*ಮಂಜೇಶ್ವರ
ಉಪಜಿಲ್ಲಾ ಕಲಾಮೇಳಕ್ಕೆ ಸಂಭ್ರಮದ
ಕ್ಷಣಗಣನೆ
ಉಪ್ಪಳ,
ಅ8
: ಮಂಜೇಶ್ವರ
ಉಪಜಿಲ್ಲಾ ಶಾಲಾ ಕಲೋತ್ಸವವನ್ನು
ನವಂಬರ್ ಕೊನೆಯ ವಾರ ಹಾಗೂ ಡಿಸೆಂಬರ್
ಮೊದಲ ವಾರದಲ್ಲಿ ಉಪ್ಪಳ ಎ.ಜೆ.ಐ.
ಆಂಗ್ಲಮಾಧ್ಯಮ
ಶಾಲೆ ಹಾಗೂ ಐಲ ಶಾರದಾ ಬೋವಿಸ್
ಎ.ಯು.ಪಿ.
ಶಾಲೆಯಲ್ಲಿ
ನಡೆಸಲು ತೀರ್ಮಾನಿಸಲಾಗಿದೆ.
ಕನ್ನಡ
ವಿಭಾಗದ ಸ್ಪರ್ಧೆಗಳಿಗಾಗಿ ವಿಶೇಷ
ಚಾಂಪ್ಯನ್ ಶಿಪ್ ಏರ್ಪಡಿಸಿ ಗಡಿನಾಡ
ಕನ್ನಡ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ
ನ್ಯಾಯ ಒದಗಿಸುವ ಕುರಿತು
ಚರ್ಚಿಸಲಾಯಿತು.
ಶಾಲಾ
ಕಲೋತ್ಸವ 2014/15ರ
ಜಾಲತಾಣ ನವೆಂಬರ್ ತಿಂಗಳಲ್ಲಿ
ಲೋಕಾರ್ಪಣೆಯಾಗಲಿದೆಯೆಂದು
ಅಂದಾಜಿಸಲಾಗಿದೆ.
ಈ ಬಾರಿಯ
ಕಲೋತ್ಸವವನ್ನು ಯಶಸ್ವಿಯಾಗಿ
ನಡೆಸಲು ಎಲ್ಲರ ಸಹಕಾರವನ್ನು
ವಿನಂತಿಸಲಾಗಿದೆ.
ಈ ಸಂಬಂಧ
ಎ.ಜೆ.ಐ
ಶಾಲೆಯಲ್ಲಿ ಅಕ್ಟೋಬರ್ 8ರಂದು
ಜರಗಿದ ಕಾರ್ಯಕ್ರಮ ಸಮಿತಿ ಸಭೆಯಲ್ಲಿ
ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮ
ಸಮಿತಿ ಸಂಚಾಲಕರಾಗಿ ಎ.ಜೆ.ಐ.
ಶಾಲೆಯ
ಬೆನ್ನಿ ತೊಂಪುನ್ನಯಿಲ್ ಸರ್
ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ
ಜನಪ್ರತಿನಿಧಿಗಳು,
ವಿದ್ಯಾಭ್ಯಾಸ
ಇಲಾಖೆ ಅಧಿಕಾರಿಗಳು,
ವಿವಿಧ
ಶಾಲೆಗಳ ಪ್ರತಿನಿಧಿಗಳು,
ಸಂಘಟನಾ
ಪ್ರತಿನಿಧಿಗಳು,
ಪಿಟಿಎ
ಪದಾಧಿಕಾರಿಗಳು ಭಾಗವಹಿಸಿದ್ದರು.(ಪೈನಗರ್
ವಿಷನ್ ಕಲೋತ್ಸವ ವಿಭಾಗ ವರದಿ)
*ಮೀಯಪದವಿನ
ಕ್ರೀಡಾಂಗಣ ಕ್ರೀಡೋತ್ಸವಕ್ಕೆ
ಸಜ್ಜು
ಮೀಯಪದವು
ಅ.7
:
ಈ
ಶೈಕ್ಷಣಿಕ ವರ್ಷದ ಮಂಜೇಶ್ವರ
ಉಪಜಿಲ್ಲಾ ಶಾಲಾ ಕ್ರೀಡೋತ್ಸವ
ನವೆಂಬರ್ 5,6
ಮತ್ತು
7ರಂದು
ಮೀಯಪದವು ವಿದ್ಯಾವರ್ಧಕ ಹಯರ್
ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಈ
ಸಂಬಂಧವಾಗಿ ಅಕ್ಟೋಬರ್ 7ರಂದು
ಮೀಯಪದವು ಹಯರ್ ಸೆಕೆಂಡರಿ ಶಾಲೆಯಲ್ಲಿ
ಸೇರಿದ ಸಮಿತಿ ಸಭೆಯಲ್ಲಿ
ಪದಾಧಿಕಾರಿಗಳನ್ನು ತೀರ್ಮಾನಿಸಲಾಯಿತು.
ಕ್ರೀಡೋತ್ಸವದ
ಜಾಲತಾಣ
ಈಗಾಗಲೇ ಲೋಕಾರ್ಪಣೆಯಾಗಿದ್ದು
ನೋಂದಾವಣೆ
ಮಾಡಬೇಕಾದ ಕೊನೆ
ದಿನಾಂಕ ಅಕ್ಟೋಬರ್
30 ಅಪರಾಹ್ನ
5 ಗಂಟೆ
ಆಗಿರುವುದು.
ಎಲ್ಲಾ
ಶಾಲೆಗಳ ಅಧಿಕೃತರು ಕೊನೆಯ ದಿನಕ್ಕಾಗಿ
ಕಾಯದೆ ಬೇಗನೆ ನೋಂದಾಯಿಸಿ ಕೊನೆ
ಕ್ಷಣದ ಸರ್ವರ್ ನೂಕುನುಗ್ಗಲು
ತಪ್ಪಿಸಬೇಕೆಂದು ವಿನಂತಿಸಲಾಗಿದೆ.
ಈ
ಬಾರಿಯ ಉಪಜಿಲ್ಲಾ ಕ್ರೀಡೋತ್ಸವವನ್ನು
ಸಂಪನ್ನಗೊಳಿಸಲು ಎಲ್ಲರೂ
ಸಹಕರಿಸಬೇಕೆಂದು ಸಮಿತಿ ಪದಾಧಿಕಾರಿಗಳು
ವಿನಂತಿಸಿದ್ದಾರೆ.(ಪೈನಗರ್
ವಿಷನ್ ಕ್ರೀಡಾಲೋಕ ವರದಿ)
*ಸಫ್
ವಾನ್ ಜಿಲ್ಲಾ ಕ್ರಿಕೆಟ್ ತಂಡದ
ಸದಸ್ಯ
ಪೈವಳಿಕೆನಗರ
ಅ.7
: ಕಣ್ಣೂರಿನಲ್ಲಿ
ನಡೆಯುವ ಉತ್ತರ ವಲಯ ಶಾಲಾ ಗೇಮ್ಸ್
ನ ಸೀನಿಯರ್ ಕ್ರಿಕೆಟ್ ಪಂದ್ಯಾಟದಲ್ಲಿ
ಕಾಸರಗೋಡು ಕಂದಾಯ ಜಿಲ್ಲೆಯನ್ನು
ಪ್ರತಿನಿಧಿಸುವ ತಂಡಕ್ಕೆ ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಪ್ಲಸ್ ವನ್ ವಿಜ್ಞಾನ ವಿಭಾಗದ
ವಿದ್ಯಾರ್ಥಿ ಸಫ್ ವಾನ್
ಆಯ್ಕೆಯಾಗಿದ್ದಾನೆ.
ಇತ್ತೀಚೆಗೆ
ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ
ಕ್ರೀಕೆಟ್ ಪಂದ್ಯಾಟದಲ್ಲಿ ಈತ
ಉತ್ತಮ ಸಾಧನೆಗೈದಿದ್ದನು.ಈತನ
ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ
ಸಂಘ ಅಭಿನಂದನೆ ಸಲ್ಲಿಸಿದೆ.
ಪೈನಗರ್
ವಿಷನ್ ನ ವಿಶೇಷ ಅಭಿನಂದನೆಗಳು.
*ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳಕ್ಕೆ ಕ್ಷಣಗಣನೆ
ಕಳಿಯೂರು
ಅ 4 :
ಮಂಜೇಶ್ವರ
ಉಪಜಿಲ್ಲಾ ಮಟ್ಟದ ವಿಜ್ಞಾನ
ಮೇಳಕ್ಕೆ ಕಳಿಯೂರು ಸಂತ
ಜೋಸೆಫ್ ಎ.
ಯು.
ಪಿ.
ಶಾಲೆಯಲ್ಲಿ
ವೇದಿಕೆ ಸಿದ್ಧವಾಗಿದೆ.
ಸ್ಪರ್ಧೆ
ಪ್ರದರ್ಶನಗಳ ನೋಂದಾವಣೆಗಾಗಿ
ಅಧಿಕೃತ ಜಾಲತಾಣ ಲೋಕಾರ್ಪಣೆಯಾಗಿದೆ.
ಅಕ್ಟೋಬರ್
10 ಶುಕ್ರವಾರ
ಸಂಜೆ 5
ಗಂಟೆಗೆ
ಜಾಲತಾಣ ಮುಚ್ಚಲಿದೆ.
ಎಲ್ಲಾ
ಸಂಬಂಧಪಟ್ಟ ಶಾಲಾ ಅಧಿಕೃತರು
ಸರ್ವರ್ ಜಾಮ್ ತಪ್ಪಿಸಲು ಸಹಕರಿಸಬೇಕಾಗಿ
ವಿನಂತಿಸಲಾಗಿದೆ.
ಅಕ್ಟೋಬರ್
15ರಂದು
ಉದಯ ಹಯರ್ ಸೆಕೆಂಡರಿ ಶಾಲೆಯಲ್ಲಿ
ಐ. ಟಿ.
ಮೇಳ,
16ರಂದು
ಕಳಿಯೂರು ಶಾಲೆಯಲ್ಲಿ ವಿಜ್ಞಾನ
ಮತ್ತು ಗಣಿತ ಮೇಳ,
17ರಂದು
ಕಳಿಯೂರು ಶಾಲೆಯಲ್ಲಿ ವೃತ್ತಿ
ಪರಿಚಯ ಮೇಳ ಹಾಗೂ ಸಮಾಜ ವಿಜ್ಞಾನ
ಮೇಳ ನಡೆಯಲಿದೆ.
ಮಂಜೇಶ್ವರ
ಉಪಜಿಲ್ಲಾ ವಿಜ್ಞಾನ ರಸಪ್ರಶ್ನೆ
ಮತ್ತು ವಿಜ್ಞಾನ ಟೇಲೆಂಟ್ ಸರ್ಚ್
ಪರೀಕ್ಷೆಗಳು ಮಂಜೇಶ್ವರ ಬಿ ಆರ್
ಸಿಯಲ್ಲಿ ಅಕ್ಟೋಬರ್ 10ರಂದು
ನಡೆಯಲಿದೆ.
ಎಲ್
ಪಿ ಮತ್ತು ಯುಪಿ ರಸಪ್ರಶ್ನೆ ಹಾಗೂ
ಟೇಲೆಂಟ್ ಸರ್ಚ್ ಪರೀಕ್ಷೆ ಬೆಳಗ್ಗೆ
10ಗಂಟೆಗೆ
ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ
ರಸಪ್ರಶ್ನೆ ಅಪರಾಹ್ನ 2ಗಂಟೆಗೆ
ನಡೆಯಲಿದೆ.ಎಲ್ಲಾ
ಕಾರ್ಯಕ್ರಮಗಳ ಅಭೂತಪೂರ್ವ
ಯಶಸ್ಸಿಗೆ ಮಂಜೇಶ್ವರ ಉಪಜಿಲ್ಲಾ
ವಿಜ್ಞಾನ ಕ್ಲಬ್ ಪಧಾದಿಕಾರಿಗಳು
ಎಲ್ಲರ ತುಂಬು ಹೃದಯದ ಸಹಕಾರವನ್ನು
ಬಯಸಿದ್ದಾರೆ (ಪೈನಗರ್
ವಿಷನ್ ವಿಜ್ಞಾನ ಮೇಳ ವಿಭಾಗ ವರದಿ)
No comments:
Post a Comment