BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
*ದಸರಾ ನಾಡಹಬ್ಬ ಪೈವಳಿಕೆನಗರ ಶಾಲೆಗೆ ಚಾಂಪಿಯನ್ ಶಿಪ್

ಪೈವಳಿಕೆನಗರ ಅ 2 : ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಪೋಷಕವಾದ ದಸರಾ ನಾಡಹಬ್ಬ ಪೈವಳಿಕೆನಗರ ಶಾಲೆಯಲ್ಲಿ ನಡೆದಿದ್ದು ಹಯರ್ ಸೆಕೆಂಡರಿ ವಿಭಾಗದಲ್ಲಿ ಪೈವಳಿಕೆನಗರ ಶಾಲೆ ಸಮಗ್ರ ಚಾಂಪಿಯನ್ ಶಿಪ್ ಗಳಿಸಿದೆ. ಹುಡುಗರ ಜಾನಪದ ಗೀತೆಯಲ್ಲಿ ದೀಕ್ಷಿತ್ ಪ್ರಥಮ, ಹುಡುಗಿಯರ ಜಾನಪದ ಗೀತೆ ಸ್ಪರ್ಧೆಯಲ್ಲಿ ಶ್ರದ್ಧಾ. ಎನ್ ಪ್ರಥಮ, ಸಮೂಹಗೀತೆ ಸ್ಪರ್ಧೆಯಲ್ಲಿ ಭಾಗ್ಯಲಕ್ಷ್ಮಿ ಮತ್ತು ಬಳಗ ಪ್ರಥಮ ಸ್ಥಾನಗಳಿಸಿ ಈ ಸಾಧನೆ ಮೆರೆದಿದ್ದಾರೆ. ಎಲ್ ಪಿ ವಿಭಾಗದ ಲಘು ಸಂಗೀತ ಸ್ಪರ್ಧೆಯಲ್ಲಿ 3ಎ ತರಗತಿಯ ಅಭಿರಾಮ್ ಪ್ರಥಮ, ಹೈಸ್ಕೂಲ್ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ 9ಎ ತರಗತಿಯ ನಿಖಿಲ್ ಪಿ ಪ್ರಥಮ, ಮಾಪಿಳ್ಳಪಾಟ್ಟು ಸ್ಪರ್ಧೆಯಲ್ಲಿ 10ಎ ತರಗತಿಯ ಮುನೀರಾ ಪ್ರಥಮ ಸ್ಥಾನಗಳಿಸಿದ್ದಾರೆ. ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳು.
*ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದ ದಸರಾ ನಾಡಹಬ್ಬ
ಪೈವಳಿಕೆನಗರ ಅ 2: ದಸರಾ ನಾಡಹಬ್ಬವು ಹೆಚ್ಚು ಜನರು ಪಾಲ್ಗೊಳ್ಳುವುದರ ಮೂಲಕ ವಿಜೃಂಭಣೆಯಿಂದ ನಡೆಯಬೇಕು ಎ೦ಬ ಆಶಯವನ್ನು ಪೈವಳಿಕೆ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀ ಮಣಿಕಂಠ ರೈ ವ್ಯಕ್ತಪಡಿಸಿದರು. ಗಡಿನಾಡ ಕಲಾಸಂಘ ಪೈವಳಿಕೆ, ಪೈವಳಿಕೆನಗರ ಸರಕಾರಿ ಪ್ರೌಢಶಾಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಸಹಯೋಗದೊಂದಿಗೆ ಕನ್ನಡ ನಾಡು ನುಡಿ, ಸಾಹಿತ್ಯ ಸಂಸ್ಕೃತಿಗಳ ಪ್ರತೀಕವಾದ ದಸರಾ ನಾಡಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಶ್ರೀ ಎಸ್. ವಿ. ಭಟ್ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಾಂಧೀ ಜಯಂತಿ ಆಚರಣೆಯ ಅಂಗವಾಗಿ ರಾಷ್ಟ್ರ ಪಿತ ಮಹಾತ್ಮಾ ಗಾಂಧೀ ಅವರ ಭಾವಚಿತ್ರಕ್ಕೆ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್ ನಾರಾಯಣ ಭಟ್ ಹಾರಾರ್ಪಣೆ ಮಾಡಿದರು. ಮಹಾತ್ಮಾ ಗಾಂಧಿಯವರ ತತ್ವಾದರ್ಶಗಳನ್ನು ಶ್ರೀಯುತ ನಯನಪ್ರಸಾದ್ ಅವರು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಬುಸಾಲಿ, ಶ್ರೀ ಎಸ್. ನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಭಟ್ ಶುಭಾಶಂಸನೆಗೈದರು. ಗಡಿನಾಡ ಕಲಾಸಂಘದ ಕಾರ್ಯದರ್ಶಿ ಶ್ರೀ ಸಿ. ರಾಘವ ಬಲ್ಲಾಳ್ ಸ್ವಾಗತಿಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಮೊಹಮ್ಮದ್ ಧನ್ಯವಾದ ಸಮರ್ಪಿಸಿದರು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ರವೀಂದ್ರನಾಥ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ಪೈವಳಿಕೆನಗರ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ ಶ್ರದ್ಧಾ ಎನ್ ಪ್ರಾರ್ಥನೆ ಹಾಡಿದರು.

1 comment:

  1. ಹೃತ್ಪೂರ್ವಕ ಅಭಿನಂದನೆಗಳು. ದಸರಾ ಶುಭಾಶಯಗಳು

    ReplyDelete