗತಿಗಳ ಚುನಾವಣೆಗಾಗಿ 12 ಬೂತ್ ಗಳಲ್ಲಿ ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಯಿತು. ವಿವಿಧ ಬೂತ್ ಗಳಲ್ಲಿ ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್, ಬೂತ್ ಲೆವೆಲ್ ಆಫೀಸರ್ ಗಳಾಗಿ ವಿದ್ಯಾರ್ಥಿಗಳು ಕರ್ತವ್ಯ ನಿರ್ವಹಿಸಿದರು. ಶಾಂತಿಯುತ ಮತದಾನಕ್ಕಾಗಿ ವಿದ್ಯಾರ್ಥಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ, ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಪಿಟಿಎ ಸದಸ್ಯರಾದ ಶ್ರೀ ರಾಧಾಕೃಷ್ಣ ಮಾಸ್ತರ್ ಕಾಯರ್ ಕಟ್ಟೆ, ಹಿರಿಯ ಶಿಕ್ಷಕರಾದ ಶ್ರೀ ರವೀಂದ್ರನಾಥ್ ಕೆ.ಆರ್, ಶ್ರೀ ರತ್ನಕುಮಾರ್, ಶ್ರೀ ಕೆ.ಎಂ ಬಲ್ಲಾಳ್ ವಿವಿಧ ಬೂತ್ ಗಳನ್ನು ಸಂದರ್ಶಿಸಿ ಪರಿಶೀಲನೆ ನಡೆಸಿದರು. ಮತದಾನ ಮುಗಿದ ನಂತರ ಮತ ಪೆಟ್ಟಿಗೆಗಳನ್ನು ಮತ ಎಣಿಕಾ ಕೇಂದ್ರಕ್ಕೆ ಕೊಂಡೊಯ್ದು ಅಭ್ಯರ್ಥಿಗಳ ಸಮ್ಮುಖದಲ್ಲೇ ಎಣಿಕೆ ನಡೆಸಲಾಯಿತು. ಮತ ಎಣಿಕೆ ಪ್ರಕ್ರಿಯೆಯನ್ನು ಪೈವಳಿಕೆನಗರ ಶಾಲಾ ಐಟಿ ಕ್ಲಬ್ ನ ಮುಖವಾಣಿ ಸಾಪ್ತಾಹಿಕ ಪೈನಗರ್ ವಿಷನ್ ನೇತೃತ್ವದಲ್ಲಿ ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಮೂಲಕ ನೇರಪ್ರಸಾರ ಮಾಡಲಾಯಿತು. ಮತ ಎಣಿಕೆಯ ಮುನ್ನಡೆ, ಹಿನ್ನಡೆಗಳ ಕುರಿತು ಮಾಹಿತಿಗಳನ್ನು ಮಕ್ಕಳು ಟಿವಿ ಮೂಲಕ ಪಡೆದರು. ಜಯಗಳಿಸಿದ ಅಭ್ಯರ್ಥಿಗಳು, ಬೂತ್ ಆಫೀಸರ್ ಗಳು ಮಾಧ್ಯಮದ ಮೂಲಕ ತಮ್ಮ ಅನುಭವ, ಅನಿಸಿಕೆಗಳನ್ನು ಮಾಧ್ಯಮದ ಮೂಲಕ ಹಂಚಿಕೊಂಡರು. ಅಪರಾಹ್ನ ಸೇರಿದ ತರಗತಿ ಪ್ರತಿನಿಧಿಗಳ ಸಭೆಯಲ್ಲಿ ಸಭೆಯಲ್ಲಿ ಪ್ಲಸ್ ಟು ಸೈನ್ಸ್ ನ ಹವವುಲ್ ಅಫೀಫಾ ಶಾಲಾ ಪಾರ್ಲಿಮೆಂಟ್ ನಾಯಕಿಯಾಗಿ ಆಯ್ಕೆಯಾದರು. 10ಎ ತರಗತಿಯ ಕಾರ್ತಿಕ್ ಪಾರ್ಲಿಮೆಂಟ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಶಾಲಾ ಪಾರ್ಲಿಮೆಂಟ್ ಚುನಾವಣಾ ಜವಾಬ್ದಾರಿಯ ಶ್ರೀ ಅಬ್ದುಲ್ ಲತೀಫ್, ಶ್ರೀಮತಿ ಸುಮಯ್ಯ, ನೇತೃತ್ವ ನೀಡಿದರು.

No comments:

Post a Comment