BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ವಿದ್ಯಾರಂಗ ಸಾಹಿತ್ಯೋತ್ಸವ ಸಮಿತಿ ಬರ್ಖಾಸ್ತು ಸಭೆ
ಪೈವಳಿಕೆನಗರ ಫೆ.18: ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ ಸಂಘಟಕ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಭಾಗವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರಂಗದ ಉಪಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಶಶಿಕಲಾ.ಕೆ ಅವಲೋಕನ ವರದಿ ಮಂಡಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ .ಪಿ ಲೆಕ್ಕಪತ್ರ ಮಂಡಿಸಿದರು. ಮುಖ್ಯೋಪಾಧ್ಯಾಯರ ಸಂಘಟನೆಯ ಶ್ರೀ ರಾಜಶೇಖರ ಅನಂತಪುರ, ಶ್ರೀ ಗಣೇಶ್ ರಾವ್ ಉಪಸ್ಥಿತರಿದ್ದರು. ಶ್ರೀ ಅಬ್ದುಲ್ ಲತೀಫ್ ಕೊಕ್ಕೆಚಾಲ್ ಸ್ವಾಗತಿಸಿ ಶ್ರೀ ಉಣ್ಣಿಕೃಷ್ಣನ್ ವಂದಿಸಿದರು. ಶ್ರೀ ಶ್ರೀಧರ ಭಟ್ ಬೀಡುಬೈಲು ನಿರ್ವಹಿಸಿದರು.

No comments:

Post a Comment