ಪೈವಳಿಕೆನಗರ
ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್
ಚುನಾವಣೆ
ಪೈವಳಿಕೆನಗರ,
ಆ.13
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಶಾಲಾ ಪಾರ್ಲಿಮೆಂಟ್ ಚುನಾವಣೆ
ನಡೆಯಿತು.
ಪಿಟಿಎ
ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ರಾಜಕೀಯರಹಿತವಾದ ಮತದಾನಕ್ಕೆ
ಚಾಲನೆ ನೀಡಿದರು.
ಒಟ್ಟು
24
ತರಗತಿಗಳ
ಚುನಾವಣೆಗಾಗಿ 12
ಬೂತ್
ಗಳಲ್ಲಿ ಬೆಳಗ್ಗೆ 10
ಗಂಟೆಗೆ
ಮತದಾನ ಆರಂಭವಾಯಿತು.
ವಿವಿಧ
ಬೂತ್ ಗಳಲ್ಲಿ ಪ್ರಿಸೈಡಿಂಗ್
ಆಫೀಸರ್,
ಪೋಲಿಂಗ್
ಆಫೀಸರ್,
ಬೂತ್
ಲೆವೆಲ್ ಆಫೀಸರ್ ಗಳಾಗಿ ವಿದ್ಯಾರ್ಥಿಗಳು
ಕರ್ತವ್ಯ ನಿರ್ವಹಿಸಿದರು.
ಶಾಂತಿಯುತ
ಮತದಾನಕ್ಕಾಗಿ ವಿದ್ಯಾರ್ಥಿ
ಪೊಲೀಸರನ್ನು ನಿಯೋಜಿಸಲಾಗಿತ್ತು.
ಮತದಾನ
ಮುಗಿದ ನಂತರ ಮತ ಪೆಟ್ಟಿಗೆಗಳನ್ನು
ಮತ ಎಣಿಕಾ ಕೇಂದ್ರಕ್ಕೆ ಕೊಂಡೊಯ್ದು
ಅಭ್ಯರ್ಥಿಗಳ ಸಮ್ಮುಖದಲ್ಲೇ
ಎಣಿಕೆ ನಡೆಸಲಾಯಿತು.
ಅಪರಾಹ್ನ
ಸೇರಿದ ಶಾಲಾ ಸಂಸದೀಯ ಪಕ್ಷದ
ಸಭೆಯಲ್ಲಿ ಪ್ಲಸ್ ಟು ಹ್ಯುಮಾನಿಟೀಸ್
ನ ಆಯಿಷತ್ ಫಾರಿಶಾ ಶಾಲಾ ಪಾರ್ಲಿಮೆಂಟ್
ನಾಯಕಿಯಾಗಿ ಆಯ್ಕೆಯಾದರು.
8ಸಿ
ತರಗತಿಯ ಪೂಜಾಕುಮಾರಿ ಪಾರ್ಲಿಮೆಂಟ್
ಕಾರ್ಯದರ್ಶಿಯಾಗಿ,
ಪ್ಲಸ್
ಟು ಕಾಮರ್ಸ್ ನ ಅಬ್ದುಲ್ ರಹಿಮಾನ್
ಕ್ರೀಡಾ ಕಾರ್ಯದರ್ಶಿಯಾಗಿ,
8ಡಿ
ತರಗತಿಯ ಪ್ರಜ್ಞಾ.
ಆರ್.
ಸಾಂಸ್ಕೃತಿಕ
ಕಾರ್ಯದರ್ಶಿಯಾಗಿ,
ಪ್ಲಸ್
ಟು ವಿಜ್ಞಾನ ವಿಭಾಗದ ಆಹಮ್ಮದ್
ಅಜ್ಮಲ್ ರಸ್ತೆ ಸುರಕ್ಷಾ
ಜವಾಬ್ದಾರಿಯನ್ನು ವಹಿಸಿಕೊಂಡರು.
ಶಾಲಾ
ಪಾರ್ಲಿಮೆಂಟ್ ಚುನಾವಣಾ ಜವಾಬ್ದಾರಿಯ
ಶ್ರೀ ಅಬ್ದುಲ್ ಲತೀಫ್,
ಶ್ರೀ
ಉಣ್ಣಿಕೃಷ್ಣನ್ ,
ಶ್ರೀ
ರಂಜಿತ್ ಕನಾಯಿ ನೇತೃತ್ವ ನೀಡಿದರು.
No comments:
Post a Comment