BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕಾರುಣ್ಯ ಸಹಾಯ ಹಸ್ತಾಂತರ


ಪೈವಳಿಕೆನಗರ, ಜು. 4: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕಾರುಣ್ಯ ನಿಧಿ ಎಂಬ ಯೋಜನೆಯಂತೆ ಪ್ರತಿ ತರಗತಿಗಳಲ್ಲಿ ವಿದ್ಯಾರ್ಥಿಗಳು ತಾವು ದುಂದುವೆಚ್ಚ ಮಾಡುವ ಹಣವನ್ನು ಡಬ್ಬಗಳಲ್ಲಿ ಶೇಖರಿಸಿಡುವರು. ಇದನ್ನು ಅನಾರೋಗ್ಯ ಪೀಡಿತರಾದ ಬಡ ಮಕ್ಕಳಿಗೆ ಚಿಕಿತ್ಸಾ ವೆಚ್ಚವಾಗಿ ನೀಡಲಾಗುವುದು. ಇದರಂತೆ ಸಂಗ್ರಹ ಮಾಡಿದ ಹಣವನ್ನು ಶಾಲಾ ಮುಖ್ಯೋಪಾಧ್ಯಾಯರು ಅನಾರೋಗ್ಯ ಪೀಡಿತನಾಗಿ ರೇಡಿಯೇಶನ್ ತೆರಪಿಯಲ್ಲಿರುವ 10ಬಿ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ನೀಡಿದರು. ಕ್ಲಾಸು ಅಧ್ಯಾಪಿಕೆ ಸ್ಮಿತಾ ಟೀಚರ್, ಕಾರುಣ್ಯ ನಿಧಿ ಸಂಯೋಜಕರಾದ ಶ್ರೀ ರವೀಂದ್ರನಾಥ್.ಕೆ.ಆರ್, ವಿದ್ಯಾರ್ಥಿಯ ಹೆತ್ತವರು ಉಪಸ್ಥಿತರಿದ್ದರು.(ಪೈನಗರ್ ವಿಷನ್ ಕಾರುಣ್ಯಲೋಕ ವರದಿ)

No comments:

Post a Comment