BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ೈವಳಿಕೆನಗರದಲ್ಲಿ ವಿಜೃಂಭಣೆಯ ಓಣಂ


ಪೈವಳಿಕೆನಗರ, .21 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಆಚರಣೆ ವಿಜೃಂಭಣೆಯಿಂದ ನಡೆಯಿತು. ಎಲ್ ಪಿ, ಯುಪಿ , ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ ವಿಭಾಗಗಳಲ್ಲಾಗಿ ಹೂ ರಂಗೋಲಿ ಸ್ಪರ್ಧೆ ನಡೆಯಿತು. 8ಸಿ ತರಗತಿಯ ವಿದ್ಯಾರ್ಥಿ ಕೌಶಿಕ್ ಮಹಾಬಲಿಯ ವೇಷದಲ್ಲಿ ಚೆಂಡೆ, ತಾಳಗಳೊಂದಿಗೆ ಪೈವಳಿಕೆನಗರ ಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕ್, ಕೆಎಸ್ ಇ ಬಿ, ಗ್ರಾಮ ಕಛೇರಿ ಸಂದರ್ಶನದೊಂದಿಗೆ ಮೆರವಣಿಗೆ ನಡೆಸಲಾಯಿತು. 10ನೇ ತರಗತಿಯ ಗುರುಕಿರಣ್ ಮತ್ತು ಕಿರಣ್ ಚೆಂಡೆಯಲ್ಲಿ ಸಹಕರಿಸಿದರು. ಮಧ್ಯಾಹ್ನ ಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರೇ ತಯಾರಿಸಿದ ವಿವಿಧ ಓಣಂ ಭಕ್ಷ್ಯಗಳಿಂದೊಡಗೂಡಿದ ಔತಣವನ್ನು ಏರ್ಪಡಿಸಲಾಗಿತ್ತು. ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಣಿಕಂಠ ರೈ, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಬಾಯಿಕಟ್ಟೆ, ಮದರ್ ಪಿಟಿಎ ಅಧ್ಯಕ್ಷರಾದ ಶ್ರೀಮತಿ ರೋಹಿಣಿ, ಸದಸ್ಯರಾದ ಶ್ರೀ ಸುರೇಶ್ ಆಚಾರ್ಯ ಬಾಯಾರು, ಶ್ರೀ ಇಬ್ರಾಹೀಂ ಪೈವಳಿಕೆ, ಶ್ರೀ ಇಬ್ರಾಹೀಂ ಪಾವಲುಕೋಡಿ, ಶ್ರೀ ರಾಧಾಕೃಷ್ಣ ಮಾಸ್ಟರ್ ಕಾಯರ್ ಕಟ್ಟೆ, ಶ್ರೀಮತಿ ಸರಿತಾ ಮತ್ತಿತರರು ಉಪಸ್ಥಿತರಿದ್ದರು. ಹಬ್ಬದ ಸಲುವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ಸ್ಮರಣ ಶಕ್ತಿ ಸ್ಪರ್ಧೆಯಲ್ಲಿ 3ನೇ ತರಗತಿಯ ಶುಹೈಬ್ , ಯುಪಿ ಹುಡುಗರ ಸಂಗೀತ ಕುರ್ಚಿಯಲ್ಲಿ 7ನೇ ತರಗತಿಯ ಲಕ್ಷ್ಮೀಶ, ಹುಡುಗಿಯರ ವಿಭಾಗದಲ್ಲಿ 6ನೇ ತರಗತಿಯ ಅನುಜ್ಞಾ, ಹೈಸ್ಕೂಲ್ ವಿಭಾಗದ ಶೂಟೌಟ್ ನಲ್ಲಿ 10ನೇ ತರಗತಿಯ ನೌಶಾದ್, ಲಿಂಬೆ ಚಮಚ ಓಟದಲ್ಲಿ 8ಸಿ ತರಗತಿಯ ವೈಭವಿ, ಮದರಂಗಿಯಲ್ಲಿ ರಂಸೀನಾ ಮತ್ತು ಜ್ಯೋತಿ ಬಾಟ್ಲಿಗೆ ನೀರು ತುಂಬಿಸುವುದರಲ್ಲಿ ಪ್ಲಸ್ ಟು ಹ್ಯುಮಾನಿಟೀಸ್ ನ ದೀಕ್ಷಾ , ಕ್ಯಾಂಡಲ್ ಉರಿಸುವುದರಲ್ಲಿ ನಿಹಾಲಾ, ಗೋಣಿ ಚೀಲ ಓಟದಲ್ಲಿ ಜಾಫರ್, ಯುಪಿ ರಂಗೋಲಿಯಲ್ಲಿ 7ಬಿ, ಹೈಸ್ಕೂಲ್ ರಂಗೋಲಿಯಲ್ಲಿ 9, ಹಯರ್ ಸೆಕೆಂಡರಿ ರಂಗೋಲಿಯಲ್ಲಿ ಪ್ಲಸ್ ಟು ಸಯನ್ಸ್ , ಹುಡುಗರ ಹಗ್ಗ ಜಗ್ಗಾಟದಲ್ಲಿ ಪ್ಲಸ್ ಟು ಕಾಮರ್ಸ್, ಹುಡುಗಿಯರ ಹಗ್ಗ ಜಗ್ಗಾಟದಲ್ಲಿ ಪ್ಲಸ್ ಟು ಹ್ಯುಮಾನಿಟೀಸ್ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿದ್ದಾರೆ. ಓಣಂ ಆರಣಾ ಸಮಿತಿ ಸಂಚಾಲಕರಾದ ಶ್ರೀ ಉಣ್ಣಿಕೃಷ್ಣನ್ ನೇತೃತ್ವ ನೀಡಿದರು. ಎಸ್ ಆರ್ ಜಿ ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.


       പൈവളികെ നഗർ: പൈവളികെ നഗർ ഗവൺമെൻറ് ഹയർ സെക്കണ്ടറി സ്കൂളിൽ ഓണം വിപുലമായി ആഘോഷിച്ചു. എട്ടാം ക്ലാസ് വിദ്യാർത്ഥിയായ കൗശിക്ക് മാവേലിയായി പൈവളികെ ടൗണിൽ സന്ദർശനം നടത്തി. സ്കൂൾ കുട്ടികൾ പുലിയുടേയും, കരടിടേയും വേഷമിട്ട് ഗുരുകിരണിന്റെ നേതൃത്വത്തിലുള്ള ചെണ്ടമേളത്തിനനുസരിച്ച് ചുവടുകൾ വെച്ചത് ഘോഷയാത്രക്ക് പൊലിമ കൂട്ടി. ഉച്ചക്ക് അധ്യാപക നായ ഉണ്ണിക്കൃഷ്ണൻ മാസ്റ്റർ ഒരുക്കിയ വിഭവസമൃദ്ധമായ ഓണസദ്യ ഉണ്ടായിരുന്നു. തുടർന്ന് കുട്ടികൾക്കായി, പൂക്കള മത്സരം, ഓർമ്മ പരിശോധന, മ്യൂസിക്കൽ ചെയർ, മിഠായി പെറുക്കൽ, സ്പൂൺ റേസ്, ചാക്കിലോട്ടം, വടംവലി, മൈലാഞ്ചിയിടൽ മത്സരം തുടങ്ങിയവ ഉണ്ടായിരുന്നു. ഗ്രാമപഞ്ചായത്ത് പ്രസിഡൻറ് ശ്രീ. മണികണ്ഠ റായ്, പി.ടി.എ. പ്രസിഡൻറ് ശ്രീ.ലോറൻ ഡിസൂസ, ഹെഡ്മാസ്റ്റർ ശ്രീനിവാസ ഭട്ട്, പ്രിൻസിപ്പൽ ഇൻ ചാർജ്ജ് ശ്രീ. വിശ്വനാഥ കുമ്പള തുടങ്ങിയവർ സന്നിഹിതരായിരുന്നു. എസ്.ആർ.ജി. കൺവീനർ ശ്രീ. എം.എസ്. കൃഷ്ണമൂർത്തി, ജിൽജോ തുടങ്ങിയവർ പരിപാടികളുടെ അവതാരകരായീ.

No comments:

Post a Comment