BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಏಳನೇ ತರಗತಿಯ ಜಂಟಿ ಸಾಹಿತ್ಯ ಸಭೆ ಸಮಾರೋಪ


ಪೈವಳಿಕೆನಗರ, ಫೆ. 26 7ಎ ಮತ್ತು 7ಸಿ ತರಗತಿಗಳಲ್ಲಾಗಿ ನಡೆದುಕೊಂಡು ಬರುತ್ತಿದ್ದ ಸಾಹಿತ್ಯ ಸಭೆ ಸಮಾರೋಪ ಸಮಾರಂಭ ಒ ಬ್ಲೋಕ್ ನೀಲ ಸಭಾಂಗಣದಲ್ಲಿ ನಡೆಯಿತು. ಹಿರಿಯ ಶಿಕ್ಷಕರಾದ ಶ್ರೀ ರವೀಂದ್ರನಾಥ ಕೆ.ಆರ್. ಉದ್ಘಾಟಿಸಿದರು. ಹಿರಿಯ ದೈಹಿಕ ಶಿಕ್ಷಕರಾದ ಶ್ರೀ ಕೆ.ಎಂ. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಆಂಗ್ಲ ನಾಟಕ, ಸಮೂಹ ಗಾನ, ಸಮೂಹ ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವಿದ್ಯಾರ್ಥಿನಿ ವರಿಷ್ಮಾ ಇವಳಿಂದ ಕೊಳಲುವಾದನ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಡಾಫ್ನಿ ಸ್ವಾಗತಿಸಿ ಸೌಮ್ಯ ವಂದಿಸಿದರು. ಸಹನಾ ನಿರೂಪಿಸಿದರು. ಶ್ರೀಧರ ಭಟ್ ಬೀಡುಬೈಲು, ಪ್ರವೀಣ್ ಕನಿಯಾಲ ಉಪಸ್ಥಿತರಿದ್ದರು.

No comments:

Post a Comment