BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
*ಉಪಜಿಲ್ಲಾ ರಸಪ್ರಶ್ನೆ ಶಿಬಿಲತ್ ಪ್ರಥಮ
 
ಪೈವಳಿಕೆನಗರ, ಅ 10 : ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಕ್ಲಬ್ ನ ವತಿಯಿಂದ ಮಂಜೇಶ್ವರ ಬಿ.ಆರ್.ಸಿ ಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ಪೈವಳಿಕೆನಗರ ಶಾಲೆಯ ಪ್ಲಸ್ ಟು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಿಬಿಲತ್ ಪಿ.ಎಂ. ಪ್ರಥಮ ಸ್ಥಾನ ಪಡೆದು ಅಕ್ಟೋಬರ್ 24ರಂದು ಚೆರ್ಕಳ ಸೆಂಟ್ರಲ್ ಶಾಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಬಾಗವಹಿಸಲು ಅರ್ಹತೆ ಪಡೆದಿದ್ದಾಳೆ. ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು.

*ಪೈವಳಿಕೆನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ  
ಪೈವಳಿಕೆನಗರ : ಜಿ.ಎಚ್.ಎಸ್.ಎಸ್. ಪೈವಳಿಕೆನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮುಸ್ತಾಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶ್ರೀ ಪ್ರವೀಣ್ ಕನಿಯಾಲ ವಾರ್ಷಿಕ ವರದಿ ವಾಚಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಲೆಕ್ಕಪತ್ರ ಮಂಡಿಸಿದರು. ಶ್ರೀ ಲೋರೆನ್ಸ್ ಡಿಸೋಜಾರವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಶ್ರೀ ಪದ್ಮನಾಭ ಬಾಯಿಕಟ್ಟೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀ ಅಹ್ಮದ್ ಹುಸೈನ್ .ಪಿ.ಕೆ., ಶ್ರೀ ಕೃಷ್ಣ, ಇಬ್ರಾಹಿಂ, ಇಬ್ರಾಹಿಂ ಪಾವಲುಕೋಡಿ, ಇಸ್ಮಾಯಿಲ್, ರಾಧಾಕೃಷ್ಣ ಮಾಸ್ತರ್, ಶ್ರೀ ಸುರೇಶ್ ಆಚಾರ್ಯ ಬಾಯಾರುಪದವು, ಶ್ರೀಮತಿ ಲತಾ, ಶ್ರೀಮತಿ ಮಾಲತಿ ಆಯ್ಕೆಯಾದರು. ಮದರ್ ಪಿಟಿಎ ಅಧ್ಯಕ್ಷೆಯಾಗಿ ಶ್ರೀಮತಿ ರೋಹಿಣಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸರಿತಾ ಹಾಗೂ ಸದಸ್ಯರಾಗಿ ಶ್ರೀಮತಿ ಶಾಹಿರಾ, ಶ್ರೀಮತಿ ಜಯಂತಿ, ಶ್ರೀಮತಿ ಜಯಮಾಲಾ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ಇಬ್ರಾಹಿಂ ಮಾಸ್ತರ್ ಹಾಗೂ ತಿರುಮಲೇಶ್ವರ ಭಟ್ ಆಯ್ಕೆಯಾದರು. ಪದಾಧಿಕಾರಿಗಳ ಆಯ್ಕೆಯಲ್ಲಿ ಶ್ರೀಧರ ಭಟ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ ಶಾಲಾ ನೌಕರರ ಸಂಘದ ಕಾರ್ಯದರ್ಶಿ ಶ್ರೀ ರವೀಂದ್ರನಾಥ್ ಕೆ.ಆರ್ ವಂದಿಸಿದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್. ಕಾರ್ಯಕ್ರಮ ನಡೆಸಿದರು.


 *ಪೈವಳಿಕೆನಗರವನ್ನು ಮಾಯಾಲೋಕಕ್ಕೆ ಕೊಂಡೊಯ್ದ  ಜಾದೂ ಪ್ರದರ್ಶನ

ಪೈವಳಿಕೆನಗರ, ಅ.9: ಕಾಸರಗೋಡು ಜಿಲ್ಲಾ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಯಾರು ಮತ್ತು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಏಡ್ಸ್ ಜಾಗೃತಿ ಜಾದೂ ಪ್ರದರ್ಶನ ಜರಗಿತು. ಖ್ಯಾತ ಜಾದೂಗಾರ ಶ್ರೀ ಸುಧೀಶ್ ಮಾಡಕತ್ತ್ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಮುಖ್ಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು ವಿಸ್ಮಯಗಳನ್ನು ವೀಕ್ಷಿಸಲು ಕಾತರದಿಂದ ಕಿಕ್ಕಿರಿದು ನೆರೆದಿದ್ದರು. ಬಟ್ಟೆಯಿಂದ ಕೊಡೆ ಸೃಷ್ಟಿ, ಹಾರ ಸೃಷ್ಟಿ, ಪೆಟ್ಟಿಗೆ ಸೃಷ್ಟಿ ಕೈಚಳಕಗಳನ್ನು ಕಂಡು ವಿದ್ಯಾರ್ಥಿಗಳ ಆನಂದ ಹೇಳತೀರದು. ಮೇಜನ್ನು ಗಾಳಿಯಲ್ಲಿ ತೇಲಾಡುವಂತೆ ಮಾಡಿದಾಗ ವೀಕ್ಷಕರು ಈ ಅದ್ಬುತವನ್ನು ಬೆರಗು ಕಣ್ಣಿನಿಂದ ವೀಕ್ಷಿಸಿದರು. ಸುಮಾರು ಒಂದು ಗಂಟೆಗಳ ಕಾಲ ಸಭೆಯನ್ನು ಜಾದೂ ಲೋಕದಲ್ಲಿ ತೇಲಾಡಿಸಿದ ಜಾದೂಗಾರರು ತಮ್ಮ ತಂಡದೊಂದಿಗೆ ನಿರ್ಗಮಿಸಿದರು.


*ಶಾಲಾ ವಿಜ್ಞಾನ ಮೇಳ ಸಂಪನ್ನ
 

ಪೈವಳಿಕೆನಗರ ಅ 9 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ಮಟ್ಟದ ವಿಜ್ಞಾನ ಮೇಳಗಳಿಗೆ ತೆರೆ ಬಿದ್ದಿದೆ.ಗಣಿತ, ವಿಜ್ಞಾನ, ಸಮಾಜ, ವೃತ್ತಿಪರಿಚಯದ ವಿವಿಧ ಮಜಲುಗಳನ್ನು ಪುಟಾಣಿ ಮೇದಾವಿಗಳು ಪೈವಳಿಕೆನಗರದ ಮುಂದಿಟ್ಟರು. ಪ್ರದರ್ಶನ ಸ್ಟಾಲ್ ಮಧ್ಯೆ ಪ್ರತ್ಯಕ್ಷಗೊಂಡ ಸಿಂಹದ ತಲೆಯು ವೀಕ್ಷಕರಲ್ಲಿ ಒಂದು ಕ್ಷಣ ಭಯಾತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಗಣಿತದ ವಿವಿಧ ಆಯಾಮಗಳು, ವಿವಿಧ ಸಂಗ್ರಹಗಳು, ಹಲವು ತರದ ಹೂಗಳು, ಕಸದ ಉತ್ಪನ್ನಗಳು, ಸೂರ್ಯಗ್ರಹಣದ ಮಾದರಿಗಳು ವಿದ್ಯಾರ್ಥಿಗಳ ಸೃಜನಾತ್ಮಕತೆಗೆ ಸಾಕ್ಷಿಯಾಗಿ ಪ್ರದರ್ಶನ ಹಾಲಿನಲ್ಲಿ ಚಿತ್ತಾರ ಮೂಡಿಸಿದವು. (ಪೈನಗರ್ ವಿಷನ್ ವಿಜ್ಞಾನ ಮೇಳ ವಿಭಾಗ ವರದಿ)

No comments:

Post a Comment