ಕಟ್ಟಡದ
ಶಿಲಾನ್ಯಾಸ

ಪೈವಳಿಕೆನಗರ,
ಆ.21
: ಕಾಸರಗೋಡು
ಡೆವಲಪ್ ಮೆಂಟ್ ಪ್ಯಾಕೇಜ್ ವತಿಯಿಂದ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಗೆ ಮಂಜೂರಾದ
ತರಗತಿ ಕಟ್ಟಡದ ಶಿಲಾನ್ಯಾಸವನ್ನು
ಮಂಜೇಶ್ವರ ಶಾಸಕರಾದ ಶ್ರೀ ಪಿ.ಬಿ
ಅಬ್ದುಲ್ ರಝಾಕ್ ನೆರವೇರಿಸಿದರು.
ಪೈವಳಿಕೆ
ಗ್ರಾಮ ಪಂಚಾಯತ್ ಅಧ್ಯಕ್ಷರಾದ
ಶ್ರೀ ಮಣಿಕಂಠ ರೈ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ
ಬ್ಲೋಕ್ ಪಂಚಾಯತ್ ಉಪಾಧ್ಯಾಕ್ಷರಾದ
ಶ್ರೀ ಹರ್ಷಾದ್ ವರ್ಕಾಡಿ,
ಪೈವಳಿಕೆ
ಗ್ರಾಮ ಪಂಚಾಯತ್ ವಿದ್ಯಾಭ್ಯಾಸ
ಸ್ಥಾಯಿ ಸಮಿತಿ ಅಧ್ಯಕ್ಷರಾದ
ಶ್ರೀ ದೇವು ಮೂಲ್ಯ,
ಪೈವಳಿಕೆ
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ
ಅಬುಸಾಲಿ,
ಶ್ರೀಮತಿ
ಕುಞ್ಞಾಲಿಮ್ಮ,
ಶ್ರೀಮತಿ
ಜಯಲಕ್ಷ್ಮೀ ಭಟ್,
ಇಂಜಿನಿಯರ್
ರವಿಕುಮಾರ್ ,
ಪಿಟಿಎ
ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ,
ಮದರ್
ಪಿಟಿಎ ಅಧ್ಯಕ್ಷೆ ಶ್ರೀಮತಿ ರೋಹಿಣಿ
ಶುಭಾಶಂಸನೆಗೈದರು.
ಎಕ್ಸಿಕ್ಯುಟಿವ್
ಎಂಜಿನಿಯರ್ ಶ್ರಿ ಪಿ.ಕೆ
ಬಾಬು ವರ್ಕ್ ರಿಪೋರ್ಟ್ ಮಂಡಿಸಿದರು.
ಮುಖ್ಯೋಪಾಧ್ಯಾಯರಾದ
ಶ್ರೀ ಶ್ರೀನಿವಾಸ ಭಟ್ ಸ್ವಾಗತಿಸಿ
ಪ್ರಾಂಶುಪಾಲರಾದ ಶ್ರೀ ವಿಶ್ವನಾಥ
ಕುಂಬಳೆ ವಂದಿಸಿದರು.
ಎಸ್
ಆರ್ ಜಿ ಕನ್ವಿನರ್ ಶ್ರೀ ಕೃಷ್ಣಮೂರ್ತಿ
ಎಂ.ಎಸ್.
ನಿರೂಪಿಸಿದರು.
No comments:
Post a Comment