ಅಕ್ಷಯ್
ನಿಂದ ಶಾಲಾ ಪ್ರಯೋಗಾಲಯಕ್ಕೆ
ಪೆರಿಸ್ಕೋಪ್
ಪೈವಳಿಕೆನಗರ,
ಜೂ
31
: ಸರಕಾರಿ
ಶಾಲೆಯಲ್ಲಿ ಸಿಗುವ ಸವಲತ್ತುಗಳನ್ನು
ಉಪಯೋಗಿಸಿಕೊಂಡು ಬೆಳೆಯುವುದು
ವಿದ್ಯಾರ್ಥಿಗಳು ಮಾಡುವ ಉತ್ತಮ
ಕೆಲಸ.
ಸರಕಾರದ್ದು
ಎಂಬ ಕಾರಣವನ್ನಿಟ್ಟುಕೊಂಡು
ಉಪಕರಣಗಳನ್ನು ಹಾಳುಗೆಡಹುವ
ಕಿಡಿಗೇಡಿಗಳೇನೂ ಕಡಿಮೆಯಲ್ಲಿ.
ಆದರೆ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯ 8ಸಿ
ತರಗತಿಯ ವಿದ್ಯಾರ್ಥಿ ಅಕ್ಷಯ್
ಒಂದು ಕ್ರಿಯಾತ್ಮಕ ಕೆಲಸದಿಂದ
ಶಾಲೆಯ ಇತರ ವಿದ್ಯಾರ್ಥಿಗಳಿಗೆ
ಮಾದರಿಯಾಗಿದ್ದಾನೆ.
ವಿಜ್ಞಾನದ
ಬೆಳಕಿನ ಪ್ರತಿಫಲನ ಎಂಬ ಪಾಠಭಾಗದಲ್ಲಿ
ಬರುವ ಪೆರಿಸ್ಕೋಪ್ ತಾನೇ ಸ್ವತಃ
ತಯಾರಿಸಿದ್ದಾನೆ.
ಉಪಯೋಗ
ಶೂನ್ಯ ರಟ್ಟುಗಳು,
ಸೆಲ್ಲೋಟೇಪ್,
ಫಾಸ್ಟ್
ಗಮ್,
ಉಪಯೋಗ
ಶೂನ್ಯ ದರ್ಪಣಗಳು ಮುಂತಾದುವುಗಳನ್ನು
ಸಂಗ್ರಹಿಸಿ ಯೋಗ್ಯ ರೀತಿಯಲ್ಲಿ
ಜೋಡಿಸಿ ಪೆರಿಸ್ಕೋಪ್ ತಯಾರಿಸಿದ್ದಾನೆ.
ತಯಾರಿಸಿದ
ಪೆರಿಸ್ಕೋಪನ್ನು ಶಾಲೆಯ ಪ್ರಯೋಗಾಲಯಕ್ಕೆ
ದೇಣಿಗೆಯಾಗಿ ಪ್ರಯೋಗಶಾಲೆಯ
ಜವಾಬ್ದಾರಿಯ ಕೃಷ್ಣಮೂರ್ತಿ ಸರ್
ಅವರಲ್ಲಿ ಒಪ್ಪಿಸಿದ್ದಾನೆ.ತನ್ನ
ಕಾರ್ಯಕ್ಕೆ ನೆರವಾದವರು ತನ್ನ
ತಂದೆ,
ತಾಯಿ
ಹಾಗೂ ಗೆಳೆಯರು ಎಂದು ಹೆಮ್ಮೆಯಲ್ಲಿ
ಹೇಳುವ ಅಕ್ಷಯ್ ಪಾಠದಲ್ಲೂ ಮುಂದು.
ಗುರುಹಿರಿಯರಲ್ಲಿ
ಗೌರವ,
ಗೆಳೆಯರಲ್ಲಿ
ಸ್ನೇಹದಿಂದಿರುವ ಅಕ್ಷಯ್ ಸುಂದರವಾದ
ಕಲೈಡೋ ಸ್ಕೋಪ್ ತಯಾರಿಸುವ ಹಂಬಲವಿದೆ
ಎಂದು ಪೈನಗರ್ ವಿಷನ್ ಗೆ ನೀಡಿದ
ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾನೆ.
ಉದಯೋನ್ಮುಖ
ವಿಜ್ಞಾನ ಪ್ರತಿಭೆ ಅಕ್ಷಯ್ ನಿಗೆ
ಪೈನಗರ್ ವಿಷನ್ ನ ತುಂಬು ಹೃದಯದ
ಧನ್ಯವಾದಗಳು.
No comments:
Post a Comment