BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕೃಷಿಕರ ದಿನಾಚರಣೆಯಂದು ರಕ್ಷಣ್ ರೈ ಗೆ ಸನ್ಮಾನ

ಪೈವಳಿಕೆನಗರ, ಸಿಂಹ.1: ಸಿಂಹ ಒಂದನೇ ದಿನ ಪೈವಳಿಕೆ ಗ್ರಾಮ ಪಂಚಾಯತಿನಲ್ಲಿ ನಡೆದ ಕೃಷಿಕರ ದಿನಾಚರಣೆಯಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 8ಎ ತರಗತಿಯ ವಿದ್ಯಾರ್ಥಿ ರಕ್ಷಣ್ ರೈಯನ್ನು ಸನ್ಮಾನಿಸಲಾಯಿತು. ಶಾಲಾ ಇಕೋ ಕ್ಲಬ್|ನ ನೇತೃತ್ವದಲ್ಲಿ ನಡಸಿದ ತರಕಾರಿ ತೋಟದ ಕರ್ತವ್ಯ ನಿರ್ವಹಣೆಯನ್ನು ಗಮನದಲ್ಲಿರಿಸಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೈವಳಿಕೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಭಾರತಿ ಜೆ ಶೆಟ್ಟಿಯವರು ಶಾಲು ಹೊದೆಸಿ ಫಲ ಪುಷ್ಪಗಳನ್ನಿತ್ತು ಸನ್ಮಾನಿಸಿದರು.(ವರದಿ ಮತ್ತು ಛಾಯಾಗ್ರಹಣ, ಧನುಷ್ ಕುಮಾರ್ ಜೆ, ಪೈನಗರ್ ವಿಷನ್ 8ಎ ಪ್ರತಿನಿಧಿ)

No comments:

Post a Comment