ಶಾಲಾ
ಪ್ರಾಂಶುಪಾಲರಿಗೆ ಬೀಳ್ಕೊಡುಗೆ

ಪೈವಳಿಕೆನಗರ,
ಆ.12
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಿಂದ
ಇಡುಕ್ಕಿ ಜಿಲ್ಲೆಗೆ ವರ್ಗಾವಣೆಯಾಗುತ್ತಿರುವ
ಪ್ರಾಂಶುಪಾಲರಾದ ಶ್ರೀ ಜೋಸೆಫ್
ಜೋರ್ಜ್ ಅವರನ್ನು ಶಾಲಾ ಪಿಟಿಎ
ವತಿಯಿಂದ ಬೀಳ್ಕೊಡಲಾಯಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀನಿವಾಸ
ಭಟ್ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ಪಿಟಿಎ
ಅದ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಮುಖ್ಯ ಅತಿಥಿಯಾಗಿದ್ದರು.
ಮದರ್
ಪಿಟಿಎ ಅದ್ಯಕ್ಷೆ ಶ್ರೀಮತಿ
ರೋಹಿಣಿ,
ಕಾರ್ಯಕಾರಿ
ಸಮಿತಿ ಸದಸ್ಯರಾದ ಶ್ರೀ ಇಬ್ರಾಹಿಂ,
ಶ್ರೀ
ಕೃಷ್ಣ ಉಪಸ್ಥಿತರಿದ್ದರು.
ಎಸ್
ಆರ್ ಜಿ ಕನ್ವಿನರ್ ಶ್ರೀ ಕೃಷ್ಣಮೂರ್ತಿ
ಎಂ.ಎಸ್,
ಅಬ್ದುಲ್
ಕರೀಂ.ಪಿ.ಕೆ,
ರಂಜಿತ್
ಕನಾಯಿ ಮಾತನಾಡಿದರು.
ಪ್ರಭಾರ
ಪ್ರಾಂಶುಪಾಲರಾದ ಶ್ರೀ ವಿಶ್ವನಾಥ
ಕುಂಬಳೆ ಸ್ವಾಗತಿಸಿ,ಶ್ರೀ
ನಾರಾಯಣ ರಾವ್ ವಂದಿಸಿದರು.
ಸುಮಿತ್ರಾ
ಟೀಚರ್ ಪ್ರಾರ್ಥನೆ ಹಾಡಿದರು.
No comments:
Post a Comment