BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರದಲ್ಲಿ ಮೆಟ್ರಿಕ್ ಮೇಳ



ಪೈವಳಿಕೆನಗರ, ಫೆ.5 : ವಿದ್ಯಾರ್ಥಿಗಳಲ್ಲಿ ಗಣಿತದ ಕಲ್ಪನೆ, ನಿಖರತೆ ಮತ್ತು ಮತ್ತು ಆಸಕ್ತಿಯನ್ನು ಹೆಚ್ಚಿಸುವ ಸರ್ವ ಶಿಕ್ಷಾ ಅಭಿಯಾನ ಪ್ರಾಯೋಜಿತ ಮೆಟ್ರಿಕ್ ಮೇಳ ಮತ್ತು ಉತ್ಪನ್ನದ ಪ್ರದರ್ಶನ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಗಣಿತ ಕ್ಲಬ್ ಸಂಚಾಲಕರಾದ ಕುಮಾರಿ ವತ್ಸಲ, ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀಧರ ಭಟ್ ಹಾಗೂ ಹಸೀನಾ ಟೀಚರ್, ಶಾಲಾ ಸಹಕಾರಿ ಸಂಘದ ಸಂಚಾಲಕರಾದ ಶ್ರೀ ಗೋಪಣ್ಣ ಕುರುಡಪದವು, ಶಾಲಾ ಬಿಸಿಯೂಟ ವ್ಯವಸ್ಥಾಪಕರಾದ ಶ್ರೀ ತಡತ್ತಿಲ್ ಸುನೀಶ್ ಕುಮಾರ್ ಶುಭಾಶಂಸನೆ ಮಾಡಿದರು. ಬಾಲಕೃಷ್ಣ ಮಾಸ್ಟರ್ ಕಾಯರ್ ಕಟ್ಟೆ ಕಾರ್ಯಕ್ರಮ ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಉತ್ಪನ್ನದ ಪ್ರದರ್ಶನ ನಡೆಯಿತು.

No comments:

Post a Comment