ಮಂಜೇಶ್ವರ
ಉಪಜಿಲ್ಲಾ ಶಾಲಾ ಕ್ರೀಡಾಕೂಟ
ಸಂಪನ್ನ
ಮಂಗಲ್ಪಾಡಿ,
ನ.
18 : ಮಂಜೇಶ್ವರ
ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾ
ಕೂಟ ನವೆಂಬರ್ 16ರಂದು
ಮಣ್ಣಂಗುಳಿ ಮೈದಾನದಲ್ಲಿ
ಆರಂಭವಾಯಿತು.
ಉಪಜಿಲ್ಲಾ
ವಿದ್ಯಾಧಿಕಾರಿ ಶ್ರೀ ನಂದಿಕೇಶನ್
ಧ್ವಜಾರೋಹಣಗೈದರು.
16 ಮತ್ತು
18ರಂದು
ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ
ವಿಭಾಗದ ಸ್ಪರ್ಧೆಗಳು,
17ರಂದು
ಯುಪಿ ಎಲ್ ಪಿ ವಿಭಾಗದ ಸ್ಪರ್ಧೆಗಳು
ನಡೆದವು.
ಉಪಜಿಲ್ಲೆಯ
80ಕ್ಕೂ
ಹೆಚ್ಚು ಶಾಲೆಗಳಿಂದ 1000ಕ್ಕಿಂತಲೂ
ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಿಂದ
ಸುಮಾರು 60ಕ್ಕಿಂತಲೂ
ಅಧಿಕ ಪ್ರತಿಭೆಗಳು ಪಾಲ್ಗೊಂಡಿದ್ದರು.
ಆದಿಲತ್
ರಸೀನಾ ಹೈ ಜಂಪ್ ಪ್ರಥಮ,
ಪ್ಲಸ್
ವನ್ ತರಗತಿಯ ಅಜಯ್ ಸೇತು1500
ಮೀಟರ್
ಪ್ರಥಮ,
5000ಮೀಟರ್
ಪ್ರಥಮ,
ಪ್ಲಸ್
ಟು ವಿಭಾಗದ ಸಯ್ಯದ್ ಮೊಹಮ್ಮದ್
ಅಬೂಬಕರ್ ಹೈಜಂಪ್ ಪ್ರಥಮ,
ರಿಲೇ
ದ್ವಿತೀಯ,
ಪ್ಲಸ್
ಟು ವಿಭಾಗದ ಪೂರ್ಣಿಮಾ 200ಮೀಟರ್
ಪ್ರಥಮ,
800ಮೀಟರ್
ದ್ವಿತೀಯ,
ಪ್ಲಸ್
ಟು ವಿಭಾಗದ ರಬಿಯತುಲ್ ಜುವೇರಿಯ
ಟ್ರಿಪಲ್ ಜಂಪ್,
ಹೈಜಂಪ್
ಪ್ರಥಮ,
ಕೀರ್ತಿಕಾ
ಹಾಮರ್ ಥ್ರೋ ದ್ವಿತೀಯ,
ಖದೀಜತ್
ಮಿಝೀನಾ ತೃತೀಯ,
ಜ್ಯೋತಿ
ಡಿಸ್ಕಸ್ ಥ್ರೋ ಪ್ರಥಮ,
ಖದೀಜತ್
ಮಿಝೀನಾ ದ್ವಿತೀಯಸ್ಥಾನಗಳಿಸಿದ್ದಾರೆ.
ಜಯಗಳಿಸಿದ
ಎಲ್ಲರಿಗೂ ಪೈನಗರ್ ವಿಷನ್
ಅಭಿನಂದನೆಗಳು.
No comments:
Post a Comment