BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಮಾದಕ ವ್ಯಸನ ವಿರೋಧಿ ದಿನ
ಪೈವಳಿಕೆನಗರ, ಜೂ.27 : ಪೈವಳಿಕೆನಗರ ಶಾಲೆಯಲ್ಲಿ ವಿಶ್ವ ಮಾದಕ ವ್ಯಸನ ವಿರೋಧಿ ದಿನವನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲ. ಪಿ ಕಾರ್ಯಕ್ರಮವನ್ನು ಉದ್ಘಾಟಸಿದರು. ಮಾದಕ ವ್ಯಸನಕ್ಕೆ ಸಂಬಂಧಿಸಿದ ಪೋಸ್ಟರ್ ನಿರ್ಮಾಣ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ನೃತ್ಯ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಹಾಡನ್ನು ವಿದ್ಯಾರ್ಥಿಗಳು ಸಂಗೀತದ ಹಿನ್ನಲೆಯೊಂದಿಗೆ ಹಾಡಿ ಜಾಗೃತಿ ಮೂಡಿಸಿದರು. ನಂತರ ವ್ಯಸನದ ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು. ಯುಪಿ ಎಸ್ ಆರ್ ಜಿ ಕನ್ವಿನರ್ ಶ್ರೀ ಪ್ರವೀಣ್ ಕನಿಯಾಲ, ಶ್ರೀ ಸುನೀಶ್ ಕುಮಾರ್ ತಡತ್ತಿಲ್, ಶ್ರೀಮತಿ ಹಸೀನಾ ಟಿ ಖಾದರ್, ಶ್ರೀಮತಿ ಶಶಿಕಲಾ ಟೀಚರ್ ಮಾತನಾಡಿದರು. ಮಾದಕ ವ್ಯಸನ ವಿರೋಧಿ ಕ್ಲಬ್ ಸಂಚಾಲಕ ಶ್ರೀ ಜಿಲ್ಜೋ. ಎನ್. ಗೋವಿಂದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರಜಿತಾ ಟೀಚರ್, ಶ್ರೀಮತಿ ಮರಿಯ ಪುಷ್ಪ, ಶ್ರೀಮತಿ ಜಯಲಕ್ಷ್ಮೀ ಸಹಕರಿಸಿದರು. ವಿದ್ಯಾರ್ಥಿಗಳಾದ ಅಕ್ಷತಾ 9, ಪ್ರಜ್ಞಾ.ಆರ್ 9, ಮರಿಯಮ್ಮ 9, ಫಾತಿಮತ್ ಸಹನಾ 9, ಸೌಮ್ಯ 9, ವೈಭವಿ 9, ಅಕ್ಷಯ್ 9, ಅಕ್ಷತ್ 9, ಅನಿಶ್ 9, ವೈಶಾಖ್ 9, ವಿನೀತ್ ಕುಮಾರ್ 9, ವೈಷ್ಣವ್ 8ಸಿ, ರಕ್ಷಣ್ ರೈ 8, ಧನುಷ್ ಕುಮಾರ್ 8, ಮಹೇಶ್ 8ಸಿ, ಪೂಜಾ ಕುಮಾರಿ 9ಸಿ, ಆಯಿಶತ್ ಹನಾ 8ಬಿ, ಫಾತಿಮತ್ ಅಝ್ಮೀನಾ8ಬಿ, ಅಮೀರಾ, ಫಾತಿಮತ್ ಮಝೈಮಾ, ಆಯಿಷತ್ ಶಿಫಾನಾ ಭಾಗವಹಿಸಿದರು.

No comments:

Post a Comment