ಪೈನಗರ್
ವಿಷನ್ ನಿರ್ಮಾಣದ ಕಿರುಚಿತ್ರ
ಬಿಡುಗಡೆ
ಪೈವಳಿಕೆನಗರ, ಫೆ. 10: ಪೈನಗರ್ ವಿಷನ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊರಾಂಗಣ ಚಿತ್ರೀಕರಣದ ಮೂಲಕ ನಿರ್ಮಿಸಲಾದ ಇಂಗ್ಲೀಷ್ ಕಿರುಚಿತ್ರ ಎ ಲೋನ್ಲಿ ಚೈಲ್ಡ್ ಆಂಡ್ ದ ಪಪ್ಪಿ ಬಿಡುಗಡೆಗೊಂಡಿತು. ಶುಕ್ರವಾರ ಅಪರಾಹ್ನ 1.30ಕ್ಕೆ ಸರಿಯಾಗಿ ಶಾಲಾ ಮಾಧ್ಯಮ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಸಿಡಿ ಬಿಡುಗಡೆ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಪಿ ಸಭಾಧ್ಯಕ್ಷತೆ ವಹಿಸಿದ್ದರು. ಯುಪಿ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಪ್ರವೀಣ್ ಕನಿಯಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಹಾಗೂ ಎಸ್ ಆರ್ ಜಿ ಸಂಚಾಲಕರಾದ ಶ್ರೀ ರವೀಂದ್ರನಾಥ್ ಕೆ ಆರ್, ಶಾಲಾ ನೌಕರರ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ.ಎಸ್, ಆಂಗ್ಲ ವಿಭಾಗದ ಸ್ಮಿತಾ ಟೀಚರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಆಂಗ್ಲ ಚಿತ್ರ ನಿರ್ಮಾಣದಲ್ಲಿ ನಟಿಸಿದ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ 7ನೇ ತರಗತಿ ವಿದ್ಯಾರ್ಥಿಗಳಾದ ಸಾತ್ವಿಕ್ ಎನ್, ಮನಿಷ್ ಪಿ, ಮನೀಷ್ ಎಸ್, ಮಿಥುನ್, ಚೇತನ್ ರಾಜ್, ಹರ್ಷಿತಾ, ಅಝ್ಮೀ, ಸೃಜನ್ಯ, ವಿಘ್ನೇಷ್, ದಿನಕರ, ಅಭಿಲಾಷ್ ಎಂಬಿವರನ್ನು ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ನಂತರ ಕಥಾನಾಯಕ ಸಾತ್ವಿಕ್ ಸಂದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಕಿರುಚಿತ್ರ ಪ್ರದರ್ಶನವನ್ನು ಕಥಾ ನಾಯಕ ಹಾಗೂ ಪೈನಗರ್ ವಿಷನ್ ಪ್ರತಿನಿಧಿ ಸಾತ್ವಿಕ್ ಎನ್ ನೆರಳು ಚಿತ್ರವನ್ನು ಅನಾವರಣಗೊಳಿಸುವುದರ ಮೂಲಕ ಬಿಡುಗಡೆಗೊಳಿಸಿದರು. 7ಸಿ ತರಗತಿಯ ರಮ್ಯಶ್ರೀ ಸ್ವಾಗತಿಸಿ, 5ಸಿ ತರಗತಿಯ ಧನ್ಯಶ್ರೀ ವಂದಿಸಿದರು. 6ಎ ತರಗತಿಯ ಫಾತಿಮತ್ ಹನಾ ಹಾಗೂ ನಫೀಸತ್ ಮಿಸ್ರಿಯಾ ತಮ್ಮ ವಿಶೇಷ ಶೈಲಿಗಳಿಂದ ಕಾರ್ಯಕ್ರಮವನ್ನು ನಿರ್ವಹಿಸಿ ಜೀವ ತುಂಬಿದರು. ರೀಮಾ ಡಿಸೋಜಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಚಿತ್ರ ನಿರ್ದೇಶಕರಾದ ಶ್ರೀ ಮಂಜುನಾಥ್ ಪೆರ್ಲ ವತಿಯಿಂದ ಸಮಾರಂಭದಲ್ಲಿ ಸಿಹಿತಿಂಡಿ ಹಂಚಲಾಯಿತು.(ಕಾರ್ತಿಕ್ ಕೆ 9ಸಿ, ಚರಣ್ ರಾಜ್ ಎಸ್ 9ಸಿ, ದುರ್ಗಾ ಪ್ರಸಾದ್ ಜೆ 10ಸಿ, ವೈಶಾಖ್ ಕೆ 9ಎ, ವೈಭವಿ ಕೆ ಆರ್ 9ಎ, ಫಾತಿಮತ್ ಸಹನ ಪಿ 9ಎ, ಧನುಷ್ ಕುಮಾರ್ ಜೆ 8ಎ,ಧ್ವಾನಿಷ್ 9ಸಿ, ಸಾತ್ವಿಕ್ ಎನ್ 7ಎ)
No comments:
Post a Comment