BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

ದೇವರ ಸ್ವಂತ ನಾಡಿನಲ್ಲಿ ಮಹಾಬಲಿಗೆ ಸ್ವಾಗತ ನೀಡುವ ಓಣಂ ಆಚರಣೆ ಸಂಪನ್ನ 


ಪೈವಳಿಕೆನಗರ ಸೆ 5 : ದೇವರ ಸ್ವಂತ ನಾಡಿನ ಭಾವೈಕ್ಯತೆಯ ಮತ್ತು ಜನಜಾಗೃತಿಯ ಸಂಕೇತವಾದ ಕೇರಳದ ನಾಡಹಬ್ಬವಾದ ಓಣಂ ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸೆಪ್ಟಂಬರ್ 4ರ  ಪರೀಕ್ಷೆ ಕಳೆದ ನಂತರ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಓಣಂ ಹೂ ರಂಗೋಲಿ ಸ್ಪರ್ಧೆಯ ತಯಾರಿಯ ತರಾತುರಿಯಲ್ಲಿದ್ದರು.  ಅಪರಾಹ್ನ ಆಚರಣಾ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ರೂಪುರೇಖೆ ನೀಡುವ ಗೌಜಿಯಲ್ಲಿದ್ದರು. ಪಾಕಶಾಲೆಯ ಜವಾಬ್ದಾರಿ ಹೊತ್ತವರು ಭಕ್ಷ್ಯ ಭೋಜ್ಯ ವಸ್ತುಗಳ ಜೋಡಣೆಯಲ್ಲಿ ನಿರತರಾಗಿದ್ದರು. ಶುಕ್ರವಾರ ಬೆಳ್ಳಂಬೆಳಗ್ಗೆ ಪೈವಳಿಕೆನಗರ ಓಣಂ ಹಬ್ಬದ ಆಚರಮೆಗೆ ತಯಾರಾಯಿತು. ಒಂದೆಡೆ ವಿದ್ಯಾರ್ಥಿಗಳು  ರಂಗೋಲಿಗೆ ಬೇಕಾದ ಹೂಗಳ ಜೋಡಣೆಯಲ್ಲಿ ನಿರತಾಗಿದ್ದರೆ ಇನ್ನೊಂದೆಡೆ ಮಧ್ಯಾಹ್ನದ ಭೋಜನದ ತಯಾರಿಯಲ್ಲಿದ್ದರು. ಬೆಳಗ್ಗಿನಿಂದ ಸುರಿಯುತ್ತಿದ್ದ ತುಂತುರು ಮಳೆ ಹಬ್ಬದ ಸಂಭ್ರಮ ಕಡಿಮೆ ಮಾಡಲಿಲ್ಲ. ತರಗತಿಯಲ್ಲಿ ಚೋಕ್, ನೂಲು ಉಪಯೋಗಿಸಿ ಚಿತ್ರರಚನೆಕಾರರ ಕೈಚಳಕ ಒಂದೆಡೆಯಾದರೆ ದೂರದೂರಿನಿಂದ ತಂದ ಹೂಗಳನ್ನು ತುಂಡರಿಸುವ  ವಿದ್ಯಾರ್ಥಿಗಳ ಗುಂಪು ಇನ್ನೊಂದೆಡೆ. ಎಲ್ಲಾ ದಿನಗಳ ಶಾಲಾ ಸಮವಸ್ತ್ರದಿಂದ ಹೊರತಾಗಿ ಕೆಲವರು ಕೇರಳೀಯ ಶೈಲಿಯ ಪಂಚೆ ಉಟ್ಟು ಸಂಭ್ರಮಿಸಿದರೆ ಕೇರಳೀಯ ಸೀರೆ ಉಟ್ಟ ಹುಡುಗಿಯರ ಗುಂಪು ಇನ್ನೊಂದೆಡೆ. ಮಘಾ ಮಳೆಯ ಬೆದರಿಕೆಯ ನಡುವೆ  11ಗಂಟೆಗೆ ಸರಿಯಾಗಿ ಶಾಲಾ ಮೈದಾನದಲ್ಲಿ ವಿನೋದ ಕ್ರೀಡೆಗಳು ಆರಂಭವಾಯಿತು.  ಹೆಣ್ಣು ಮಕ್ಕಳು ಇಷ್ಟಪಡುವ ಸಂಗೀತ ಕುರ್ಚಿ, ಲಿಂಬೆಚಮಚ ಓಟ, ಬಾಟ್ಲಿಗೆ ನೀರು ತುಂಬಿಸುವುದು , ಮುಂತಾದ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ಪ್ರಕಟಿಸಿದರು. ಹಗ್ಗ ಜಗ್ಗಾಟ, ಸಂಗೀತ ಟೊಪ್ಪಿ, ಬಿಸ್ಕೆಟ್ ತಿನ್ನುವುದು, ಮದರಂಗಿ ಇಡುವುದು, ಗೋಣಿ ಚೀಲ ಓಟ ಮುಂತಾದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಆನಂದ ತುಂದಿಲರಾದರು.ಮಧ್ಯಾಹ್ನ ಓಣಂ ಔತಣ ಏರ್ಪಡಿಸಲಾಗಿತ್ತು.ಅಪರಾಹ್ನ 3 ಗಂಟೆಗೆ ಸರಿಯಾಗಿ ಕ್ರೀಡಾ ವಿನೋದಗಳು ಮುಕ್ತಾಯವಾಯಿತು. 

ಪಾರ್ಲಿಮೆಂಟ್ ಚುನಾವಣೆ 2014-15

 











ಪೈವಳಿಕೆನಗರ, ಆಗಸ್ಟ್ 22: ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನದಲ್ಲಿ ಜನರಿಂದ ಜನರಿಗಾಗಿ ಇರುವ ಪ್ರಜಾಪ್ರಭುತ್ವ ಆಡಳಿತಕ್ಕೆ ಬೇಕಾಗಿ ನಡೆಯುವ ಚುನಾವಣಾ ಪ್ರಕ್ರಿಯೆಯ ಅಧ್ಯಯನಕ್ಕಾಗಿ ಜಿ.ಎಚ್.ಎಸ್.ಎಸ್ ಪೈವಳಿಕೆನಗರ ಶಾಲೆಯಲ್ಲಿ ಅಗೋಸ್ತು 22ರಂದು ಶಾಲಾ ಪಾರ್ಲಿಮೆಂಟಿಗೆ ಚುನಾವಣೆ ನಡೆಯಿತು.ಒಟ್ಟು ಇರುವ 24 ಕ್ಷೇತ್ರಗಳಿಗಾಗಿ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮತದಾನ ಆರಂಭವಾಯಿತು. ಎಲ್ಲಾ 24 ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ಆರಂಭವಾದ ಮತದಾನ ಪ್ರಕ್ರಿಯೆಯು ಅರ್ಧ ಗಂಟೆಯೊಳಗೆ ಮುಕ್ತಾಯವಾಗಿ ಅದೇ ಮತಗಟ್ಟೆಯಲ್ಲಿ ಮತ ಎಣಿಕೆ ನಡೆದು ವಿಜಯಿಗಳನ್ನು ಘೋಷಿಯಲಾಯಿತು.ಹರ್ಷಿಯಾನಾ5ಎ, ನಿಶ್ಮಿತಾ5ಬಿ, ಫಾತಿಮತ್ ಝೌರಾ6ಎ, ಹೈದರಾಲಿ6ಬಿ, ಫಾತಿಮತ್ ಸುಹೈಲಾ6ಸಿ, ಕಾರ್ತಿಕ್7ಎ, ಅಬ್ದುಲ್ ಐಸಾಕ್7ಬಿ, ವೈಭವಿ7ಸಿ, ದುರ್ಗಾಪ್ರಸಾದ್ 8ಎ, ಕದೀಜತ್ ಮೈಸೀನಾ8ಬಿ, ತಸ್ಮೀರಾ8ಸಿ, ನಿಖಿಲ್ 9ಎ, ಮೊಯ್ದೀನ್ ಮುಹಾಸ್ 9ಬಿ, ಫಾತಿಮತ್ ಫರ್ ಹಾನಾ 9ಸಿ, ರೈಹಾನಾ 10ಎ, ಅಬ್ದುಲ್ ರಾಝಿಕ್ 10ಬಿ, ತೇಜಸ್ ಕುಮಾರ್10ಸಿ, ವಿನೋದ್ ಕುಮಾರ್ 10ಡಿ, ನಬೀವುಲ್ ಅಹಮ್ಮದ್ 11 ಸೈನ್ಸ್, ಫಾತಿಮತ್ ಮಿನಾಸ್ 11 ಕಾಮರ್ಸ್, ಶ್ರೇಯಾ11 ಹ್ಯುಮಾನಿಟೀಸ್, ಮೊಹಮ್ಮದ್ ಸುಹೈಲ್ 12 ಸೈನ್ಸ್, ಸದಾನಂದ12 ಕಾಮರ್ಸ್, ಆಯಿಶತ್ ತಸ್ಲೀಮಾ 12ಹ್ಯುಮಾನಿಟೀಸ್ ಜಯಗಳಿಸಿದರು. ಅಪರಾಹ್ನ 3ಗಂಟೆಗೆ ಶಾಲಾ ಮಾಧ್ಯಮ ಕೇಂದ್ರದಲ್ಲಿ ಸೇರಿದ ಸಂಸದೀಯ ಪಕ್ಷದ ಸಭೆಯಲ್ಲಿ ಪ್ಲಸ್ ಟು ವಿಜ್ಞಾನ ವಿಭಾಗದ ಮೊಹಮ್ಮದ್ ಸುಹೈಲ್ ನನ್ನು ಶಾಲಾ ಪಾರ್ಲಿಮೆಂಟಿನ ಅಧ್ಯಕ್ಷನನ್ನಾಗಿ ಚುನಾಯಿಸಲಾಯಿತು. ಪಾರ್ಲಿಮಂಟ್ ಕಾರ್ಯದರ್ಶಿಯಾಗಿ 9ಎ ತರಗತಿಯ ನಿಖಿಲ್ ನನ್ನು ಆರಿಸಲಾಯಿತು. ಶಾಲಾ ಉಪನಾಯಕನಾಗಿ ಅಬ್ದುಲ್ ರಾಝಿಕ್ 10ಬಿ, ಜತೆ ಕಾರ್ಯದರ್ಶಿಯಾಗಿ ಫಾತಿಮತ್ ಮಿನಾಝ್ 11ಕಾಮರ್ಸ್, ಕ್ರೀಡಾ ಖಾತೆ ಸಚಿವರಾಗಿ ಆಯಿಶತ್ ತಸ್ಲೀಮಾ 12ಹ್ಯುಮಾನಿಟೀಸ್, ಸಹಾಯಕ ಕ್ರೀಡಾ ಖಾತೆ ಸಚಿವರಾಗಿ ವಿನೋದ್ ಕುಮಾರ್ 10ಡಿ, ಸಾಂಸ್ಕೃತಿಕ ಖಾತೆ ಸಚಿವರಾಗಿ ಸದಾನಂದ12 ಕಾಮರ್ಸ್, ಸಾಂಸ್ಕೃತಿಕ ಖಾತೆ ಸಹಾಯಕ ಸಚಿವರಾಗಿ ತಸ್ಮೀರಾ8ಸಿ, ರಕ್ಷಣಾ ಖಾತೆ ಸಚಿವರಾಗಿ ನಬೀವುಲ್ ಅಹಮ್ಮದ್ 11 ಸಯನ್ಸ್, ರಕ್ಷಣಾ ಖಾತೆ ಸಹಾಯಕ ಸಚಿವರಾಗಿ ಕಾರ್ತಿಕ್ 7ಎ, ಆರೋಗ್ಯ ಖಾತೆ ಸಚಿವರಾಗಿ ಶ್ರೇಯಾ 11ಹ್ಯುಮಾನಿಟೀಸ್,  ಆರೋಗ್ಯ ಖಾತೆ ಸಹಾಯಕ ಸಚಿವರಾಗಿ ವೈಭವಿ 7ಸಿ ಆಯ್ಕೆಯಾದರು. ನೂತನವಾಗಿ ಆಯ್ಕೆಯಾದ ಶಾಲಾ ಪಾರ್ಲಿಮಂಟರಿ ಪಕ್ಷದ ನಾಯಕನಿಗೆ 2014-15ನೇ ಸಾಲಿನ ಶಾಲಾ ಪಾರ್ಲಿಮಂಟ್ ನಾಯಕನಾಗಿ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಸರ್ ಪ್ರಮಾಣವಚನ ಬೋಧಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಸರ್ ಸದನವನ್ನು ಉದ್ಧೇಶಿಸಿ ಮಾತನಾಡಿದರು.ಮುಖ್ಯ ಚುನಾವಣಾಧಿಕಾರಿಗಳಾದ ರಂಜಿತ್ ಸರ್ ಹಾಗೂ ಅಬ್ದುಲ್ ಕರೀಂ ಸರ್ ಕಲಾಪದ ನೇತೃತ್ವ ವಹಿಸಿದರು.ಶ್ಯಾಮಲಾ ಟೀಚರ್ ಸ್ವಾಗತಿಸಿ ಕರೀಂ ಸರ್ ವಂದಿಸಿದರು. ಹಿರಿಯ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ, ಶ್ರೀ ನಾರಾಯಣ ರಾವ್ ಉಪಸ್ಥಿತರಿದ್ದರು. ಜಯಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪೈನಗರ್ ವಿಷನ್ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದು.ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ ಎಲ್ಲರಿಗೂ ಮುಖ್ಯ ಚುನಾವಣಾಧಿಕಾರಿ ಪೈನಗರ್ ವಿಷನ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ

No comments:

Post a Comment