ಪ್ಲಸ್
ಟು ಫಲಿತಾಂಶ ಇಂದು
ತಿರುವನಂತಪುರ,
ಮೇ
10
: ಕೇರಳ
ರಾಜ್ಯಾದ್ಯಂತ ಮಾರ್ಚ್ ತಿಂಗಳಲ್ಲಿ
ನಡೆಸಿದ ಹಯರ್ ಸೆಕೆಂಡರಿ,
ವೊಕೇಶನಲ್
ಹಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ
ಇಂದು(ಮಂಗಳವಾರ)
ಅಪರಾಹ್ನ
3
ಗಂಟೆಗೆ
ಪ್ರಕಟವಾಗಲಿದೆ.
ಮುಖ್ಯ
ಕಾರ್ಯದರ್ಶಿ ಎಸ್.ಎಂ.
ವಿಜಯಾನಂದ್
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ವಿ.ಎಸ್.
ಸೆಂತಿಲ್
ಅವರಿಗೆ ಫಲಿತಾಂಶ ಹಸ್ತಾಂತರಿಸಿ
ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಸೋಮವಾರ
ಫಲಿತಾಂಶ ಪ್ರಕಟವಾಗುವುದೆಂಬ
ಮಾಹಿತಿ ನೀಡಿದ್ದರೂ ಕೆಲವೊಂದು
ತಾಂತ್ರಿಕ ಕಾರಣಗಳಿಂದ ಅದನ್ನು
ಮುಂದೂಡಲಾಗಿತ್ತು.
ವಿವಿಧ
ವೆಬ್ ಸೈಟಿನಲ್ಲಿ ಮಾತ್ರವಲ್ಲದೆ
ಪಿ ಆರ್ ಡಿ ಲೈವ್ ಎಂಬ ಸ್ಮಾರ್ಟ್
ಫೋನ್ ಆಪ್ ಉಪಯೋಗಿಸಿ ಫಲಿತಾಂಶ
ತಿಳಿಯಬಹುದು.
ಇದಕ್ಕಾಗಿ
ಪ್ಲೇ ಸ್ಟೋರ್ ನಿಂದ ಆಪ್ ಡೌನ್
ಲೋಡ್ ಮಾಡಿ ಉಪಯೋಗಿಸಬಹುದು.
No comments:
Post a Comment