BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಅಗಲಿಕೆಯ ನೋವಲ್ಲಿ ಒಂದು ದಿನ ಹತ್ತನೇ ತರಗತಿಯ ವಿದಾಯಕೂಟ
 
ಪೈವಳಿಕೆನಗರ ಫೆ.26: ಹತ್ತನೇ ತರಗತಿ ಶಾಲಾ ಜೀವನದ ಕೊನೆಯ ಘಟ್ಟ. ಹದಿಹರೆಯದ ಯುವ ಮನಸುಗಳ ತುಮುಲ ತುಡಿತಗಳ ಸಮ್ಮಿಲನ. ಅತ್ತ ಬಾಲ್ಯವೂ ಅಲ್ಲ ಇತ್ತ ಯೌವನವೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿರುವ ಮನಸುಗಳು. ಯಾವುದು ಸರಿ ಯಾವುದು ತಪ್ಪು ಎಂದು ಸಂಪೂರ್ಣವಾಗಿ ತಿಳಿಯದ ವಯಸ್ಸು. ಒಂದರಿಂದ ಹತ್ತರವರೆಗೆ ತಮ್ಮೊಂದಿಗೆ ಒಡನಾಡಿಗಳಾಗಿದ್ದ ಓರಗೆಯವರು ಅಗಲುವ ಸಮಯ. ತಮ್ಮ ಮನದ ಭಾವನೆಗಳನ್ನು ಆಟೋಗ್ರಾಫ್ ಕಾಗದದಲ್ಲಿ ಲೇಖನಿಯೆಂಬ ಮಾಧ್ಯಮದ ಮೂಲಕ ವ್ಯಕ್ತಪಡಿಸುವ ಸುಂದರ ಘಳಿಗೆ. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಿದಾಯಕೂಟ 26 ಫೆಬ್ರವರಿ ಶುಕ್ರವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶ್ರೀ ಕೃಷ್ಣಮೂರ್ತಿ, ಶ್ರೀಮತಿ ಶಶಿಕಲಾ, ಶ್ರೀಮತಿ ರೇಶ್ಮಾ, ಶ್ರೀ ರವೀಂದ್ರನಾಥ ಕೆ.ಆರ್ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಕಡೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಗುಣಗಾನ ಮಾಡಿ ಉಡುಗೊರೆಗಳನ್ನು ನೀಡಿದರು. ಮಧ್ಯಾಹ್ನ ವಿವಿಧ ಭಕ್ಷ್ಯಗಳಿಂದೊಡಗೂಡಿದ ಭೋಜನ ಏರ್ಪಡಿಸಲಾಗಿತ್ತು. ಇನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಯನ ರಜೆಯಾಗಿದ್ದು ಮಾರ್ಚ್ 9ರಂದು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲಾ ಎಸ್ ಎಸ್ ಎಲ್ ಸಿ ಸ್ನೇಹಿತರಿಗೆ ಪೈನಗರ್ ವಿಷನ್ ಶುಭಾಶಯಗಳು

No comments:

Post a Comment