BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಹಲಸಿನ ಕಾರ್ಯಾಗಾರ ಹಾಗೂ ಉತ್ಪನ್ನ ಪ್ರದರ್ಶನ
ಪೈವಳಿಕೆನಗರ, ಜು. 5: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಹಲಸಿನ ಕಾರ್ಯಾಗಾರ ಮತ್ತು ಭಕ್ಷ್ಯಗಳ ಪ್ರದರ್ಶನ ಜರಗಿತು. ಹಲಸಿನ ಕಾಯಿಯಿಂದ ಸೊಳೆಯನ್ನು ಬೇರ್ಪಡಿಸಿ ಉಪ್ಪಿನಲ್ಲಿ ಹಾಕಿಡಲಾಯಿತು. ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ.ಎಸ್. ತಮ್ಮ ಮನೆಯಿಂದ ಹಲಸಿನಕಾಯಿಗಳನ್ನು ತಂದುಕೊಟ್ಟು ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ. ಹಲಸಿನ ಕಾಯಿಯ ಹಪ್ಪಳ, ಚಿಪ್ಸ್, ದೋಸೆ, ಕೊಟ್ಟಿಗೆ ಮುಂತಾದ ಹತ್ತು ಹಲವು ಭಕ್ಷ್ಯಗಳನ್ನು ತಯಾರಿಸಿದರು. ಕಾರ್ಯಾಗಾರದಲ್ಲಿ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿ, ಶ್ರೀ ಬಾಲಕೃಷ್ಣ ಕಾಯರ್ ಕಟ್ಟೆ, ಶ್ರೀ ಗೋಪಣ್ಣ ಕುರುಡಪದವು, ಶ್ರೀ ಪ್ರೇಮಾವತಿ ಟೀಚರ್, ಶ್ರೀಮತಿ ಹಸೀನಾ ಟೀಚರ್, ಶ್ರೀಮತಿ ಗುಲಾಬಿ ಟೀಚರ್, ಶ್ರೀಮತಿ ಪ್ರೀತಿ, ವಿದ್ಯಾರ್ಥಿಗಳಾದ ಕಾರ್ತಿಕ್. ಕೆ 9ಸಿ, ಧ್ವಾನಿಷ್ 9ಸಿ, ಚರಣ್ ರಾಜ್ 9ಸಿ, ಪ್ರಜ್ವಲ್ 9ಸಿ, ಮನೋಜ್ ಕುಮಾರ್ ಎ 9ಸಿ ವಿಜಯ್ 9ಸಿ, ರಕ್ಷಣ್ ರೈ 8, ವಿಲ್ಸನ್ 8, ಜೋಶನ್ 8, ಧನುಷ್ ಕುಮಾರ್ ಜೆ 8ಎ ಸಹಕರಿಸಿದರು.

No comments:

Post a Comment