BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ


ಪೈವಳಿಕೆನಗರ : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದರು. ಶಾಲಾ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತ್ ಘನ ಅಧ್ಯಕ್ಷರಾದ ಶ್ರೀಮತಿ ಭಾರತಿ ಜೆ ಶೆಟ್ಟಿ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಕಾಸರಗೋಡು ಜಿಲ್ಲಾ ಸಹಾಯಕ ಯೋಜನಾಧಿಕಾರಿ ಶ್ರೀನಿವಾಸ ಭಟ್ ಕಾಡೂರು ಮುಖ್ಯ ಅತಿಥಿಯಾಗಿದ್ದರು. ಹಯರ್ ಸೆಕೆಂಡರಿ ವಿಭಾಗದ ಶ್ರೀ ನಾರಾಯಣ ರಾವ್ ಶುಭಾಶಂಸನೆಗೈದರು. ಪೈವಳಿಕೆ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುನಿತಾ ವಾಲ್ಟಿ ಡಿಸೋಜಾ, ಪಿಟಿಎ ಪದಾಧಿಕಾರಿಗಳಾದ ಶ್ರೀ ಕೃಷ್ಣ, ಶ್ರೀ ಇಬ್ರಾಹೀಂ ಪೈವಳಿಕೆ, ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ರಾಧಾಕೃಷ್ಣ ಕಾಯರ್ ಕಟ್ಟೆ, ದೈಹಿಕ ಶಿಕ್ಷಕರಾದ ಶ್ರೀ ಕೆ.ಎಂ ಬಲ್ಲಾಳ್, ಹಿರಿಯ ಶಿಕ್ಷಕರಾದ ಶ್ರೀ ರವೀಂದ್ರನಾಥ್ ಕೆ ಆರ್, ಶ್ರೀಮತಿ ಶಶಿಕಲಾ, ವಿದ್ಯಾರ್ಥಿ ನಾಯಕಿ ಕುಮಾರಿ ಅಫೀಫಾ, ವಿದ್ಯಾರ್ಥಿ ಸೆಕ್ರೆಟರಿ ಕಾರ್ತಿಕ್ ಪಿ ಉಪಸ್ಥಿತರಿದ್ದರು. ಜಲನಿಧಿ ಪ್ರಬಂಧ ಸ್ಪರ್ಧೆಯಲ್ಲಿ ಜಯಗಳಿಸಿದ ಶಾಲಾ ಮಕ್ಕಳಿಗೆ ಪಂಚಾಯತ್ ಅಧಿಕೃತರು ಬಹುಮಾನ ವಿತರಿಸಿದರು.  ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ಮೂರ್ತಿ ಎಂ ಎಸ್ ಸಭಾ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀ ಜಿಲ್ಜೋ ಎನ್ ಗೋವಿಂದ್ ಹಾಗೂ ಪುಷ್ಪಾ ಮರಿಯಾ ನಿರ್ದೇಶನದಲ್ಲಿ ಪೈವಳಿಕೆನಗರ ಶಾಲಾ ವಿಶೇಷ ಚೇತನ ಮಕ್ಕಳಿಂದ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ನೃತ್ಯ ರೂಪಕ ಪ್ರದರ್ಶನಗೊಂಡಿತು. ನಂತರ ವಿದ್ಯಾರ್ಥಿಗಳಿಂದ ನೃತ್ಯ, ಭಾಷಣ, ದೇಶಭಕ್ತಿಗೀತೆ, ಸಮೂಹಗೀತೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳಿಗೆ ಪೈವಳಿಕೆ ಗ್ರಾಮ ಪಂಚಾಯತ್ ವತಿಯಿಂದ ಸಿಹಿತಿಂಡಿ, ಪೈವಳಿಕೆನಗರ ಶಾಲಾ ಉದ್ಯೋಗಿಗಳ ಸಂಘದ ವತಿಯಿಂದ ಪಾಯಸ ವಿತರಿಸಲಾಯಿತು. ಸಮಾಜ ವಿಜ್ಞಾನ ಕ್ಲಬ್ ಸಂಚಾಲಕರಾದ ಶ್ರೀ ಅಬ್ದುಲ್ ಲತೀಫ್ ಕೊಕ್ಕೆಚಾಲ್, ಶ್ರೀ ಪ್ರವೀಣ್ ಕನಿಯಾಲ ಕಾರ್ಯಕ್ರಮ ನಡೆಸಿಕೊಟ್ಟರು.

No comments:

Post a Comment