BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈನಗರ್ ವಿಷನ್ ಮ್ಯಾಗಝಿನ್ ಬಿಡುಗಡೆ ಮತ್ತು ಮಾಧ್ಯಮ ಪ್ರಶಸ್ತಿ ವಿತರಣೆ

ಪೈವಳಿಕೆನಗರ, ಮಾ.1 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಐಟಿ ಕ್ಲಬ್ ನ ಪ್ರಕಟಣೆಯಾದ ಪೈನಗರ್ ವಿಷನ್ ಕನ್ನಡ ಮುದ್ರಿತ ಹಾಗೂ ಆನ್ ಲೈನ್ ಶಾಲಾ ಸುದ್ದಿ ಸಾಪ್ತಾಹಿಕ ಹೊರತಂದ ಪೈವಳಿಕೆನಗರ ಶಾಲಾ ಮ್ಯಾಗಝಿನ್ ಬಿಡುಗಡೆ ಹಾಗೂ ಪೈನಗರ್ ವಿಷನ್ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು. ಕೇರಳ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ ಸದಸ್ಯರಾದ ಶ್ರೀ ಕೆ.ಎಂ. ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಶಿಕ್ಷಕರೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಘಟಕ ಅಧ್ಯಕ್ಷರಾದ ಶ್ರೀ ರವೀಂದ್ರನಾಥ್.ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಕಾರ್ಯದರ್ಶಿಯಾದ ಶ್ರೀಮತಿ ಶಶಿಕಲಾ. ಕೆ ಶಾಲಾ ಮ್ಯಾಗಝಿನ್ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳೇ ನಟಿಸಿ , ಚಿತ್ರೀಕರಿಸಿದ ಶಾಲಾ ಚಟುವಟಿಕೆಗಳ ಸಾಕ್ಷ್ಯಚಿತ್ರ ಡಿವಿಡಿಯನ್ನು ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಬಿಡುಗಡೆ ಮಾಡಿದರು. ಶಾಲೆಗೆ 111 ವರ್ಷಗಳು ತುಂಬುವ ಹಿನ್ನಲೆಯಲ್ಲಿ ಶಾಲಾ ಚರಿತ್ರೆ, ಸಾಧನೆಗಳ ಅವಲೋಕನದ ಕುರಿತಾದ ಕರಪತ್ರವನ್ನು ಶಾಲಾ ಎಸ್ ಆರ್ ಜಿ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್ ಬಿಡುಗಡೆಗೊಳಿಸಿದರು. ಈ ವರ್ಷದ ಮಾಧ್ಯಮ ಪ್ರಶಸ್ತಿಯನ್ನು ಅತ್ಯುತ್ತಮ ಸೇವೆಗಾಗಿ ಪೈನಗರ್ ವಿಷನ್ ವಿದ್ಯಾರ್ಥಿ ಸಾಪ್ತಾಹಿಕದ ವೈಶಾಖ್, ಕಾರ್ತಿಕ್ ಮತ್ತು ಧ್ವಾನಿಷ್ ಇವರಿಗೆ ರವೀಂದ್ರನಾಥ್. ಕೆ.ಆರ್ ವಿತರಿಸಿದರು. ಶ್ರೀಮತಿ ರೈನಾ ಇವೆಟ್ ಡಿಸೋಜಾ, ಶ್ರೀಮತಿ ವತ್ಸಲಾ, ಶ್ರೀ ಜಿಲ್ಜೋ, ಶ್ರೀಮತಿ ರಜಿತಾ ಮಂಗಳೂರು, ಶ್ರೀ ಅಬ್ದುಲ್ ಲತೀಫ್, ಶ್ರೀ ಉಣ್ಣಿಕೃಷ್ಣನ್, ಶ್ರೀಮತಿ ರೇಶ್ಮಾ.ಕೆ.ವಿ, ಶ್ರೀಮತಿ ಪಲ್ಲವಿ, ಶ್ರೀ ನಾರಾಯಣ ರಾವ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿದ್ಯಾರ್ಥಿ ಸಂಪಾದಕ ಧ್ವಾನಿಷ್ ಸ್ವಾಗತಿಸಿ, ಐಟಿ ಕ್ಲಬ್ ಕಾರ್ಯದರ್ಶಿ ಕಾರ್ತಿಕ್. ಕೆ ವಂದಿಸಿದರು. ಅಕ್ಷತಾ.ಕೆ, ಪ್ರಣೀತಾ, ಶುಹೈಮಾ ಪ್ರಾರ್ಥನೆ ಹಾಡಿದರು. ಪ್ರಜ್ಞಾ.ಆರ್ ಕಾರ್ಯಕ್ರಮ ನಡೆಸಿಕೊಟ್ಟರು.

No comments:

Post a Comment