BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಶಾಲಾ ವಿದ್ಯಾರ್ಥಿಗಳಿಗೆ ಮನೆಯ ವಾತಾವರಣದ ಬಿಸಿಯೂಟ


ಪೈವಳಿಕೆನಗರ, ಜೂ30 : ಶಾಲಾ ವಿದ್ಯಾರ್ಥಿಗಳನ್ನು ನಾಳಿನ ದೇಶ ಕಟ್ಟುವ ಕೆಲಸಕ್ಕೆ ತಯಾರಿಗೊಳಿಸಲು ವಿವಿಧ ಪೌಷ್ಟಿಕಾಂಶ ಭರಿತವಾದ ಆಹಾರ ಅತ್ಯಗತ್ಯ. ಇದಕ್ಕಾಗಿಯೇ ಸರಕಾರ ವಿವಿಧ ಯೋಜನೆಗಳನ್ನು ಕೈಗೊಂಡಿದೆ. ಬಿಸಿಯೂಟ, ಹಾಲು, ಮೊಟ್ಟೆ ಮುಂತಾದುವುಗಳು ಇದರ ಫಲಶೃುತಿಗಳು. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೇ ತಾಜಾ ಮನೆಯ ಊಟದ ಸವಿಯನ್ನು ನಮಗೆ ತರುವುದು ಮಧ್ಯಹ್ನದ ಬಿಸಿಯೂಟ. ಪೈವಳಿಕೆನಗರ ಶಾಲೆಯ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. ಸಣ್ಣ ತರಗತಿಯ ವಿದ್ಯಾರ್ಥಿಗಳಿಗಂತೂ ತಮ್ಮ ಓರಗೆಯವರೊಂದಿಗೆ ಕುಳಿತು ಒಟ್ಟಿಗೆ ಊಟ ಮಾಡುವುದೇ ಖುಶಿ. ಈ ಕೆಲಸದಲ್ಲಿ ತರಗತಿ ಅದ್ಯಾಪಕರೊಂದಿಗೆ ಸಹಕರಿಸುವವರು ಹಿರಿಯ ವಿದ್ಯಾರ್ಥಿಗಳು. ತಮ್ಮ ತರಗತಿಯ ಜಗಲಿಯಲ್ಲಿ ಸಾಲಾಗಿ ಕುಳಿತು ಶಿಕ್ಷಕರ ಕೈಯಿಂದ ಬೇಕಾದ ಭೋಜ್ಯಗಳನ್ನು ಬೇಕಾದಾಗ ಬಡಿಸಿಕೊಂಡು ಸೇವಿಸುವುದೆಂದರೆ ಇದಕ್ಕಿಂತಲೂ ಖುಶಿಯ ವಿಷಯ ಇನ್ನೊಂದಿದೆಯೇ ಹೇಳಿ. ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಮನೆಯ ವಾತಾವರಣ ಸೃಷ್ಟಿಯಾಗುತ್ತದೆ. ಇತರ ವಿದ್ಯಾರ್ಥಿಗಳು ಮನೆಯ ಸದಸ್ಯರು ಎಂಬ ಬಾವನೆ ಬರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಅಂಜಿಕೆಯಿಲ್ಲದೆ ಊಟಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನವನ್ನು ಇಲ್ಲಿಂದ ಕಲಿಯಬಹುದಾಗಿದೆ. ಸಂತಸದಿಂದ ಶಾಲೆಗೆ ಬರಲು ಸಾಧ್ಯವಾಗುತ್ತದೆ. ಮೇಲು ಕೀಳೆಂಬ ಬಾವನೆ ತೊಡೆದು ಹಾಕಲು ಕಾರಣವಾಗುತ್ತದೆ ಎಂದು ಹಸೀನಾ ಟೀಚರ್ ಹಾಗೂ ಗುಲಾಬಿ ಟೀಚರ್ ಅಭಿಪ್ರಾಯ. ಮದ್ಯಾಹ್ನ ಬಿಸಿಯೂಟ ಯೋಜನೆಯನ್ನು ಶಿಸ್ತುಬದ್ಧವಾಗಿ ಅನುಸರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಧನ್ಯವಾದಗಳು.

No comments:

Post a Comment