ಪೈವಳಿಕೆನಗರ
ಶಾಲೆಯಲ್ಲಿ ಮುಗಿಲುಮುಟ್ಟಿದ
ಹೊಸವರ್ಷ ಸಂಭ್ರಮಾಚರಣೆ
ಪೈವಳಿಕೆನಗರ,
ಜ.
1 : 2015 ಕಳೆದು
ನಾವಿಂದು 2016ಕ್ಕೆ
ಕಾಲಿರಿಸಿದ್ದೇವೆ.
ಹಳೆಯ
ಕಾಲದ ಕಹಿ ಅನುಭವಗಳನ್ನು ಮರೆತು
ಅದರಿಂದ ಪಾಠ ಕಲಿತು ಹೊಸ ವರ್ಷದಲ್ಲಿ
ಹೊಸ ಕನಸುಗಳೊಂದಿಗೆ ಹೊಸ ಗುರಿಯತ್ತ
ಸಾಗುವ ಪಯಣ ಆರಂಭಿಸುವ ನವಚೇತನ
ತರುವ ದಿನ.
ಡಿಸೆಂಬರ್
31ರ
ಮಧ್ಯ ರಾತ್ರಿ ಪ್ರಪಂಚದೆಲ್ಲೆಡೆ
ಹೊಸವರ್ಷವನ್ನು ವಿವಿಧ
ಸಂಭ್ರಮಾಚರಣೆಗಳೊಂದಿಗೆ
ಆಚರಿಸಲಾಯಿತು.
ಪೈವಳಿಕೆನಗರ
ಶಾಲೆಯಲ್ಲಿ ಆಚರಣೆಯ ಝಲಕ್ ಗೆ
ಕಳೆಯೇರಿತ್ತು.
8ಡಿ
ತರಗತಿಯಲ್ಲಿ ನಡೆದ ಕಾರ್ಯಕ್ರಮವನ್ನು
ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ
ಶ್ಯಾಮಲಾ ಉದ್ಘಾಟಿಸಿದರು.
ವಿದ್ಯಾರ್ಥಿ
ನಾಯಕರಾದ ಪ್ರಜ್ಞಾ,
ಮನೋಜ್,
ಕಾರ್ತಿಕ್
ಉಪಸ್ಥಿತರಿದ್ದರು.
8ಸಿ
ತರಗತಿಯಲ್ಲಿ ಪೂಜಾ ಕುಮಾರಿ,
ಕಾರ್ತಿಕ್,
ಅಕ್ಷಯ್
ನೇತೃತ್ವ ನೀಡಿದರು.
8ಎ
ತರಗತಿಯಲ್ಲಿ ಧ್ವಾನಿಷ್ ನೇತೃತ್ವ
ನೀಡಿದರು.
ಅಪರಾಹ್ನ
2.00
ಗಂಟೆಗೆ
ಐಟಿ ಲ್ಯಾಬ್ ನಲ್ಲಿ ನಡೆದ 9ಎ
ಮತ್ತು 9ಸಿ
ಜಂಟಿಯಾಗಿ ನಡೆಸಿದ ಕಾರ್ಯಕ್ರಮದಲ್ಲಿ
ತರಗತಿ ನಾಯಕರಾದ ನಫೀಸತ್ ಆಫ್ರೀದಾ,
ಜ್ಯೋತಿ,
ಮೊಹಮ್ಮದ್
ಶಾಹಿರ್,
ನವಾಝ್
ನೇತೃತ್ವ ನೀಡಿದರು.
ಪ್ರಣೀತಾ
ಮತ್ತು ಬಳಗದವರು ಸಮೂಹ ಗೀತೆ
ಹಾಡಿದರು.
ಎಲ್
ಪಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲಾ ಶುಭಹಾರೈಸಿದರು.
ಹಸೀನಾ
ಟೀಚರ್ ನೇತೃತ್ವ ನೀಡಿದರು.
ಹಿರಿಯ
ಶಿಕ್ಷಕರಾದ ಶ್ರೀ ರವೀಂದ್ರನಾಥ್
ಕೆ.ಆರ್,
ಶ್ರೀಮತಿ
ಶಶಿಕಲಾ ಮುಖ್ಯ ಅತಿಥಿಗಳಾಗಿ
ಭಾಗವಹಿಸಿದರು.
ಗೋಪಣ್ಣ
ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯರು
ಎಲ್ಲರಿಗೂ ಹೊಸವರ್ಷದ ಶುಭಹಾರೈಸಿದ್ದಾರೆ.
No comments:
Post a Comment