BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ


















ಪೈವಳಿಕೆನಗರ: ಸ್ವಾತಂತ್ರ್ಯ ದಿನಾಚರಣೆಯನ್ನು ಪೈವಳಿಕೆನಗರ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಧ್ವಜಾರೋಹಣ ಮಾಡಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಮಾಸ್ಟರ್, ಪಿಟಿಎ ಅಧ್ಯಕ್ಷರಾದ ಶ್ರೀ ಪಿ.ಕೆ. ಮುಸ್ತಾಫ, ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ ಉಪಸ್ಥಿತರಿದ್ದರು. ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮದರ್ ಪಿಟಿಎ ಅಧ್ಯಕ್ಷರಾದ ಶ್ರೀಮತಿ ಸರಿತಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ವಿಶ್ವನಾಥ ಸರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಕೃಷ್ಣಮೂರ್ತಿ ಎಂ.ಎಸ್. ,  ಶ್ರೀಧರ ಭಟ್ ಶುಭಾಶಂಸನೆ ಮಾಡಿದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಧೀಶ್ ಮಾಸ್ಟರ್ ಕೊಳಲುವಾದನದ ಮೂಲಕ ಆರಂಭಿಸಿದರು. ತಾವೇ ರಚಿಸಿದ ಸ್ವಾತಂತ್ರ್ಯ ಗೀತೆಗಳಿಗೆ ವಿದ್ಯಾರ್ಥಿಗಳೊಂದಿಗೆ ಶ್ಯಾಮಲಾ ಟೀಚರ್ ಹೆಜ್ಜೆ ಹಾಕಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತ್ತು. ಯುಪಿ ವಿದ್ಯಾರ್ಥಿಗಳು ಸ್ವಾತಂತ್ಯ್ರದ ಗೀತೆಯೊಂದಕ್ಕೆ ನೃತ್ಯ ಮಾಡಿದ್ದು ನೋಡುಗರ ಕಣ್ಮನ ಸೆಳೆದಿತ್ತು. ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ನಡೆದ ರಸಪ್ರಶ್ನೆಯಲ್ಲಿ 10ನೇ ತರಗತಿಯ ಪೃಥ್ವಿ. ಪಿ.ಬಿ ಪ್ರಥಮ ಸ್ಥಾನ ಹಾಗೂ ನಿತಿನ್  ಕೃಷ್ಣ ದ್ವಿತೀಯ ಸ್ಥಾನಗಳಿಸಿದರು. ಯುಪಿ ವಿಭಾಗದಲ್ಲಿ 7ನೇ ತರಗತಿಯ ಕಾರ್ತಿಕ್ ಕೆ ಪ್ರಥಮ ಸ್ಥಾನ ಹಾಗೂ ಧ್ವಾನಿಶ್ ದ್ವಿತೀಯ ಸ್ಥಾನಗಳಿಸಿದರು. ಮಲಯಾಳ ಪ್ರಬಂಧ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ 10ನೇ ತರಗತಿಯ ನಿತಿನ್ ಕೃಷ್ಣ ಪ್ರಥಮ ಹಾಗೂ ಯುಪಿ ವಿಭಾಗದಲ್ಲಿ 7ನೇ ತರಗತಿಯ ಅಬ್ದುಲ್ ಇಶಾಕ್ ಪ್ರಥಮ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ 10ನೇ ತರಗತಿಯ ಅಕ್ಷತಾ ಪ್ರಥಮ ಹಾಗೂ ಯುಪಿ ವಿಭಾಗದಲ್ಲಿ 7ನೇ ತರಗತಿಯ  ಕಾರ್ತಿಕ್ .ಕೆ ಪ್ರಥಮ ಸ್ಥಾನಗಳಿಸಿದ್ದಾರೆ. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಸ್ವಾಗತಿಸಿ ಉದ್ಯೋಗಿಗಳ ಸಂಘದ ಕಾರ್ಯದರ್ಶಿಯಾದ ಶ್ರೀ ರವೀಂದ್ರನಾಥ ಬಲ್ಲಾಳ್ ವಂದಿಸಿದರು.

No comments:

Post a Comment