*ಅಕ್ಟೋಬರ್
6
ಶಾಲೆಗೆ
ರಜೆ
ತಿರುವನಂತಪುರ
ಅ.1: ಬಕ್ರೀದ್
ಹಬ್ಬದ ಆಚರಣೆಯ ಪ್ರಯುಕ್ತ ಅಕ್ಟೋಬರ್ 6
ಸೋಮವಾರ
ಕೇರಳ ರಾಜ್ಯದ ಎಲ್ಲಾ ವಿದ್ಯಾಭ್ಯಾಸ
ಸಂಸ್ಥೆಗಳಿಗೆ ಸರಕಾರ ರಜೆ ಸಾರಿ
ಆದೇಶ ಹೊರಡಿಸಿದೆ.
ಆ ದಿನ
ಕೇರಳ ರಾಜ್ಯದ ಎಲ್ಲಾ ಸರಕಾರಿ
ಕಛೇರಿಗಳಿಗೂ ರಜೆಯಾಗಿರುವುದು
ಎಂದು ಸರಕಾರದ ಮೂಲಗಳು ತಿಳಿಸಿವೆ.
*ಕಾಸರಗೋಡು
ಕಂದಾಯ ಜಿಲ್ಲಾ ಮಟ್ಟದ ಕ್ರಿಕೆಟ್
ಪಂದ್ಯಾಟಕ್ಕೆ ಪೈವಳಿಕೆನಗರ
ಶಾಲೆಯ ಸಫ್ ವಾನ್ ಆಯ್ಕೆ
ಪೈವಳಿಕೆನಗರ
ಸೆ. 29 ಕಾಸರಗೋಡು
ಕಂದಾಯ ಜಿಲ್ಲಾ ಮಟ್ಟದ ಸೀನಿಯರ್
ಹುಡುಗರ ಕ್ರಿಕೆಟ್ ಪಂದ್ಯಾಟದಲ್ಲಿ
ಕಾಸರಗೋಡು ವಿದ್ಯಾಭ್ಯಾಸ
ಜಿಲ್ಲೆಯನ್ನು ಪ್ರತಿನಿಧಿಸುವ
ತಂಡದ ಸದಸ್ಯನಾಗಿ ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಪ್ಲಸ್ ವನ್ ವಿಜ್ಞಾನ ವಿಭಾಗದ
ವಿದ್ಯಾರ್ಥಿ ಸಫ್ ವಾನ್
ಆಯ್ಕೆಯಾಗಿದ್ದಾನೆ.
ಸೋಮವಾರ
ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ
ನಡೆದ ಜಿಲ್ಲಾ ಮಟ್ಟದ ಪಂದ್ಯದಲ್ಲಿ
ಈತ ಉತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾನೆ.
ಅಕ್ಟೋಬರ್
ಮೊದಲ ವಾರದಲ್ಲಿ ಕಂದಾಯ ಜಿಲ್ಲಾ
ಮಟ್ಟದ ಪಂದ್ಯಾಟಗಳು ನಡೆಯಲಿದೆ.
ಈತನ
ಸಾಧನೆಗೆ ಪೈವಳಿಕೆನಗರ ಶಾಲೆಯ
ರಕ್ಷಕ ಶಿಕ್ಷಕ ಸಂಘ ಅಭಿನಂದನೆಗಳನ್ನು
ಸಲ್ಲಿಸಿದೆ.
ವಿದ್ಯಾರ್ಥಿಗಳಿಗೆ ಪ್ರತಿರೋಧ ಲಸಿಕೆ
ಪೈವಳಿಕೆನಗರ,
ಸೆ.26
: ಕಬ್ಬಿಣದ
ವಸ್ತುವಿನಲ್ಲಿರುವ ಟೆಟಾನಸ್
ಎಂಬ ರೋಗಾಣು ಧನುರ್ವಾತ ಎಂಬ
ರೋಗವನ್ನು ಉಂಟುಮಾಡುವುದು.
ಬಾಧಿತ
ಶರೀರದ ಸ್ನಾಯುಗಳು ಸೆಳೆಯುವುದು
ಮತ್ತು ಶರೀರವು ಬಿಲ್ಲಿನಂತೆ
ಬಾಗುವುದು ಇದರ ಮುಖ್ಯ ಲಕ್ಷಣವಾಗಿದೆ.
ಕೊನೆಯಲ್ಲಿಇದು
ಮರಣಕ್ಕೂ ಕಾರಣವಾಗಬಹುದು ಎಂದು
ವೈದ್ಯಲೋಕದ ಅಬಿಪ್ರಾಯ.
ಇದಕ್ಕೆದುರಾಗಿ
ಟೆಟಾನಸ್ ಟೋಕ್ಸೋಯಿಡ್ ಎಂಬ
ಪ್ರತಿರೋಧ ಲಸಿಕೆಯನ್ನು ನೀಡಲಾಗುವುದು.
10ಮತ್ತು
15
ವರ್ಷ
ಪ್ರಾಯಗಳಲ್ಲಿ ಲಸಿಕೆ ನೀಡಿ ರೋಗ
ಪ್ರತಿರೋಧ ಶಕ್ತಿಯನ್ನು
ವೃದ್ಧಿಸಿಕೊಳ್ಳಬಹುದು.
ಕೇರಳ
ರಾಜ್ಯ ಆರೋಗ್ಯ ಇಲಾಖೆಯ ವತಿಯಿಂದ
ಶಾಲೆಗಳಲ್ಲಿ ವರ್ಷಂಪ್ರತಿ
ಲಸಿಕೆಗಳನ್ನು ಕೊಡಲಾಗುತ್ತದೆ.
ಇದರ
ಅಂಗವಾಗಿ ಪೈವಳಿಕೆನಗರ ಶಾಲೆಯಲ್ಲಿ
ಶುಕ್ರವಾರ ಬಾಯಾರು ಪ್ರಾಥಮಿಕ
ಆರೋಗ್ಯ ಕೇಂದ್ರದ ವತಿಯಿಂದ
ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ
ಶಾಲಾ ಮಕ್ಕಳಿಗೆ ಲಸಿಕೆ ನೀಡಲಾಯಿತು
ತರಕಾರಿ ಬೀಜ ವಿತರಣೆ
ಪೈವಳಿಕೆನಗರ ಸೆ.25 : ಜಿ.ಎಚ್.ಎಸ್.ಎಸ್ ಪೈವಳಿಕೆನಗರದ ವಿದ್ಯಾರ್ಥಿಗಳಿಗೆ ಕೇರಳ ಕೃಷಿ ಇಲಾಖೆ ಕೊಡಮಾಡಿದ ತರಕಾರಿ ಬೀಜಗಳ ವಿತರಣೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಅಬುಸಾಲಿಯವರು ನೆರವೇರಿಸಿದರು. ಪೈವಳಿಕೆ ಕೃಷಿಭವನದ ಅಧಿಕಾರಿ ಶ್ರೀ ದೇವರಾಜನ್ ಹಾಗೂ ಕೃಷಿ ಸಹಾಯಕರಾದ ಅರುಮುಖನ್ ಉಪಸ್ಥಿತರಿದ್ದರು. ಮಂಗಳಯಾನ ಯಶಸ್ವಿಗೊಳಿಸಿದ್ದಕ್ಕಾಗಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ .ಕೆ ಹಾಗೂ ಪ್ರಾಂಶುಪಾಲರಾದ ವಿಶ್ವನಾಥ ಕಂಚಿಕಟ್ಟೆ ಉಪಸ್ಥಿತರಿದ್ದರು. ಮಂಜೇಶ್ವರ ಉಪಜಿಲ್ಲಾ ಗಣಿತಶಾಸ್ತ್ರ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ಲಸ್ ವನ್ ಸಯನ್ಸ್ ನ ಅಜಯಕುಮಾರ್, 7ಸಿ ತರಗತಿಯ ಧ್ವಾನಿಷ್ ನನ್ನು ಅಭಿನಂದಿಸಲಾಯಿತು.
No comments:
Post a Comment