ಪೈವಳಿಕೆನಗರ
ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಪೈವಳಿಕೆನಗರ,ಆ.15
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
69ನೇ
ಸ್ವಾತಂತ್ರ್ಯೋತ್ಸವವನ್ನು
ವಿಜೃಂಭಣೆಯಿಂದ ಆಚರಿಸಲಾಯಿತು.
ಪೈವಳಿಕೆ
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ
ಅಬುಸಾಲಿಯವರು ರಾಷ್ಟ್ರಧ್ವಜವನ್ನು
ಹಾರಿಸಿ ಸ್ವಾತಂತ್ರ್ಯ ದಿನದ
ಸಂದೇಶ ನೀಡಿದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ಶ್ರೀನಿವಾಸ ಭಟ್,
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ,
ಪಿಟಿಎ
ಅದ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ,
ಪಿಟಿಎ
ಕಾರ್ಯಕಾರಿ ಸಮಿತಿಯ ಶ್ರೀ ಇಬ್ರಾಹೀಂ
ಪಾವಲುಕೋಡಿ,
ಶ್ರೀ
ಇಬ್ರಾಹೀಂ ಪೈವಳಿಕೆ,
ಹಿರಿಯ
ಶಿಕ್ಷಕರಾದ ಶ್ರೀ ರವೀಂದ್ರನಾಥ
ಕೆ.ಆರ್
ಉಪಸ್ಥಿತರಿದ್ದರು.
ಶಾಲಾ
ಪಿಟಿಎ ವತಿಯಿಂದ ಲಡ್ಡು ಹಾಗೂ
ಪೈವಳಿಕೆ ಗ್ರಾಮ ಪಂಚಾಯತ್ ವತಿಯಿಂದ
ಮಿಠಾಯಿ ವಿತರಿಸಲಾಯಿತು.
ನಂತರ
ಶಾಲಾ ಸಭಾಂಗಣದಲ್ಲಿ ನಡೆದ
ಸಾಂಸ್ಕೃತಿಕ ಕಾರ್ಯಕ್ರಮವನ್ನು
ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಉದ್ಘಾಟಿಸಿದರು.
ಮುಖ್ಯೋಪಾಧ್ಯಾಯರಾದ
ಶ್ರೀನಿವಾಸ ಭಟ್ ಅಧ್ಯಕ್ಷತೆ
ವಹಿಸಿದ್ದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ ಮುಖ್ಯ
ಅತಿಥಿಯಾಗಿದ್ದರು.
ಸ್ಟಾಫ್
ಸೆಕ್ರೆಟರಿ ಶ್ರೀಮತಿ ಶಶಿಕಲಾ
,
ಎಸ್.ಆರ್.ಜಿ
ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್,
ಸಮಾಜ
ವಿಜ್ಞಾನ ಕ್ಲಬ್ ನ ಶ್ರೀ ಅಬ್ದುಲ್
ಲತೀಫ್,
ಶಾಲಾ
ವಿದ್ಯಾರ್ಥಿ ನಾಯಕಿ ಆಯಿಶತ್
ಫಾರಿಶಾ ಶುಭಾಶಂಸನೆಗೈದರು.
ಯುಪಿ
ಶಿಕ್ಷಕರಾದ ಶ್ರೀ ಪ್ರಶಾಂತ್
ಕುಮಾರ್ ಅಮ್ಮೇರಿ ನಿರ್ದೇಶನದ
ಸರ್ವ ಧರ್ಮ ಸಮಾನತೆಯನ್ನು ಬಿಂಬಿಸುವ
ಮೂಕಾಭಿನಯ ಹಾಗೂ ಜವಾಹರಲಾಲ್
ನೆಹರು,
ಕಿತ್ತೂರ
ರಾಣಿ ಚೆನ್ನಮ್ಮ,
ಮಹಾತ್ಮಾ
ಗಾಂಧಿ,
ಜಾನ್ಸೀ
ರಾಣಿ ಲಕ್ಷ್ಮೀಬಾಯಿ,
ತಾಂತಿಯಾ
ಟೋಪಿ,
ಸುಭಾಷ್
ಚಂದ್ರ ಬೋಸ್,
ಬ್ರಿಟಿಷ್
ಸೈನಿಕರು,
ರೈತರು,
ಆದಿವಾಸಿಗಳನ್ನೊಳಗೊಂಡ
ಸ್ವಾತಂತ್ರ್ಯ ಹೋರಾಟದ ವಿದ್ಯಾರ್ಥಿಗಳ
ಕಿರುನಾಟಕ 'ಕ್ರಾಂತಿ
ಕಹಳೆ'
ಪ್ರದರ್ಶನಗೊಂಡಿತು.
ವಿದ್ಯಾರ್ಥಿಗಳಿಂದ
ಸ್ವಾತಂತ್ರ್ಯ ಸಂಗ್ರಾಮಕ್ಕೆ
ಸಂಬಂಧಿಸಿದ ದೇಶಭಕ್ತಿಗೀತೆ,
ಭಾಷಣ
ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು
ಜರಗಿದವು.
ಶಿಕ್ಷಕಿಯರಾದ
ಶ್ರೀಮತಿ ಸುಮಿತ್ರಾ,
ಕುಮಾರಿ
ವತ್ಸಲಾ,
ಕವಿತಾ,
ಗುಲಾಬಿ,
ಗೋಪಣ್ಣ
ಕುರುಡಪದವು,
ಬಾಲಕೃಷ್ಣ
ಕಾಯರ್ ಕಟ್ಟೆ,
ಅಬ್ದುಲ್
ಕರೀಂ.ಪಿ.ಕೆ,
ಪ್ರವೀಣ್
ಕನಿಯಾಲ,
ಸಹಕರಿಸಿದರು.
ಆಚರಣಾ
ಸಮಿತಿ ಸಂಚಾಲಕರಾದ ಶ್ರೀ ಶ್ರೀಧರ
ಭಟ್ ಬೀಡುಬೈಲು ಸ್ವಾಗತಿಸಿ ಹಯರ್
ಸೆಕೆಂಡರಿ ವಿಭಾಗದ ಶ್ರೀ ನಾರಾಯಣ
ರಾವ್ ವಂದಿಸಿದರು.
പൈവളികെനഗർ : പൈവളികെനഗർ ഗവണ്മെൻറ് ഹയർ സെക്കൻറരി സ്കൂളില് സ്വാംത്ര്യദിന വിപുലമായി ആഘോഷിച്ചു.
പൈവളികെ ഗ്രാമ പഞ്ചായത് അംഗമായ അബുസാലി പതാക ഉയർത്തി. പിടിഎ പ്രെസിഡൻറ് ലാറെൻസ്
ഡിസൂസ, ഹെഡ്മാസ്റർ ശ്രീനിവാസ ഭട്ട്,
പ്രിന്സിപ്പാള് വിശ്വനാഥ കുമ്പള , രവീന്ദ്രനാഥ ബല്ലാള് സന്നിഹിതരായിരുന്നു. എസ്.ആർ.ജി
കന്വിനർ കൃഷ്ണമൂർത്തി എം.എസ്, സ്ററാഫ് സെക്രെട്ടറി ശശികലാ, അബ്ദുല് ലത്തീഫ്
സംസാരിച്ചു. ശ്രീധര ഭട്ട് ബീഡുബൈല് സ്വാഗതംവും നാരായണ രാവു നന്ദി പരഞ്ഞു.
പ്രശാന്ത് കുമാർ അമ്മേരി സംവിധാനം ചെയ്ത വിദ്യാര്ഥികലുടെ
നാടകം ‘ക്രാന്തി കഹളെ’ പ്രദര്ശിക്കപ്പെട്ടു.
No comments:
Post a Comment