BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ರಾಜ್ಯ ಮಟ್ಟದ ಪ್ರತಿಭೆಗೆ ಅಭಿನಂದನೆ
ಪೈವಳಿಕೆನಗರ : ಕಲ್ಲಿಕೋಟೆಯಲ್ಲಿ ನಡೆದ 55ನೇ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಹಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಗಳಿಸಿದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿಜ್ಞಾನ ವಿದ್ಯಾರ್ಥಿನಿ ಶ್ರದ್ಧಾ ಎನ್. ಅವರನ್ನು ಶಾಲಾ ಅಸೆಂಬ್ಲಿಯಲ್ಲಿ ಅಭಿನಂದಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ, ಸಾಹಿತಿ ಪ್ರೊ. ಪಿ.ಎನ್ ಮೂಡಿತ್ತಾಯ ಅವರು ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಗದು ಬಹುಮಾನ , ಕಲೋತ್ಸವ ಸ್ಮರಣಿಕೆ ವಿತರಿಸಲಾಯಿತು. ಶಾಲಾ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಭಟ್, ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಉಪ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕಂಚಿಕಟ್ಟೆ, ಹಿರಿಯ ಶಿಕ್ಷಕರಾದ ನಾರಾಯಣ ರಾವ್ ಉಪಸ್ಥಿತರಿದ್ದರು. ಗೌರವ ಸ್ವೀಕರಿಸಿದ ನಂತರ ಶ್ರದ್ಧಾ ಅವರು ರಾಜ್ಯ ಕಲೋತ್ಸವದಲ್ಲಿ ಪ್ರಥಮ ಸ್ಥಾನ ದೊರಕಿದ ಹಾಡನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

No comments:

Post a Comment