BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಆಂಗ್ಲ ಭಾಷಾ ವ್ಯಾಮೋಹದ ಮಧ್ಯೆ ಕನ್ನಡದ ಉಳಿವಿಗೆ ಪ್ರಯತ್ನ ಶ್ಲಾಘನೀಯ ಶ್ರೀ ಅಚ್ಯುತ ಚೇವಾರು




ಪೈವಳಿಕೆನಗರ, ಮಾ.11: ಆಂಗ್ಲ ಭಾಷಾ ವ್ಯಾಮೋಹದ ಮಧ್ಯೆ ಕನ್ನಡದ ಉಳಿವಿಗಾಗಿ  ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ನೂರು ಶೇಕಡಾ ಅಂಕಗಳನ್ನು ಗಳಿಸಿದ ವ್ಯಕ್ತಿ ಒಳ್ಳೆಯ ವಿದ್ಯಾರ್ಥಿ ಆಗಬೇಕೆಂದೇನೂ ಇಲ್ಲ. ಶಿಸ್ತಿಗೆ ಪ್ರಾಧಾನ್ಯತೆ ಬೇಕು. ಶಾಲೆಯ ಶಿಸ್ತಿಗಾಗಿ ಅಧ್ಯಾಪಕರು ಮತ್ತು ರಕ್ಷಕರ ಸಂಘಟಿತ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಬೇಕು. ಕನ್ನಡಕ್ಕಾಗಿ ಆಧುನಿಕ ತಂತ್ರಜ್ಞಾನದ ಉಪಯೋಗ ಮಾಡುತ್ತಿರುವುದು ಪ್ರಶಂಸನೀಯ ಎಂದು ಹಿರಿಯ ಪತ್ರಕರ್ತರಾದ ಶ್ರೀ ಅಚ್ಯುತ ಚೇವಾರು ಅಭಿಪ್ರಾಯಪಟ್ಟರು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಐಟಿ ಕ್ಲಬ್ ನ ಮುದ್ರಿತ ಹಾಗೂ ಆನ್ ಲೈನ್ ಸುದ್ದಿ ಸಾಪ್ತಾಹಿಕ ಪೈನಗರ್ ವಿಷನ್ ಈ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಶ್ಯಾಮಲ ಪಿ ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಜೇಶ್ವರ ಬಿ ಆರ್ ಸಿ ಯೋಜನಾಧಿಕಾರಿ ಶ್ರೀ ವಿಜಯಕುಮಾರ್  ಉತ್ತಮ ಕೆಲಸಗಳನ್ನು ಶ್ಲಾಘಿಸಬೇಕುಇಂತಹ ಮಾದರಿ ಕೆಲಸಗಳು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಪೈನಗರ್ ವಿಷನ್ ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಧ್ವಾನಿಷ್, ಕಾರ್ತಿಕ್, ಸಾತ್ವಿಕ್, ಅಝ್ಮಿ ಅವರಿಗೆ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪೈನಗರ್ ವಿಷನ್ ತಯಾರಿಸಿದ 2016/17ನೇ ಸಾಲಿನ ಶಾಲಾ ಮ್ಯಾಗಝಿನ್ ಹಾಗೂ 8ಸಿ ತರಗತಿಯ ಮ್ಯಾಗಝಿನ್ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜ ಬಿಡುಗಡೆ ಮಾಡಿದರು. ಪೈನಗರ್ ವಿಷನ್ ತಯಾರಿಸಿದ ಈ ವರ್ಷದ ಶಾಲಾ ಸಾಕ್ಷ್ಯ ಚಿತ್ರ ಡಿವಿಡಿ, ಮಕ್ಕಳ ಯಕ್ಷಗಾನ ಡಿವಿಡಿ, ಕಿರುಚಿತ್ರ ನಿರ್ದೇಶಕರಾದ ಶ್ರೀ ಮಂಜುನಾಥ್ ಪೆರ್ಲ ನಿರ್ದೇಶನದ 7ನೇ ತರಗತಿಯ ಕಲಿಕಾ ವಿಡಿಯೋ ಹಾಡಿನ ಡಿವಿಡಿಯನ್ನು ಶ್ರೀ ವಿಜಯಕುಮಾರ್ ಬಿಡುಗಡೆಗೊಳಿಸಿದರು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕಲೋತ್ಸವ ರಾಜ್ಯ ಮಟ್ಟದ ಪ್ರತಿಭೆ ಪ್ಲಸ್ ವನ್ ವಿಜ್ಞಾನ ವಿದ್ಯಾರ್ಥಿ ಆಶಯ.ಕೆ.ಎಂ., ರಾಜ್ಯ ಮಟ್ಟದ ವೃತ್ತಿಪರಿಚಯ ಮೇಳದ ಪ್ರತಿಭೆ ಪೈನಗರ್ ವಿಷನ್ ಪ್ರತಿನಿಧಿ 10ಎ ತರಗತಿಯ ರಜತ್ ಕುಮಾರ್ ಎ ಆರ್, ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ 10ಎ ತರಗತಿಯ ವಿದ್ಯಾಶ್ರೀ ಜೆ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತುಈ ಅಧ್ಯಯನ ವರ್ಷದ ಉತ್ತಮ ತರಗತಿ ನಾಯಕರಾದ ಆದರ್ಶ್, ವೈಷ್ಣವ್, ರಮ್ಯಶ್ರೀ, ರೀಮಾ ಡಿಸೋಜಾ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ಪ್ರತಿಭೆಗಳಾದ ವೈಭವಿ ಕೆ ಆರ್, ಶಿವಕುಮಾರ್ ಹಾಗೂ ಕಾರ್ತಿಕ್ ಕೆ ಅವರನ್ನು ಗೌರವಿಸಲಾಯಿತು. ಶಾಲಾ ಪ್ರಭಾರ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಎಸ್ ಆರ್ ಜಿ ಸಂಚಾಲಕರಾದ ಶ್ರೀ ರವೀಂದ್ರನಾಥ್ ಕೆ ಆರ್, ಸ್ಟಾಫ್ ಸೆಕ್ರೆಟರಿ ಶ್ರೀ ಕೃಷ್ಣಮೂರ್ತಿ ಎಂ ಎಸ್, ಆಚರಣಾ ಸಮಿತಿ ಸಂಚಾಲಕರಾದ ಶ್ರೀ ಶಶಿಕಲಾ ಕೆ, ಯುಪಿ ಎಸ್ ಆರ್ ಜಿ ಸಂಚಾಲಕರಾದ ಶ್ರೀ ಪ್ರವೀಣ್ ಕನಿಯಾಲ, ಪೈನಗರ್ ವಿಷನ್ ಅಂಕಣಕಾರರಾದ ಶ್ರೀ ಗೋಪಣ್ಣ ಕುರುಡುಪದವು, ಪಿಟಿಎ ಪದಾಧಿಕಾರಿಗಳಾದ ಶ್ರೀ ಕೃಷ್ಣ, ಶ್ರೀ ಇಬ್ರಾಹೀಂ ಪಾವಲುಕೋಡಿ ಶುಭಾಶಂಸನೆಗೈದರು. ಪೈನಗರ್ ವಿಷನ್ ಮುಖ್ಯ ಸಂಪಾದಕರಾದ ಚಂದ್ರಶೇಖರ.ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಪಾದಕ ಧ್ವಾನಿಷ್ ಸ್ವಾಗತಿಸಿ, ತರಗತಿ ಪ್ರತಿನಿಧಿ ಫಾತಿಮತ್ ಸಹನ ವಂದಿಸಿದರು. ಉಪಸಂಪಾದಕಿ ವೈಭವಿ.ಕೆ.ಆರ್, ಅಕ್ಷತಾ, ಶುಹೈಮಾ ಪ್ರಾರ್ಥನೆ ಹಾಡಿದರು. ಉಪಸಂಪಾದಕ ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು. (ಸಾತ್ವಿಕ್ ಎನ್ 7)

1 comment: