ಪೈವಳಿಕೆನಗರ
ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ
ಪೈವಳಿಕೆನಗರ,
ಜೂ.1:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಪ್ರವೇಶೋತ್ಸವವನ್ನು ಸಂಭ್ರಮದಿಂದ
ಆಚರಿಸಲಾಯಿತು.
ಪೈವಳಿಕೆ
ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾದ
ಶ್ರೀಮತಿ ಸುನಿತಾ ವಾಲ್ಟಿ ಡಿಸೋಜಾ
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷರಾದ
ಶ್ರೀ ಲೋರೆನ್ಸ್ ಡಿಸೋಜಾ ಕಾರ್ಯಕ್ರಮದ
ಅದ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ ಪಿ.
ಪ್ರಾಸ್ತಾವಿಕವಾಗಿ
ಮಾತನಾಡಿದರು.
ಎಸ್
ಆರ್ ಜಿ ಕನ್ವಿನರ್ ಶ್ರೀ
ರವೀಂದ್ರನಾಥ್.ಕೆ.ಆರ್,
ಪಿಟಿಎ
ಉಪಾಧ್ಯಕ್ಷರಾದ ಶ್ರೀ ಇಬ್ರಾಹೀಂ
ಪಾವಲುಕೋಡಿ,
ಶ್ರೀ
ಅಜಿತ್ ಪ್ರಸಾದ್ ,ಪೈವಳಿಕೆ
ಕ್ರೆಸಂಟ್ ಸ್ಪೋರ್ಟ್ಸ್ ಕ್ಲಬ್
ನ ಶ್ರೀ ಅಬ್ದುಲ್ ರಹಿಮಾನ್ ಪೈವಳಿಕೆ
ಶುಭಾಶಂಸನೆಗೈದರು.
ವಿದ್ಯಾರ್ಥಿಗಳಿಗೆ
ಕ್ರೆಸಂಟ್ ಸ್ಪೋರ್ಟ್ಸ್ ಕ್ಲಬ್
ನ ವತಿಯಿಂದ ಬ್ಯಾಗ್ ವಿತರಿಸಲಾಯಿತು.
ಹೊಸತಾಗಿ
ಒಂದನೇ ತರಗತಿಗೆ ಸೇರ್ಪಡೆಗೊಂಡ
ವಿದ್ಯಾರ್ಥಿಗಳು ಅಕ್ಷರ ದೀಪ
ಬೆಳಗಿದರು.
ನಂತರ
ಸ್ಟಾಫ್ ಕೌನ್ಸಿಲ್ ವತಿಯಿಂದ
ಪಾಯಸ ವಿತರಿಸಲಾಯಿತು.
ಶ್ರೀಧರ
ಭಟ್ ಬೀಡುಬೈಲು ವಂದಿಸಿದರು.
ಸ್ಟಾಫ್
ಸೆಕ್ರೆಟರಿ ಶ್ರೀ ಕೃಷ್ಣಮೂರ್ತಿ.ಎಂ.ಎಸ್.
ಕಾರ್ಯಕ್ರಮ
ನಿರ್ವಹಿಸಿದರು.
ಹಸೀನಾ
ಟೀಚರ್,
ಗುಲಾಬಿ
ಟೀಚರ್ ನೇತೃತ್ವ ನೀಡಿದರು.
No comments:
Post a Comment