BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಉತ್ಥಾನ : ರಜಾಕಾಲ ಸೃಜನಾತ್ಮಕ ಶಿಬಿರ

ಪೈವಳಿಕೆನಗರ ಸೆ.13 : ಜಿ.ಎಚ್.ಎಸ್.ಎಸ್. ಪೈವಳಿಕೆನಗರಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳ ಉತ್ಥಾನ ಶಿಬಿರ ಜರಗಿತು. ಹಿರಿಯ ಶಿಕ್ಷಕರಾದ ಉದ್ಯೋಗಿಗಳ ಸಂಘದ ಮಾಜಿ ಕಾರ್ಯದರ್ಶಿ ಶ್ರೀ ಅಬ್ದುಲ್ ಕರೀಂ ಪಿ.ಕೆ., ಶಿಬಿರವನ್ನು ಉದ್ಘಾಟಿಸಿದರು. ಶಿಕ್ಷಕರಾದ ಶ್ರೀ ಗೋಪಣ್ಣ ಮುಖ್ಯ ಅತಿಥಿಗಳಾಗಿದ್ದರು. ಬಾಲಕೃಷ್ಣ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀಧರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಓಣಂ ರಜೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ, ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸಿ, ಆತ್ಮವಿಶ್ವಾಸ ವೃದ್ಧಿಸಿ, ಮುಖ್ಯವಾಹಿನಿಯಲ್ಲಿ ತರಲು, ನಾವು ಯಾರಿಗಿಂತಲೂ ಕಡಿಮೆಯಲ್ಲ ಎಂಬ ಭಾವನೆಯನ್ನು ಮೂಡಿಸಿ, ಸಭಾಕಂಪನವನ್ನು ದೂರಗೊಳಿಸಿ, ಅಕ್ಷರ ಜ್ಞಾನ, ಓದುವಿಕೆ, ವಿಷಯ ಜ್ಞಾನ, ಬರವಣಿಗೆ ವೃದ್ಧಿಸಿ, ಅಭಿನಯ ಸಾಮಾರ್ಥ್ಯ, ದೈಹಿಕ ಕ್ಷಮತೆ ಹೆಚ್ಚಿಸಿ ಸಮಯದ ಸದುಪಯೋಗ ಮಾಡಿ ಉತ್ತಮ ಪೌರರನ್ನಾಗಿಸುವುದು ಶಿಬಿರದ ಉದ್ದೇಶವಾಗಿತ್ತು. ಬಾಯಿತಾಳಗಳು, ನಾಲಗೆ ತಿರಿಚುಗಳು,ಕವನ, ಹಾಡುಗಳು, ಅಭಿನಯ ಗೀತೆಗಳು, ಕಥಾ ವಿಶ್ಲೇಷಣೆ, ಅಭಿನಯ, ಒಗಟು ಸ್ಪರ್ಧೆಗಳು, ಚಿತ್ರರಚನೆ, ಕಾಗದದಲ್ಲಿ ಹೂ ತಯಾರಿ, ವಿವಿಧ ಭಾಷಾ ಆಟಗಳು, ಹೊರಾಂಗಣ ಆಟಗಳಲ್ಲಿವಿದ್ಯಾರ್ಥಿಗಳು ಉತ್ಸಾಹದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕಾ ಉತ್ಪನ್ನಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಯಿತು. ಬೆಳಗ್ಗೆ ಲಘು ಉಪಾಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಸಂಯೋಜಕರಾದ ಶ್ರೀಧರ ಭಟ್ ಶಿಬಿರದ ನೇತೃತ್ವ ವಹಿಸಿದರು. ಶಿಕ್ಷಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ, ಬಾಲಕೃಷ್ಣ ಮಾಸ್ಟರ್, ಕರೀಂ ಮಾಸ್ಟರ್, ಗೋಪಣ್ಣ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

No comments:

Post a Comment