BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಸರಗೋಡು ಕಂದಾಯ ಜಿಲ್ಲಾ ವಿಜ್ಞಾನಮೇಳ ಸಮಾರೋಪ

ತ್ರಿಕರಿಪುರ, .19 : ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ತ್ರಿಕರಿಪುರದಲ್ಲಿ ನವೆಂಬರ್ 19 ಮತ್ತು 20ರಂದು ನಡೆಯಿತು. ಕಾಸರಗೋಡು ಶಿಕ್ಷಣ ಉಪನಿರ್ದೇಶಕರು ಉದ್ಘಾಟಿಸಿದರು. ಏಳು ಉಪಜಿಲ್ಲೆಗಳಿಂದಾಗಿ ಸುಮಾರು 1000ಕ್ಕಿಂತಲೂ ಹೆಚ್ಚು ಪ್ರತಿಭೆಗಳು ತಮ್ಮ ನೈಪುಣ್ಯ ಪ್ರದರ್ಶಿಸಿದರು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಿಂದ ಗಣಿತ ಹಾಗೂ ವೃತ್ತಿ ಪರಿಚಯ ಮೇಳಗಳಲ್ಲಾಗಿ ಸುಮಾರು 25ಕ್ಕಿಂತಲೂ ಅಧಿಕ ಪ್ರತಿಭೆಗಳು ಭಾಗವಹಿಸಲು ತೆರಳಿದ್ದರು. ಹೈಸ್ಕೂಲ್ ವಿಭಾಗದ ವೃತ್ತಿಪರಿಚಯ ಮೇಳದ ಎಂಬ್ರಾಯಿಡರಿ ಸ್ಪರ್ದೆಯಲ್ಲಿ 10ಸಿ ತರಗತಿಯ ಹನ್ನತ್ ಬೀಬಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

No comments:

Post a Comment