BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಗೆ ಜಿಲ್ಲಾ ಪಂಚಾಯತ್ ನಿಯೋಗ ಭೇಟಿ

ಪೈವಳಿಕೆನಗರ, ಜೂ.30 ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಗೆ ಜಿಲ್ಲಾ ಪಂಚಾಯತ್ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಧ್ಯಯನದಲ್ಲಿ ವಿಶೇಷ ಸಾಧನೆ ಮೆರೆದಿರುವ ಪೈವಳಿಕೆನಗರ ಶಾಲೆಯಲ್ಲಿ ಪರಿಮಿತ ಮೂಲಸೌಕರ್ಯವನ್ನು ವೃದ್ದಿಗೊಳಿಸಬೇಕೆಂದು ಶಾಲಾ ಅಧಿಕೃತರು ವಿವರವಾದ ಯೋಜನಾ ವರದಿಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಿದ್ದರು. ನಿಯೋಗದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಾಕ್ಷರಾದ ಶ್ರೀಮತಿ ಶಾಂತಮ್ಮ ಫಿಲಿಪ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಹರ್ಷಾದ್ ವರ್ಕಾಡಿ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಶ್ರೀ ರಾಜನ್ ಅವರೊಂದಿಗೆ ಶಾಲಾ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಪದಾಧಿಕಾರಿಗಳಾದ ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ಮುಸ್ತಾಫಾ ಮತ್ತಿತರರು ಸೌಕರ್ಯಗಳನ್ನು ವೀಕ್ಷಿಸಿ ಚರ್ಚಿಸಿದರು. ಶಾಲಾ ಕೊಠಡಿಗಳು, ಪ್ರಯೋಗಾಲಯ, ಕಟ್ಟಡಗಳನ್ನು ವೀಕ್ಷಿಸಿದ ನಿಯೋಗವು ತಕ್ಷಣ ಮೂಲಸೌಕರ್ಯ ವೃದ್ಧಿಗೊಳಿಸುವ ಭರವಸೆಯನ್ನು ನೀಡಿದರು. ಹಲವು ವರ್ಷಗಳ ಹಿಂದೆಯೇ ಶಾಲೆಗೆ ಹಯರ್ ಸೆಕೆಂಡರಿ ಮಂಜೂರಾದರೂ ಹೈಸ್ಕೂಲ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಸಣ್ಣ ಕೊಠಡಿಯಲ್ಲಿ 60 ಮಕ್ಕಳು ಅಧ್ಯಯನ ನಡೆಸುವುದು ಕಷ್ಟವಾಗಿತ್ತು. ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ ವಿಭಾಗದಲ್ಲಿ ಇದ್ದ ಏಕೈಕ ಲ್ಯಾಬ್ ಎರಡೂ ವಿಭಾಗದವರಿಗೆ ಆಶ್ರಯವಾಗಿತ್ತು. ಶಾಲಾ ಆವರಣ ಗೋಡೆ ಕೂಡಾ ಶಿಥಿಲವಾಗಿದ್ದು ಅಲ್ಪ ಮಳೆ ಬಂದ ಕೂಡಲೇ ಕುಸಿಯುವ ಭೀತಿಯಲ್ಲಿದೆ. ಇತರ ಶಾಲೆಗಳಿಂದ ಫಲಿತಾಂಶ ಉತ್ತಮವಾದ ಕಾರಣ ಮಕ್ಕಳು ಹೆಚ್ಚು ಪ್ರವೇಶ ಪಡೆಯುತ್ತಿದ್ದು ತರಗತಿ ಕೊಠಡಿಗಳನ್ನು ಹೆಚ್ಚಿಸಲು ಅಧಿಕೃತರಲ್ಲಿ ವಿನಂತಿಸಲಾಯಿತು.

No comments:

Post a Comment