BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಆರೋಗ್ಯ ಮಾಹಿತಿ ಶಿಬಿರ

ಪೈವಳಿಕೆನಗರ, .3 : ದೈಹಿಕ ಆರೋಗ್ಯ ಕೆಟ್ಟರೆ ನಾವು ವೈದ್ಯರನ್ನು ಕಾಣುತ್ತೇವೆ. ಆದರೆ ಮಾನಸಿಕ ಸ್ವಾಸ್ಥ್ಯ ಕೆಟ್ಟರೆ ಹುಚ್ಚಾಸ್ಪತ್ರೆಗೆ ಹೋಗುವುದು ಎಂಬ ತಪ್ಪು ಮನೋಭಾವ ನಮ್ಮಲ್ಲಿದೆ. ಇದನ್ನು ಹೋಗಲಾಡಿಸಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಮಾನವನ ಸ್ವಸ್ಥ ಜೀವನದ ಮೇಲೆ ಪ್ರಭಾವ ಬೀರುವುದು. ಮಾನಸಿಕ ಆರೋಗ್ಯ ಸಾಮಾಜಿಕ ಸಾಮರಸ್ಯದ ಮೂಲಮಂತ್ರ ಎಂದು ಮಂಗಳೂರಿನ ಪ್ರತಿಷ್ಟಿತ ಯೆನೆಪೋಯಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಅನಿಲ್ ಕಾಕುಂಜೆ ಅಭಿಪ್ರಾಯಪಟ್ಟರು. ಅವರು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಸೌಹಾರ್ದ ಕ್ಲಬ್ ನ ಆಶ್ರಯದಲ್ಲಿ ನಡೆದ ಹದಿಹರೆಯದ ಮಕ್ಕಳ ಮಾನಸಿಕ ಆರೋಗ್ಯ ಎಂಬ ವಿಷಯದಲ್ಲಿ ಜಾಗೃತಿ ತರಗತಿ ನೀಡುತ್ತಿದ್ದರು. ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ಶ್ರೀ ಕೆ. ಜೋಸೆಫ್ ಜೋರ್ಜ್ ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ವಿಶ್ವನಾಥ ಕುಂಬಳೆ, ಶ್ರೀ ರತ್ನಕುಮಾರ್ ಶುಭಾಶಂಸನೆ ಮಾಡಿದರು. ಬಹುಭಾಷೆಗಳಲ್ಲಿ ಮಾತನಾಡಬಲ್ಲ ಕಾಕುಂಜೆ ಅವರು ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಮಾನಸಿಕ ಆರೋಗ್ಯದ ಹಿರಿಮೆ, ಗರಿಮೆ, ಜೀವನ ಕಲೆ, ಪರೀಕ್ಷಾ ಭಯ, ವ್ಯಕ್ತಿತ್ವದ ಬಗ್ಗೆ ಸರಿಯಾದ ರಹದಾರಿಯನ್ನು ತೋರಿಸಿಕೊಟ್ಟರು. ಶಾಲಾ ಸೌಹಾರ್ದ ಕ್ಲಬ್ ಸಂಚಾಲಕರಾದ ಶ್ರೀ ನಾರಾಯಣ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಕ್ಲಬ್ ಪ್ರತಿನಿಧಿ ಪ್ಲಸ್ ವನ್ ವಿಜ್ಞಾನ ವಿದ್ಯಾರ್ಥಿ ಅಬ್ದುಲ್ ರಂಶೀದ್ ವಂದಿಸಿದರು.

No comments:

Post a Comment