BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಪೈವಳಿಕೆ ಪಂಚಾಯತ್ ಮಟ್ಟದ ಬಾಲ ವಿಜ್ಞಾನ ಕಾಂಗ್ರೆಸ್

ಪೈವಳಿಕೆನಗರ, ಫೆ.8: ಕಾಸರಗೋಡು ಸರ್ವ ಶಿಕ್ಷಾ ಅಭಿಯಾನದ ಪ್ರಾಯೋಜಕತ್ವದಲ್ಲಿ, ಬಿ .ಆರ್.ಸಿ. ಮಂಜೇಶ್ವರದ ನೇತೃತ್ವದಲ್ಲಿ, ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸಮಿತಿಯ ಸಹಯೋಗದೊಂದಿಗೆ ಪೈವಳಿಕೆ ಪಂಚಾಯತ್ ಮಟ್ಟದ ವಿಜ್ಞಾನ ಸೆಮಿನಾರ್ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಫೆಬ್ರವರಿ 10ರಂದು ನಡೆಯಲಿದೆ. ಪೂರ್ವಾಹ್ನ 10 ಗಂಟೆಗೆ ನೋಂದಾವಣೆ, ನಂತರ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪಂಚಾಯತ್ ಅದ್ಯಕ್ಷರಾದ ಶ್ರೀ ಮಣಿಕಂಠ ರೈ, ವಿದ್ಯಾಬ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ದೇವು ಮೂಲ್ಯ, ವಾರ್ಡ್ ಸದಸ್ಯರಾದ ಶ್ರೀ ಅಬುಸಾಲಿ, ಸರ್ವ ಶಿಕ್ಷಾ ಅಭಿಯಾನ ಅಧಿಕೃತರು, ಪಿಟಿಎ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯುಪಿ ವಿಭಾಗದ ಸೆಮಿನಾರ್ ನಲ್ಲಿ ಪಂಚಾಯತ್ ಮಟ್ಟದ 10 ಕ್ಕಿಂತ ಹೆಚ್ಚು ಶಾಲೆಗಳಿಂದ 75ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. 5,6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸೆಮಿನಾರ್ ಮಂಡನೆ ನಡೆಯುವುದಾಗಿದ್ದು ಪ್ರತಿ ತರಗತಿಯಿಂದ 4 ವಿದ್ಯಾರ್ಥಿಗಳ ತಂಡವು ಭಾಗವಹಿಸಬಹುದಾಗಿದೆ. ಶಾಲಾ ಮಟ್ಟದಿಂದ ರಾಜ್ಯಮಟ್ಟದ ತನಕ ಈ ಸ್ಪರ್ಧೆಗಳು ನಡೆಯುವವು. ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜಯಿಗಳಿಗೆ ಬಹುಮಾನ ವಿತರಿಸಲಾಗುವುದು. ಸ್ಪರ್ಧೆಯ ಫಲಿತಾಂಶವು ಶಾಲಾ ಬ್ಲೋಗ್ ನಲ್ಲಿ ಲಭ್ಯವಿರುವುದು. ಪೈವಳಿಕೆ ಪಂಚಾಯತ್ ಮಟ್ಟದ ಸೆಮಿನಾರನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಕಾರ್ಯಕ್ರಮ ಸಮಿತಿ ಸಂಚಾಲಕರಾದ ಶ್ರೀಧರ ಭಟ್ ವಿನಂತಿಸಿದ್ದಾರೆ.(ಪೈನಗರ್ ವಿಷನ್ ವಿಜ್ಞಾನ ಪ್ರತಿನಿಧಿ ವರದಿ)

2 comments:

  1. Dear sir,

    please make the blog in only english language or either add malayalam also. because our school is not only kannada . also we have malayalam .
    and also as a old student of GHSS Paivalike nagar school i want to advise to put old photo graphs. of students and all the school functions photos ( onam, sports,youth festival etc...) also we have many old photos in our school.. we like to see our school with very good blog.




    wish you all the success in future. ( GHSS PAIVALIKE NAGAR)


    thanks and regards

    khadeejath thasniya (student of GHSS PAIVALIKE NAGAR )

    ReplyDelete
    Replies
    1. Thanks for your kind suggestion. We would like to make necessary arrangements to add Malayalam articles and photo albums soon. Thanking you.

      Blog team. GHSS Paivalikenagar

      Delete